Karnataka Times
Trending Stories, Viral News, Gossips & Everything in Kannada

WhatsApp: ಕರ್ನಾಟಕದಲ್ಲಿ ವಾಟ್ಸಾಪ್ ಬಳಸುತ್ತಿರುವವರು ಈ ಕೆಲಸ ಮಾಡಬೇಡಿ! ಪೋಲೀಸರ ವಾರ್ನಿಂಗ್

advertisement

ರಾಜ್ಯದಲ್ಲಿ ಈಗಂತೂ ಎಲ್ಲಿ ಕೇಳಿದರೂ ಪೆನ್ ಡ್ರೈವ್ ನದ್ದೆ ಸುದ್ದಿ. ಚುನಾವಣೆಯ ಅವಧಿಯಲ್ಲಿಯೇ ಈ ರೀತಿ ಸುದ್ದಿ ಜಗತ್ ಜಾಹಿರವಾಗುತ್ತಿದ್ದು ಪ್ರಕರಣವು ರಾಜಕೀಯ ತಿರುವನ್ನು ಸಹ ಪಡೆದಿದೆ. ಲೋಕಸಭೆ ಚುನಾವಣೆಯ ವೇಳೆಯಲ್ಲಿಯೇ ಅಶ್ಲೀಲ ವೀಡಿಯೋ ಸಂಗ್ರಹ ಇರುವ ಪೆನ್ ಡ್ರೈವ್ ಅನ್ನು ಅಲಲ್ಲಿ ಎಸೆದಿದ್ದು ಸದ್ಯ ಹೆಸರಾಂತ ರಾಜಕೀಯ ಮನೆತನದ ಗೌರವಕ್ಕೆ ಇದೇ ವಿಚಾರ ದೊಡ್ಡ ಆಘಾತಕ್ಕೂ ಕೂಡ ಕಾರಣ ಮಾಡಿದೆ.

ಯಾವುದು ಈ ಪ್ರಕರಣ:

ಲೋಕಸಭೆ ಚುನಾವಣೆ ಆರಂಭಕ್ಕೂ ಮುನ್ನ ಹಾಸನ ಜಿಲ್ಲೆ ಸುತ್ತ ಮುತ್ತ ಜನ ಸೇರುವ ಪ್ರದೇಶದಲ್ಲಿ ಅನೇಕ ಕಡೆ ಪೆನ್ ಡ್ರೈವ್ (Pen Drive) ಸುದ್ದಿ ಹರಡ್ತಾ ಇದ್ದು ಅದರಲ್ಲಿ ಪ್ರಜ್ವಲ್ ರೇವಣ್ಣ ಅವರು ಇದ್ದಾರೆ ಎಂದು ಕೂಡ ಹೇಳಲಾಗುತ್ತಿದ್ದು ಅನೇಕ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಕೂಡ ಆರೋಪಿಸಲಾಗುತ್ತಿದೆ.

ಇದೇ ವಿಚಾರ ಈಗ ಜೆಡಿಎಸ್ ರಾಜಕೀಯ ನಾಯಕ, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಈಗ ಹೊಸ ತಲೆನೋವೊಂದು ಆರಂಭ ಆಗಲು ಕಾರಣವಾಗಿದೆ. ರೇವಣ್ಣ ಮತ್ತು ಅವರ ಮಗ ಪ್ರಜ್ವಲ್ ರೇವಣ್ಣ ವಿರುದ್ಧ ಅಶ್ಲೀಲ ವೀಡಿಯೋ ಸಂಬಂಧ ಪಟ್ಟಂತೆ ಪ್ರಕರಣ ದಾಖಲಾಗಿದ್ದು ಸದ್ಯ SIT ತಂಡ ಕೂಡ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ.

