Karnataka Times
Trending Stories, Viral News, Gossips & Everything in Kannada

Marriage Rules: ಹತ್ತಿರದ ಸಂಬಂಧಿಕರೊಂದಿಗೆ ಮದುವೆಯಾಗಲು ಯೋಚಿಸುತ್ತಿದ್ದೀರಾ? ಹಾಗಾದ್ರೆ ಇವತ್ತೇ ಕ್ಯಾನ್ಸಲ್ ಮಾಡಿ! ಹೊಸ ರೂಲ್ಸ್

advertisement

ನಮ್ಮ ಹಿಂದೂ ಸಂಪ್ರದಾಯದಲ್ಲಿ ಸಂಬಂಧಿಕರಿಗೆ ಮಗ ಅಥವಾ ಮಗಳನ್ನು ಕೊಟ್ಟು ಮದುವೆ ಮಾಡಿಕೊಡುವಂತ ಪದ್ಧತಿ ಇದೆ. ಆದರೆ ಬಹುತೇಕರಿಗೆ ಕಾನೂನಿನ ನಿಯಮಗಳು ಗೊತ್ತಿಲ್ಲ. ಹೌದು ತಂದೆ ತಾಯಿಯ ಅಥವಾ ತಾತನಿಂದ ಮೂರು ತಲೆಮಾರು ನಾಲ್ಕು ತಲೆಮಾರಿನ ಹತ್ತಿರದ ಸಂಬಂಧಿಕರೊಂದಿಗೆ ಇನ್ನು ಮುಂದೆ ಮದುವೆ ಮಾಡಿಕೊಳ್ಳುವ ಹಾಗಿಲ್ಲ. ಇದು ಭಾರತೀಯ ವಿವಾಹ ಕಾಯ್ದೆ (Indian Marriage Act) ಸೆಕ್ಷನ್ ಐದರ ಪ್ರಕಾರ ಕಾನೂನುಬಾಹಿರ.

ಹಿಂದೆಲ್ಲ ಬೇರೆ ಕುಟುಂಬವನ್ನು ಹುಡುಕಿ ಮದುವೆ (Marriage) ಮಾಡಿಕೊಳ್ಳುವ ತಾಪತ್ರೆಯ ಯಾರಿಗೆ ಬೇಕೆಂಬ ಕಾರಣಕ್ಕೆ ತಮ್ಮ ಸ್ವಂತದ ಸಂಬಂಧಿಕರೊಂದಿಗೆ (Close Relative) ಮದುವೆ ಮಾಡಿಕೊಡಲಾಗುತ್ತಿತ್ತು. ಅದರಲ್ಲೂ ಮುಖ್ಯವಾಗಿ ತಾಯಿಯಾದವಳು ತನ್ನ ಸ್ವಂತ ಮಗಳನ್ನು ತಮ್ಮನಿಗೆ ನೀಡಿ ಮದುವೆ ಮಾಡಿಕೊಡುತ್ತಿದ್ದಳು. ಅಲ್ಲದೆ ಹೋದರೆ ಅತ್ತೆ ಮಗ, ಮಾವನ ಮಗಳು ಹೀಗೆ ಮುಂತಾದ ಹತ್ತಿರದ ಸಂಬಂಧಿಕರಿಗೆ ನೀಡಿ ಮದುವೆ ಮಾಡಿಕೊಡಲಾಗುತ್ತಿತ್ತು.

ಸಂಬಂಧಿಕರನ್ನು ಮದುವೆಯಾಗುವುದು ಕಾನೂನುಬಾಹಿರ:

 

