Karnataka Times
Trending Stories, Viral News, Gossips & Everything in Kannada

Babar Azam: ಬುಮ್ರಾ ಅಲ್ಲ ಈ ಬೌಲರ್ ಗೆ 10 ರನ್ ಹೊಡೆಯೋದು ಕಷ್ಟ ಎಂದ ಬಾಬರ್ ಆಜಮ್

advertisement

ಪಾಕಿಸ್ತಾನ ಕ್ರಿಕೆಟಿಗ ಆಗಿರುವಂತಹ ಬಾಬರ್ ಅಜಂ (Babar Azam) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಅಗ್ರ ಕ್ರಮ ಅಂಕದ ಬ್ಯಾಟಿಂಗ್ ಸ್ಟಾರ್ ಆಗಿದ್ದಾರೆ. ಭಾರತ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ (Virat Kohli) ಅವರು ಹೇಗಿರ್ತಾರೊ ಅದೇ ರೀತಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಕೂಡ ಬಾಬರ್ ಅವರನ್ನ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳು ಇಷ್ಟ ಪಡ್ತಾರೆ. ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಬ್ಯಾಟಿಂಗ್ ಕ್ರಮ ಅಂಕದಲ್ಲಿ ಬಾಬರ್ ಅತ್ಯಂತ ಬಲಿಷ್ಠ ಆಟಗಾರನಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇತ್ತೀಚಿಗಷ್ಟೇ ಅವರು ನೀಡಿರುವಂತಹ ಒಂದು ಉತ್ತರ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕೊನೆಯ ಓವರ್ ನಲ್ಲಿ 10 ರನ್ ಇದ್ರೆ ಬೂಮ್ರ ಬದಲಿಗೆ 21 ವರ್ಷದ ಈ ಬೌಲರ್ ನನ್ನ ಆಯ್ಕೆ ಮಾಡ್ತಾರಂತೆ ಬಾಬರ್:

 

Image Source: Business Recorder

 

ನಮ್ಮ ಭಾರತೀಯ ಕ್ರಿಕೆಟ್ ತಂಡದ ಹೆಮ್ಮೆಯ ಬೌಲರ್ ಆಗಿರುವಂತಹ ಬೂಮ್ರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಸಾಕಷ್ಟು ವರ್ಷಗಳಿಂದಲೂ ಅಂತರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಕಾಣಿಸಿಕೊಳ್ತಾರೆ. ಕೊನೆ ಓವರ್ನಲ್ಲಿ ಅವರ ಮುಂದೆ ಯಾರೇ ಇದ್ದರೂ ಕೂಡ ಒತ್ತಡ ಎನ್ನುವುದು ಬ್ಯಾಟ್ಸ್ಮನ್ ಮೇಲೆ ಇರುತ್ತೆ ಹೊರತು ಬೂಮ್ರ ಮೇಲೆ ಇರೋದಕ್ಕೆ ಸಾಧ್ಯನೇ ಇಲ್ಲ. ಅಷ್ಟರ ಮಟ್ಟಿಗೆ ತಮ್ಮ ಯಾರ್ಖರ್ ಬೌಲಿಂಗ್ ಮೂಲಕ ಬೂಮ್ರ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮದೇ ಆದಂತಹ ಹವಾ ಸೃಷ್ಟಿ ಮಾಡಿದ್ದಾರೆ.

advertisement

ಇತ್ತೀಚಿಗಷ್ಟೇ ಬಾಬರ್ (Babar Azam) ಅವರಿಗೆ ಸಂದರ್ಶನ ಒಂದರಲ್ಲಿ ಒಂದು ಪರಿಸ್ಥಿತಿಯನ್ನು ನೀಡಿ ಅದರಲ್ಲಿ ಯಾವ ಬೌಲರ್ ಅನ್ನು ನೀವು ಆಯ್ಕೆ ಮಾಡುತ್ತೀರಿ ಎಂಬುದಾಗಿ ಕೇಳಲಾಗುತ್ತದೆ. ಆ ಸಂದರ್ಭದಲ್ಲಿ ಅವರು ನೀಡಿದ ಉತ್ತರ ನಿಜಕ್ಕೂ ಕೂಡ ಕ್ರಿಕೆಟ್ ಅಭಿಮಾನಿಗಳಲ್ಲಿ ಆಶ್ಚರ್ಯವನ್ನು ಮೂಡಿಸಿದೆ ಎಂದು ಹೇಳಬಹುದಾಗಿದೆ. ಒಬ್ಬ ಕ್ರಿಕೆಟ್ ಅಭಿಮಾನಿಯಾಗಿ ನೀವು ಕೂಡ ಈ ಉತ್ತರವನ್ನು ಕೇಳಿದರೆ ಬೆರಗಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

 

Image Source: Hindustan Times

 

ಹೌದು ಇಲ್ಲಿ ಸಂದರ್ಶಕರು ಬಾಬರ್ ಅವರ ಬಳಿ ಕೊನೆಯ ಓವರ್ ನಲ್ಲಿ 10 ರನ್ನುಗಳನ್ನು ಎದುರಾಳಿ ತಂಡದ ಬ್ಯಾಟ್ಸ್ಮನ್ ಬಾರಿಸಬೇಕು ಆಗ ನೀವು ಯಾರನ್ನು ಆಯ್ಕೆ ಮಾಡುತ್ತೀರಿ ಅನ್ನೋದಾಗಿ ಹೇಳಿ ಬೂಮ್ರಾ (Jasprit Bumrah) ಹಾಗೂ ಪಾಕಿಸ್ತಾನದ ಯುವ ಬೌಲರ್ ಆಗಿರುವಂತಹ ನಸೀಮ್ ಶಾ (Naseem Shah) ಅವರನ್ನು ಆಯ್ಕೆ ರೂಪದಲ್ಲಿ ನೀಡ್ತಾರೆ. ಆ ಸಂದರ್ಭದಲ್ಲಿ ಬಾಬರ್ ಅವರು 21 ವರ್ಷದ ನಸಿಂ ಅವರನ್ನು ಆಯ್ಕೆ ಮಾಡುತ್ತಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಕೆಲವೊಂದು ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳು ಕೂಡ ಈ ಆಯ್ಕೆಯನ್ನು ಪ್ರಶ್ನಿಸುವಂತಹ ಕೆಲಸವನ್ನು ಮಾಡಿದ್ದಾರೆ.

 

advertisement

Leave A Reply

Your email address will not be published.