Karnataka Times
Trending Stories, Viral News, Gossips & Everything in Kannada

Sharma: ಐಪಿಎಲ್ ನಲ್ಲಿರುವ ಹನ್ನೊಂದು ಶರ್ಮ ಹೆಸರಿನ ಆಟಗಾರರು ಇವರೇ ನೋಡಿ! ಇವರನ್ನೇ ಒಂದು ತಂಡ ಮಾಡಬಹುದು!

advertisement

ಫುಟ್ಬಾಲ್ ಬಿಟ್ಟರೆ ಅತ್ಯಂತ ಜನಪ್ರಿಯ ಕ್ರೀಡೆ ಯಾವುದು ಅಂತ ಕೇಳಿದರೆ ಕೇಳಿ ಬರುವಂತಹ ಒಂದೇ ಒಂದು ಉತ್ತರ ಅಂದ್ರೆ ಅದು ಕ್ರಿಕೆಟ್. ಆಂಗ್ಲದಿಂದ ಪ್ರಾರಂಭವಾಗಿರುವಂತಹ ಈ ಕ್ರೀಡೆ ಈಗಾಗಲೇ ಇಡೀ ವಿಶ್ವವನ್ನು ವ್ಯಾಪಿಸುವ ಮಟ್ಟಕ್ಕೆ ಜನಪ್ರಿಯವಾಗಿ ನಿಂತಿದೆ ಅದರಲ್ಲೂ ವಿಶೇಷವಾಗಿ ಕ್ರಿಕೆಟ್ ಅನ್ನೋದು ಭಾರತದಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಅದರಲ್ಲಿ ವಿಶೇಷವಾಗಿ 2008ರಿಂದ ಪ್ರಾರಂಭ ಆಗಿರುವಂತಹ ಇಂಡಿಯನ್ ಪ್ರೀಮಿಯರ್ ಲೀಗ್ ಅಂದರೆ ಐಪಿಎಲ್ (IPL) ಮೂಲಕ ಕ್ರಿಕೆಟ್ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಯಿತು.

ಇನ್ನು ಈ ಬಾರಿಯ ಐಪಿಎಲ್ ನಲ್ಲಿ ನೋಡೋದಾದ್ರೆ ಒಂದು ಸರ್ ನೇಮಿನ ಆಟಗಾರರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಹೌದು ನಾವು ಮಾತಾಡ್ತಿರೋದು ಶರ್ಮ ಹೆಸರಿನ ಆಟಗಾರರ ಬಗ್ಗೆ. ಈ ಹೆಸರನ್ನು ಕೇಳಿದ ತಕ್ಷಣ ನಮಗೆ ಮೊದಲಿಗೆ ನೆನಪಿಗೆ ಬರೋದು ನಮ್ಮ ಭಾರತೀಯ ಕ್ರಿಕೆಟ್ ತಂಡದ ನಾಯಕ ಆಗಿರುವಂತಹ ರೋಹಿತ್ ಶರ್ಮ (Rohit Sharma). ರೋಹಿತ್ ಶರ್ಮಾ ಸೇರಿದಂತೆ ಶರ್ಮಾ ಸರ್ ನೇಮ್ ಅನ್ನು ಹೊಂದಿರುವ 11 ಜನರ ಆಟಗಾರರ ತಂಡವನ್ನು ಇವತ್ತಿನ ಈ ಲೇಖನದಲ್ಲಿ ಕಟ್ಟೋಣ ಬನ್ನಿ.

ಈ ಬಾರಿ ಐಪಿಎಲ್ ಆಡುತ್ತಿರುವ ಶರ್ಮ ಹೆಸರಿನ ಆಟಗಾರರ ತಂಡ:

 

Image Source: IndiaToday

 

advertisement

ಮೊದಲಿಗೆ ಮುಂಬೈ ತಂಡದ ನಾಯಕ ಆಗಿರುವಂತಹ ರೋಹಿತ್ ಶರ್ಮ (Rohit Sharma) ಅವರು ಕಾಣಿಸಿಕೊಳ್ಳುತ್ತಾರೆ. ಅದಾದ ನಂತರ ಹೈದರಾಬಾದ್ (SRH) ತಂಡದ ಮತ್ತು ಬಾಟಗಾರ ಅಭಿಷೇಕ್ ಶರ್ಮ (Abhishek Sharma) ಅವರು ಕೂಡ ಈ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ.

ಮುಂಬೈ (MI) ತಂಡದ ಮತ್ತು ಆಟಗಾರ ಶಿವಾಲಿಕ್ ಶರ್ಮಾ (Shivalik Sharma) ಇಲ್ಲಿ ಕಾಣಿಸಿಕೊಳ್ಳುತ್ತಾರೆ. ನಾಲ್ಕನೇ ಬ್ಯಾಟ್ಸ್ಮನ್ ರೂಪದಲ್ಲಿ ಪಂಜಾಬ್ ತಂಡದ ಅಶುತೋಷ್ ಶರ್ಮ (Ashutosh Sharma) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರೂಪದಲ್ಲಿ ಪಂಜಾಬ್ ತಂಡದ ಮತ್ತೊಬ್ಬ ಆಟಗಾರ ಜಿತೇಶ್ ಶರ್ಮ (Jitesh Sharma) ಕೂಡ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಆಲ್ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಆಟಗಾರರು ಅಂದರೆ ಹಿಮಾಮ್ಶು ಶರ್ಮ (Himanshu Sharma) ಹಾಗೂ ಕರಣ್ ಶರ್ಮ (Karan Sharma).

 

Image Source: Cricbuzz

 

ಮತ್ತೊಬ ಸ್ಪಿನ್ ಬೌಲಿಂಗ್ ರೂಪದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಸುಯಶ್ ಶರ್ಮ ಕಾಣಿಸಿಕೊಳ್ಳುತ್ತಾರೆ. ಫಾಸ್ಟ್ ಬೌಲಿಂಗ್ ವಿಭಾಗದಲ್ಲಿ ದೆಹಲಿ ತಂಡದ ಇಶಾಂತ್ ಶರ್ಮ (Ishant Sharma) ಅವರು ಮುಂಚೂಣಿ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ ಅವರ ಜೊತೆಗೆ ರಾಜಸ್ಥಾನ್ ರಾಯಲ್ಸ್ (RR) ತಂಡದಲ್ಲಿ ಆಡುತ್ತಿರುವ ಸಂದೀಪ್ ಶರ್ಮಾ ಅವರು ಕೂಡ ಈ ಲಿಸ್ಟಿನಲ್ಲಿ ಕಂಡುಬರುತ್ತಾರೆ.

11ನೇ ಆಟಗಾರನಾಗಿ ಗುಜರಾತ್ ತಂಡದ ಪ್ರಮುಖ ಬೌಲರ್ ಆಗಿರುವ ಮೋಹಿತ್ ಶರ್ಮ (Mohit Sharma) ಅವರು ಕಾಣಿಸಿಕೊಳ್ಳುತ್ತಾರೆ. ಇದು ಶರ್ಮ ಹೆಸರಿನ ಆಟಗಾರರ ಆಡುವ ಹನ್ನೊಂದರ ಬಳಗ ಆಗಿರುತ್ತದೆ. ಈ ತಂಡದ ಕೋಚ್ ಯಾರು ಆಗಬಹುದು ಅನ್ನೋದನ್ನ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

advertisement

Leave A Reply

Your email address will not be published.