ಮಹತ್ವದ ಸೂಚನೆ:

 

advertisement

Image Source: NDTV

 

TV ಮತ್ತು ಇತರ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅನೇಕ ವಿಚಾರ ಹರಿದಾಡುತ್ತಲೇ ಇದೆ. ಈ ನಡುವೆ ಹಾಸನದ ಲೈಂಗಿಕ ದೌರ್ಜನ್ಯ ‌ಮತ್ತು ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡುತ್ತಿರುವ SIT ತಂಡವು ಸಾಮಾಜಿಕ ಜಾಲತಾಣದ ಬಳಕೆದಾರರಿಗೆ ಮಹತ್ವದ ಸೂಚನೆ ಒಂದನ್ನು ನೀಡಿದ್ದಾರೆ. ಅದರ ಪ್ರಕಾರ ವೀಡಿಯೋ ವನ್ಜು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಆಗಲಿದೆ ಎಂದು SIT ಇಂದ ಮಾಹಿತಿ ಸಿಕ್ಕಿದೆ.

ಪತ್ರಿಕಾ ಪ್ರಕಟನೆ:

SIT ಮುಖ್ಯಸ್ಥ VK ಸಿಂಗ್ ಅವರು ಪತ್ರಿಕಾ ಪ್ರಕಟನೆಯಲ್ಲಿ ಕೆಲವೊಂದು ವಿಚಾರದ ಬಗ್ಗೆ ತಿಳಿಸಿದ್ದರೆ. ವೀಡಿಯೋ ಹಂಚಿಕೆ ಪ್ರಮಾಣ ಅಧಿಕವಾಗುತ್ತಿದೆ ಇದರಿಂದಾಗಿ ವೀಡಿಯೋದಲ್ಲಿ ಇರುವ ಮಹಿಳೆಯರ ಗುರುತು ಪತ್ತೆ ಆಗಲಿದ್ದು ಅವರ ಗೌರವಕ್ಕೆ ಧಕ್ಕೆ ಆಗಲಿದೆ. ಹಾಗಾಗಿ ಯಾರೂ ಕೂಡ ವೀಡಿಯೋ ಹಂಚಿಕೊಳ್ಳಬಾರದು. ಸಂಘ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು, ವ್ಯಕ್ತಿಗಳು ಇಂತಹ ವೀಡಿಯೋ ಹಂಚಿಕೊಳ್ಳುವಂತಿಲ್ಲ. ಅಂತವರ ವಿರುದ್ಧ ಕಾನೂನು ಪ್ರಕಾರ ಶಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಹೆದರುವ ಅಗತ್ಯ ಇಲ್ಲ:

ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯರು ಸಾಕ್ಷಿಯಾಗಲು ಒಪ್ಪದೆ ಇರುವುದು ದೊಡ್ಡ ಸಮಸ್ಯೆ ಆಗುತ್ತಿದೆ. ಹಾಗಾಗಿ ಸಂತ್ರಸ್ತೆಯರು ದೂರನ್ನು ನೀಡಲು SIT ಕಚೇರಿಗೆ ಬರುವ ಅಗತ್ಯ ಇಲ್ಲ. ಸಹಾಯವಾಣಿ ಸಂಖ್ಯೆ 6360938947 ಸಂಖ್ಯೆಗೆ ಸಂಪರ್ಕಿಸುವಂತೆ ತಿಳಿಸಲಾಗಿದೆ. ಸಂತ್ರಸ್ತೆಯರಿಗೆ ಕೌನ್ಸಲಿಂಗ್ ಕೂಡ ಮಾಡಲಾಗುವುದು ಅದರ ಜೊತೆಗೆ ದೂರು ಕೊಟ್ಟವರ ವಿವರ ಗೌಪ್ಯವಾಗಿ ಇಡಲಾಗುವುದು ಎಂದು SIT ಈ ಬಗ್ಗೆ ಮಾಧ್ಯಮದ ‌ಮುಂದೆ ಮಾಹಿತಿ ನೀಡಿದ್ದಾರೆ.

advertisement

Leave A Reply

Your email address will not be published.