Karnataka Times
Trending Stories, Viral News, Gossips & Everything in Kannada

Loan: ಯಾವುದೇ ಗ್ಯಾಂರಂಟಿ ಇಲ್ಲದೇ ಸಿಗುತ್ತಿದೆ 10 ಲಕ್ಷ ರೂ ಲೋನ್! ಹೆಸರು ಸೇರಿಸಲು ಜನರ ಕ್ಯೂ

advertisement

ಕೇಂದ್ರ ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮುದ್ರಾ ಯೋಜನೆಯನ್ನು ಪ್ರಾರಂಭಿಸಿದ ನಂತರ ಪ್ರತಿ ಸಣ್ಣ ಹಾಗೂ ಮಾಧ್ಯಮ ವರ್ಗದ ವ್ಯಾಪಾರಿಗಳಿಗೆ ಹಾರ್ದಿಕ ಸಹಾಯವನ್ನು ನೀಡುವಂತಹ ಕೆಲಸವನ್ನು ಮಾಡುವುದಕ್ಕೆ ಪ್ರಾರಂಭ ಮಾಡಿತ್ತು. ಈ ಮೂಲಕ ತಮ್ಮ ವ್ಯಾಪಾರವನ್ನು ವಿಸ್ತೀರ್ಣ ಮಾಡಿಕೊಳ್ಳಲು ಬೇಕಾಗಿರುವಂತಹ ಸಾಲ (Loan) ಸೌಲಭ್ಯವನ್ನು ಪಡೆದುಕೊಂಡು ತಮ್ಮ ವ್ಯಾಪಾರವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಿಕೊಳ್ಳಬಹುದಾಗಿದೆ.

ಮುದ್ರಾ ಲೋನ್ (Mudra Loan)ಯೋಜನೆಯನ್ನು ಮೂರು ವಿಭಾಗದಲ್ಲಿ ವಿಭಾಗಿಸಲಾಗುತ್ತದೆ. ಶಿಶು ಕಿಶೋರ್ ಹಾಗು ತರುಣ ಯೋಜನೆಯ ಮೂರು ವಿಭಾಗದಲ್ಲಿ ಮುದ್ರಾ ಲೋನ್ ಯೋಜನೆಯನ್ನು ವಿಭಾಗಿಸಲಾಗುತ್ತದೆ. ಶಿಶು ಯೋಜನೆಯಲ್ಲಿ ಈಗಷ್ಟ ಹೊಸದಾಗಿ ಪ್ರಾರಂಭ ಮಾಡಿರುವಂತಹ ಜನರಿಗೆ ಸಾಲವನ್ನು ನೀಡಲಾಗುತ್ತದೆ. ಕಿಶೋರ ಯೋಜನೆಯಲ್ಲಿ ವ್ಯಾಪಾರವನ್ನು ಪ್ರಾರಂಭ ಮಾಡಿ ಒಂದು ವರ್ಷ ಆದವರಿಗೆ ಸಾಲವನ್ನು ನೀಡಲಾಗುತ್ತದೆ. ತರುಣ ಯೋಜನೆಯಲ್ಲಿ ವ್ಯಾಪಾರ ಪ್ರಾರಂಭ ಮಾಡಿ ಮೂರು ವರ್ಷ ಆದವರಿಗೆ ಮಾತ್ರ ಸಾಲವನ್ನು ನೀಡಲಾಗುತ್ತದೆ.