Image Source: The Wed Cafe

 

advertisement

ಆದರೆ ಇದನ್ನು ಭಾರತೀಯ ವಿವಾಹ (Marriage) ಕಾಯ್ದೆಯಲ್ಲಿ ಕಾನೂನುಬಾಹಿರಗೊಳಿಸಿದ್ದು, ಇದನ್ನು ಪಾಲಿಸಿದರೆ ಶಿಕ್ಷೆಗೆ ಗುರಿಯಾಗುತ್ತೀರಾ. ಹೌದು ಸ್ನೇಹಿತರೆ ಬಹಳ ಹತ್ತಿರದ ರಿಲೇಶನ್ ನಲ್ಲಿ ಮದುವೆ ಮಾಡಿಕೊಳ್ಳುವುದರಿಂದ ಸಾಕಷ್ಟು ಜನರಿಗೆ ಸಮಸ್ಯೆಗಳು ಎದುರಾಗುತ್ತದೆ ಅದರಲ್ಲೂ ರಕ್ತದ ಸಂಬಂಧಿಕರೊಂದಿಗೆ (Blood Relatives) ಮದುವೆ ಮಾಡಿಕೊಂಡರೆ ಮುಂದೆ ಹುಟ್ಟುವಂತಹ ಮಕ್ಕಳು ಅಂಗವಿಕಲರಾಗಿ ಅಥವಾ ಬುದ್ಧಿಮಾಂದ್ಯತೆ ಕಾಯಿಲೆಯಿಂದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂಬ ಸತ್ಯ ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

ಹೀಗಾಗಿ ತಮ್ಮ ಹತ್ತಿರದ ಕ್ಲೋಸ್ ರಿಲೇಶನ್ ನಲ್ಲಿ ಯಾವುದೇ ಭಾರತೀಯ ನಾಗರಿಕರು ಮದುವೆ ಮಾಡಿಕೊಳ್ಳುವ ಹಾಗಿಲ್ಲ, ಅಪ್ಪಿತಪ್ಪಿ ಮದುವೆ ಆದಲ್ಲಿ ಇದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಹೀಗೆ ನೀವು ನಿಮ್ಮ ಹತ್ತಿರದ ಸಂಬಂಧಿಕರನ್ನು ಮದುವೆ ಮಾಡಿಕೊಂಡು ಕೋರ್ಟಿಗೆ ಇದನ್ನು ಮಾನ್ಯ ಗೊಳಿಸುವಂತೆ ಅರ್ಜಿ ಕೋರಿದರೆ ಅದು ಸಾಧ್ಯವಾಗುವುದಿಲ್ಲ. ವಿವಾಹ ಕಾಯ್ದೆ ಸೆಕ್ಷನ್ 5ರ ಅಡಿಯಲ್ಲಿ (Marriage Act Section 5) ಇದನ್ನು ಬಾಹಿರವೆಂದು ಪರಿಗಣಿಸಲಾಗಿದೆ.

ಹೀಗೆ ಮಾಡಿದ್ರೆ ಅನುವಂಶಿಯತೆ ಸಮಸ್ಯೆ ತಪ್ಪಿದ್ದಲ್ಲ:

ಹೀಗಾಗಿ ಮದುವೆ (Marriage) ಯಾಗಲು ನಿರ್ಧರಿಸಿರುವವರು ತಮ್ಮ ಹತ್ತಿರದ ಸಂಬಂಧಿಕರು, ಬಂಧುಗಳು ಅಥವಾ ನೆಂಟರಿಷ್ಟರ ಸಂಬಂಧವನ್ನು ನೋಡಿ ಮದುವೆಯಾಗುವ ಬದಲು ಬೇರೆ ಕುಟುಂಬವನ್ನು ಹುಡುಕಿ ಆ ಮನೆಯ ವ್ಯಕ್ತಿಯನ್ನು ವರಿಸುವುದರಿಂದ ನಿಮ್ಮ ಸಂಸಾರಕ ಜೀವನ 90% ಸಂತೋಷಕರವಾಗಿರಲಿದೆ ಹಾಗೂ ಮುಂದೆ ಹುಟ್ಟುವಂತಹ ಮಕ್ಕಳಿಗೂ ಕೂಡ ಯಾವುದೇ ರೀತಿಯ ಅನುವಂಶಿಯತೆ ಅಥವಾ ಜೆನೆಟಿಕ್ ಸಮಸ್ಯೆ ಉಂಟಾಗುವುದಿಲ್ಲ.

advertisement

Leave A Reply

Your email address will not be published.