Karnataka Times
Trending Stories, Viral News, Gossips & Everything in Kannada

Indian Railway: ರೈಲಿನಲ್ಲಿ ಬಾತ್ರೂಮಿನ ಬಾಗಿಲು ಹಾಕಿಕೊಂಡು ಈ ಕೆಲಸ ಮಾಡ್ತಾ ಇದ್ರು! ಸಿಕ್ಕಿಬಿದ್ದಾಗ ಏನಾಯ್ತು ಗೊತ್ತಾ?

advertisement

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಸುದ್ದಿಗಳು ಕೇಳಿ ಬರುತ್ತಿದ್ದು ಸಾಕಷ್ಟು ವಿಚಿತ್ರ ಅನಿಸುವಂತಹ ಘಟನೆಗಳು ಕೂಡ ದಾಖಲಾಗಿವೆ. ಝಾನ್ಸಿ ರೈಲ್ವೆ ಮಂಡಳಿಯ ಮೂಲಕ ಈ ಬೇಸಿಗೆಗಾಲದ ಸಂದರ್ಭದಲ್ಲಿ ರೈಲ್ವೆ (Indian Railway)  ಭೋಗಿಗಳಲ್ಲಿ ಚೆಕಿಂಗ್ ನಡೆಸಲಾಗುತ್ತದೆ ಹಾಗೂ ಈ ಸಂದರ್ಭದಲ್ಲಿ ಅನಿಯಮಿತವಾಗಿ ಚಲಿಸುವಂತಹ ಪ್ರಯಾಣಿಕರನ್ನು ಹಾಗೂ ರೈಲಿನಲ್ಲಿ ನಿಷೇಧಿಸಲಾಗಿರುವಂತಹ ವಸ್ತುಗಳನ್ನು ಅಂದ್ರೆ ಧೂಮಪಾನ ಮದ್ಯಪಾನ ಮಾಡುವವರನ್ನು ಹಿಡಿದು ಫೈನ್ ಹಾಕುವಂತಹ ಕೆಲಸಗಳು ನಡೆಯುತ್ತಿದೆ. ಈಗಾಗಲೇ 50,000 ಹೆಚ್ಚಿನ ಜನರನ್ನು ಹಿಡಿಯಲಾಗಿದ್ದು 3.52 ಕೋಟಿಗೂ ಹೆಚ್ಚಿನ ದಂಡವನ್ನು ವಸೂಲು ಮಾಡಲಾಗಿದೆ.

ಇದರಲ್ಲಿ ಸಾಕಷ್ಟು ಜನರು ಧೂಮಪಾನ ಹಾಗೂ ತಂಬಾಕು ಗುಟ್ಕಾಗಳನ್ನು ಉಪಯೋಗಿಸಿಕೊಂಡು ರೈಲಿನಲ್ಲಿ ಶುಚಿತ್ವವನ್ನು ಹಾಳು ಮಾಡುವವರನ್ನು ಕೂಡ ಬಂಧಿಸಲಾಗಿದೆ‌. ಇದೇ ರೀತಿ ರೈಲಿನ ಬಾತ್ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗಳನ್ನು ಈಗ ಬಂಧಿಸಲಾಗಿದೆ.

ರೈಲಿನ ಬಾತ್ರೂಮ್ ತೆಗೆದ್ ನೋಡಿದ ಟಿಟಿಗೆ ಕಾದಿತ್ತು ಶಾಕ್

advertisement

ಈ ಮೇಲೆ ಹೇಳಿರುವಂತಹ ಅಭ್ಯಾಸ ಅನ್ನೋದು ಎಲ್ಲಾ ಕಡೆಗಳಲ್ಲಿ ಈಗ ಹರಿದಾಡುತ್ತಿದೆ. ಇದೇ ರೀತಿಯಲ್ಲಿ ರೈಲಿನ ಭೋಗಿಯಲ್ಲಿ ಬಾಗಿಲನ್ನು ಕಟಕಟಾಯಿಸಿದಾಗ ಮೊದಲಿಗೆ ಬಾಗಿಲನ್ನು ಸರಿಯಲಿಲ್ಲ ನಂತರ ಬಾಗಿಲು ತೆರೆದಾಗ ಬಾತ್ರೂಮಿನ ಒಳಗಿಲ್ಲ ಸಿಗರೇಟ್ ನ ಹೊಗೆ ತುಂಬಿಕೊಂಡಿತ್ತು. ಕೂಡಲೇ ಈಗ ಅವರನ್ನು ಹಿಡಿದು ಕಂಬಿಯ ಹಿಂದಕ್ಕೆ ತಳ್ಳಲಾಗಿದ್ದು ಅವರ ವಿರುದ್ಧ ಫೈನ ಕೂಡ ವಸೂಲು ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

Image Source: Times Now

ಏಪ್ರಿಲ್ ತಿಂಗಳಿನಲ್ಲಿ 1011 ಪ್ರಕರಣಗಳ ಮೂಲಕ 7.75 ಲಕ್ಷ ರೂಪಾಯಿ ದಂಡವನ್ನು ವಸೂಲು ಮಾಡಲಾಗಿದೆ. ಇನ್ನು ಯಾವುದೇ ಕಾರಣ ಇಲ್ಲದೆ ರೈಲಿನ ಚೈನ್ ಎಳೆದಿರುವುದಕ್ಕಾಗಿ 230 ಜನರ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ. ಇವರಿಂದ 14,820ಗಳ ಫೈನ್ ಅನ್ನು ವಸೂಲು ಮಾಡಲಾಗಿದೆ. ರೈಲ್ವೆ ಭೋಗಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಕೆಲಸ ಹೆಚ್ಚಾಗುತ್ತಿದ್ದು ರೈಲನ್ನು ಬಳಸುವಂತಹ ಜನರ ಸಂಖ್ಯೆ ಕೂಡ ಸಾಮಾನ್ಯ ನಿಗದಿಪಡಿಸಿರುವಂತಹ ಸಂಖ್ಯೆಗಿಂತ ಹೆಚ್ಚಾಗಿದೆ ಎಂಬುದು ಕೂಡ ಈ ಮೂಲಕ ನಾವು ತಿಳಿದುಕೊಳ್ಳಬೇಕಾಗಿರುವ ವಿಚಾರ.

ಇದು ಕೇವಲ ಉತ್ತರ ಭಾರತದಲ್ಲಿ ಮಾತ್ರ ಅಲ್ಲದೆ ಕರ್ನಾಟಕ ರಾಜ್ಯದಲ್ಲಿ ಕೂಡ ಮುಂದಿನ ದಿನಗಳಲ್ಲಿ ನಾವು ಜಾರಿಯಾಗುವುದನ್ನು ನೋಡಬಹುದಾಗಿದೆ. ಈ ರೈಲ್ವೆ ನಿಯಮಗಳನ್ನು ರೈಲ್ವೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿದೆ ಹೋದಲ್ಲಿ ನೀವು ಕೂಡ ದೊಡ್ಡ ಮಟ್ಟದಲ್ಲಿ ಹಣವನ್ನ ದಂಡದ ರೂಪದಲ್ಲಿ ಕಟ್ಟಬೇಕಾಗಿ ಬರಬಹುದು ಎಂಬುದನ್ನು ಕೂಡ ನೆನಪಿನಲ್ಲಿಟ್ಟುಕೊಳ್ಳಿ. ಹೀಗಾಗಿ ರೈಲಿನ ಸ್ವಚ್ಛತೆಯನ್ನು ಕಾಪಾಡುವಂತಹ ಕೆಲಸವನ್ನು ಮಾಡಿ.

advertisement

Leave A Reply

Your email address will not be published.