Image Source: Mint

advertisement

ಈ ಸಲ ಯೋಜನೆಯ ಲಾಭಗಳು

  • ಮುದ್ರಾ ಲೋನ್ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳುವುದು ಅತ್ಯಂತ ಸುಲಭ ಪ್ರಕ್ರಿಯೆಗಳನ್ನು ಒಳಗೊಂಡಿದೆ. ಇದನ್ನು ನೀವು ವೇಗವಾಗಿ ಪಡೆದುಕೊಳ್ಳಬಹುದು.
  • ಕಡಿಮೆ ಬಡ್ಡಿ ದರದಲ್ಲಿ ಈ ಸಾಲವನ್ನು ನೀಡುವ ಕಾರಣದಿಂದಾಗಿ ಯಾವ ಉದ್ಯಮಿಗಳು ತಮ್ಮ ಉದ್ಯಮಕ್ಕಾಗಿ ಈ ಸಾಲವನ್ನು ಪಡೆದುಕೊಂಡಿರುತ್ತಾರೆ ಅವರಿಗೆ ಬಡ್ಡಿಯ ಹೊರ ಕಡಿಮೆ ಆಗುತ್ತೆ.
  • ತಮ್ಮ ಉದ್ಯಮಕ್ಕೆ ಸಾಲವನ್ನು ಪಡೆದುಕೊಳ್ಳುವಂತಹ ಸ್ವಾತಂತ್ರ್ಯವನ್ನು ಈ ಯೋಜನೆ ಅಡಿಯಲ್ಲಿ ಉದ್ಯಮಗಳಿಗೆ ನೀಡಲಾಗಿರುತ್ತದೆ. ಇದರ ಜೊತೆಗೆ ತಮ್ಮ ಉದ್ಯಮವನ್ನು ಇನ್ನಷ್ಟು ಬೆಳೆಸುವಂತಹ ನಿಟ್ಟಿನಲ್ಲಿ ನಿರ್ಧರಿಸಲಾಗಿರುವಂತಹ ಹಣದವರೆಗೆ ಅವರು ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
  • ಈ ಸಲ ಸೌಲಭ್ಯಗಳು ನಿಮ್ಮ ವ್ಯಾಪಾರವನ್ನು ಇನ್ನಷ್ಟು ಬೆಳೆಸುವುದಕ್ಕೆ ಸಹಾಯ ಮಾಡುವ ಕಾರಣದಿಂದಾಗಿ ಅದನ್ನು ಮರುಪಾವತಿ ಮಾಡುವಂತಹ ಸಾಮರ್ಥ್ಯ ಕೂಡ ನಿಮ್ಮಲ್ಲಿ ಇರುತ್ತದೆ.
  • ಈ ಸಲ ಯೋಜನೆ ಅಡಿಯಲ್ಲಿ ಹೊಸ ಯಂತ್ರಗಳನ್ನು ತರುವುದು ಅಥವಾ ಹೊಸ ಕಚೇರಿಯನ್ನು ಸಿದ್ದಪಡಿಸುವುದಕ್ಕಾಗಿ ಕೂಡ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
  •  ಯಾವುದೇ ರೀತಿಯ ಗ್ಯಾರಂಟಿ ಇಲ್ಲದೆ ಮುದ್ರಾ ಲೋನ್ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾದಂತಹ ಅವಕಾಶವನ್ನು ನೀಡಲಾಗುತ್ತದೆ.

ಎಲ್ಲಾ ವಿಧಾನಗಳನ್ನು ಸರಿಯಾಗಿ ಪಾಲಿಸುವ ಮೂಲಕ ನೀವು ಈ ಮೇಲೆ ಹೇಳಿರುವಂತಹ ಲಾಭಗಳನ್ನು ಮುದ್ರಾ ಲೋನ್ ಯೋಜನೆ ಅಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಚಿಕ್ಕ ಹಾಗೂ ಮಧ್ಯಮ ವರ್ಗದ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸಬೇಕು ಅಥವಾ ದೊಡ್ಡದಾಗಿ ಮಾಡಬೇಕು ಎನ್ನುವಂತಹ ಕನಸು ಇರುತ್ತದೆ. ಅವರ ಕನಸುಗಳಿಗೆ ಹೆಗಲು ನೀಡುವಂತಹ ಕೆಲಸವನ್ನು ಕೇಂದ್ರ ಸರ್ಕಾರದ ಮುದ್ರಾ ಲೋನ್ ಯೋಜನೆ ಮಾಡುತ್ತಿದೆ.

advertisement

Leave A Reply

Your email address will not be published.