Karnataka Times
Trending Stories, Viral News, Gossips & Everything in Kannada

Borewell: ರೈತರ ಬೋರ್ವೆಲ್ ಅಕ್ರಮ ಸಕ್ರಮ ಬಗ್ಗೆ ಹೊಸ ಅಪ್ಡೇಟ್!

advertisement

ರೈತರು ಈ ದೇಶದ ಪ್ರಮುಖ ಭಾಗವಾಗಿದ್ದು ರೈತರ ಅಭಿವೃದ್ಧಿ ಗಾಗಿ ಸರಕಾರವು ಹಲವು ರೀತಿಯ ಯೋಜನೆಗಳನ್ನು ರೂಪಿಸುತ್ತಲೇ ಬಂದಿದೆ.‌ಕೃಷಿಯಲ್ಲಿ ರೈತರು ಉತ್ತೇಜನ ಕಾಣಬೇಕು, ಹೆಚ್ಚು ಇಳುವರಿ ಪಡೆಯುವಂತಾಗಬೇಕು ಎಂದು ಸರಕಾರವು ಕೃಷಿ ತರಭೇತಿ, ಆಧುನಿಕ ಕೃಷಿ ಪದ್ದತಿ ಅಳವಡಿಕೆ, ವಿವಿಧ ಸೌಲಭ್ಯ ಗಳ ವಿತರಣೆ ಇತ್ಯಾದಿ ಮಾಡುತ್ತಿದೆ. ಅದೇ ರೀತಿ ಕೃಷಿಗೆ ವಿದ್ಯುತ್ ನ ಕೊರತೆ ಯಾಗಬಾರದು, ನೀರಿನ ಸಮಸ್ಯೆ ಉಂಟಾಗ ಬಾರದೆಂದು ರೈತರ ಅಕ್ರಮ ಸಕ್ರಮ ಮತ್ತು ತತ್ಕಾಲ್ ಯೋಜನೆಗಳ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಜಾರಿಮಾಡಿದೆ ಈ ಸೌಲಭ್ಯ ರೈತರಿಗೆ ಬಹಳಷ್ಟು ಸಹಾಯಕವಾಗಲಿದೆ.

ಬೆಳೆ ಹಾನಿ ಪರಿಹಾರ:

 

Image Source: The Northeast Affairs

 

ಈ ಭಾರಿ ಮಳೆ ಇಲ್ಲದೆ‌ ಕುಡಿಯಲು ನೀರಿಲ್ಲದಂತಹ ಪರಿಸ್ಥಿತಿ ‌ಕೂಡ‌ ನಿರ್ಮಾಣ ವಾಗಿದ್ದು ‌ಕೃಷಿಗಂತು ಬಹಳಷ್ಟು ತೊಂದರೆ ಯಾಗಿದೆ. ಹಾಗಾಗಿ ಬೆಳೆ ಹಾನಿಗೆ ಪರಿಹಾರವನ್ನು ‌ನೀಡಲು ಸರಕಾರ ಮುಂದಾಗಿದೆ. ಈಗಾಗಲೇ ಬೆಳೆ ವಿಮೆ ಮಾಡಿಸಿದ ರೈತರಿಗೆ ಮೊದಲ ಕಂತಿನ ಹಣವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದ್ದು ಎರಡನೇ ಕಂತಿನ ಹಣಕ್ಕೂ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹಾಗಾಗಿ ಆದಷ್ಟು ಬೇಗ ಎರಡನೇ ಕಂತಿನ ಹಣ ಜಮೆ ಮಾಡುವ ಕುರಿತಾಗಿ ಗುಡ್ ನ್ಯೂಸ್ ನೀಡಿದ್ದಾರೆ.

ಈ ಅಪ್ಡೇಟ್ ಬಂದಿದೆ:

ರೈತರಿಗೆ‌ ಕೃಷಿಗೆ ನೇರವಾಗುವ ನಿಟ್ಟಿನಲ್ಲಿ ರೈತರಿಗೆ ತಮ್ಮ ಹೊಲದ ಮೋಟಾರ್ ಗಳಿಗೆ ವಿದ್ಯುತ್ ಸರಿಯಾಗಿ ಸಿಗುತ್ತಿಲ್ಲ ಮತ್ತು‌ ಕೃಷಿಗೆ ಅಡ್ಡಿ ಯಾಗುತ್ತಿದೆ ಎಂದು ರೈತರಿಗೆ ನೆರವಾಗಲೆಂದು ರೈತರ ಅಕ್ರಮ ಸಕ್ರಮ ಮತ್ತು ತತ್ಕಾಲ್ ಯೋಜನೆಗಳ ಕೊಳವೆ ಬಾವಿ ನಿರ್ಮಾಣ ಮಾಡಲು ವಿದ್ಯುತ್ ಸಂಪರ್ಕ ಕಲ್ಪಿಸುವ ‌ಅವಕಾಶ ನೀಡಿದೆ.

ವಿದ್ಯುತ್ ಸಂಪರ್ಕ ಕಲ್ಪಿಸಬೇಕು:

advertisement

ತತ್ಕಾಲ್ ಮತ್ತು ಅಕ್ರಮ ಸಕ್ರಮ ಯೋಜನೆಗಳಲ್ಲಿ ಬಾಕಿ ಇರುವ ರೈತರ ಅರ್ಜಿ‌ ಪರಿಶೀಲನೆ ಮಾಡಿ ರಾಜ್ಯದ ಎಲ್ಲ ರೈತರ ಪಂಪ್ ಸೆಟ್ಟುಗಳಿಗೆ ಕೂಡಲೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಸಚಿವರು‌ ಆದೇಶ ನೀಡಿದ್ದಾರೆ.ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಒದಗಿಸಲು ಅಕ್ರಮ ಸಕ್ರಮ ಯೋಜನೆ ಕುರಿತು ರಾಜ್ಯ ಸರಕಾರದಿಂದ ಈ‌ ಮಾಹಿತಿ ಬಂದಿದೆ.

ಸಹಾಯಧನವೂ ಹೆಚ್ಚಳ:

 

Image Source: Justdial

 

ಈಗಾಗಲೇ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್ ಚಾಲಿತ ಕೃಷಿ ಪಂಪ್ ಸೆಟ್ಅನ್ನು (Agricultural Pump Set) ಅಳವಡಿಕೆ ಮಾಡಿಕೊಳ್ಳಲು ರೈತರಿಗೆ ಒದಗಿಸುವ ಮೊತ್ತವನ್ನು‌ ಹೆಚ್ಚು ಮಾಡುವ ಬಗ್ಗೆಯು‌ ತಿಳಿಸಲಾಗಿದೆ. ಈ ಯೋಜನೆಯಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉಚಿತ ಬೋರ್ವೆಲ್ (Free Borewell) ಅನ್ನು ಹಾಕಿಸಿ ಕೊಡಲು ಸರಕಾರವು ನಿರ್ಧಾರ ‌ಮಾಡಿದೆ.

ಈ ದಾಖಲೆ ಬೇಕು:

ಅರ್ಜಿ ಸಲ್ಲಿಕೆ ಮಾಡಲು ಇದಕ್ಕೆ ‌ಕೆಲವೊಂದು ದಾಖಲೆ ಅಗತ್ಯ ‌ಇದ್ದು

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್,
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ,
  • ಪಹಣಿ ಪತ್ರ
  • ನಿಮ್ಮ ರೇಷನ್ ಕಾರ್ಡ್ ಇತ್ಯಾದಿ ‌ದಾಖಲೆ ಬೇಕು.

advertisement

Leave A Reply

Your email address will not be published.