Bank Account: ಏಕಕಾಲದಲ್ಲಿ ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಅಕೌಂಟ್ ಹೊಂದಿರಬಹುದು! ಇಲ್ಲಿದೆ ನಿಯಮಾವಳಿ
ಹಣಕಾಸಿನ ವ್ಯವಸ್ಥೆಯನ್ನು ಅರ್ಥಬದ್ಧವಾಗಿ ಜಾರಿಗೆ ತರಲು ಬ್ಯಾಂಕಿನ ವ್ಯವಸ್ಥೆಗಳು ಬಹಳ ಸಹಕಾರಿ ಆಗಲಿದೆ ಎಂದು ಹೇಳಬಹುದು. ಬ್ಯಾಂಕಿನಲ್ಲಿ ಹಣಕಾಸಿನ ವಹಿವಾಟು (Cash Transactions) ಮಾಡಲು ಅನೇಕ ಸಂಖ್ಯೆಯಲ್ಲಿ ಗ್ರಾಹಕರು ಖಾತೆ ತೆರೆಯಬೇಕು. ಬ್ಯಾಂಕಿನಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾದಂತೆ ವಹಿವಾಟುಗಳ ಸ್ಥಿತಿ ಕೂಡ ಉತ್ತಮವಾಗಲಿದೆ. ಹಾಗೆಂದು ಹಣಕಾಸಿನ ವ್ಯವಹಾರ ದೃಷ್ಟಿಯಿಂದ ಈಗ ಒಬ್ಬರ ಹೆಸರಲ್ಲೇ 4-5 ಬ್ಯಾಂಕಿನ ಖಾತೆ ಇರಲಿದೆ. ಹಾಗಾದರೆ ಒಬ್ಬರು ಎಷ್ಟು ಬ್ಯಾಂಕ್ ಖಾತೆ (Bank Account) ಹೊಂದಬಹುದು ಈ ಬಗ್ಗೆ ಕಾನೂನಿನ ನಿಯಮ ಏನು? ಎಂಬ ಇತ್ಯಾದಿ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ.
ಸಣ್ಣ ಪುಟ್ಟ ಕೆಲಸ ಕಾರ್ಯದಿಂದ ಹಿಡಿದು ದೊಡ್ಡ ದೊಡ್ಡ ವಹಿವಾಟಿನ ವರೆಗೆ ಕೂಡ ಬ್ಯಾಂಕ್ ನ ಕೆಲಸ ಕಾರ್ಯಗಳನ್ನು ಪಾಲಿಸುವುದು ಬಹಳ ಮುಖ್ಯವಾಗಲಿದೆ. ವೈಯಕ್ತಿಕ ಕಾರಣಕ್ಕೆ, ವ್ಯವಹಾರದ ಉದ್ದೇಶಕ್ಕಾಗಿ ಅನೇಕ ಸಂದರ್ಭಗಳಲ್ಲಿ ಬ್ಯಾಂಕ್ ಖಾತೆ (Bank Account) ತೆರೆಯಲಾಗುತ್ತದೆ ಆದರೆ ಸರಿಯಾದ ನಿರ್ವಹಣೆ ಮಾಡದೆ ಬ್ಯಾಂಕ್ ಖಾತೆಯ ವಹಿವಾಟು ಇಲ್ಲದಾಗಿ ಬಿಡುತ್ತದೆ. ಹಾಗಾದರೆ ನಾವು ಎಷ್ಟು ಬ್ಯಾಂಕ್ ಖಾತೆ ಕೂಡ ಹೊಂದಿರಬಹುದೇ ಈ ಬಗ್ಗೆ ನಿಯಮದಲ್ಲಿ ಏನಿದೆ ಎಂಬ ಇತ್ಯಾದಿ ಮಾಹಿತಿಯನ್ನು ನಾವಿಂದು ನಿಮಗೆ ಹೇಳಲಿದ್ದೇವೆ.
ನಿಯಮ ಇದೆಯಾ?
ಬ್ಯಾಂಕ್ ಖಾತೆ (Bank Account) ಯನ್ನು ಅನೇಕ ಉದ್ದೇಶಗಳಿಗಾಗಿ ತೆರೆದಿರಬಹುದು ಅದಕ್ಕೆ ಇಂತಿಷ್ಟು ಖಾತೆಯೇ ಬಳಸಬೇಕು ಎಂಬ ನಿಯಮ ಇದೆಯಾ ಕೇಳಿದರೆ ಖಂಡಿತಾ ಯಾವ ನಿಯಮವೂ ಇಲ್ಲ ಎನ್ನಬಹುದು. ಅಂದರೆ ಉಳಿತಾಯ ಖಾತೆ, ವೇತನಕ್ಕಾಗಿ ಖಾತೆ, ಚಾಲ್ತಿ ಖಾತೆ ಎಂಬ ಅನೇಕ ಪ್ರಕಾರ ಇದ್ದು ನೀವು ಎಷ್ಟು ಖಾತೆ ಕೂಡ ತೆರೆಯಬಹುದು ಆದರೆ ಅವುಗಳನ್ನು ಅಷ್ಟೇ ಉಪಯುಕ್ತವಾಗಿ ಬಳಕೆ ಕೂಡ ಮಾಡಬೇಕು. ಬ್ಯಾಂಕ್ ಖಾತೆ ತೆರೆಯಲು ಯಾವುದೇ ಮಿತಿ ಇಲ್ಲದಿದ್ದರೂ ಅದರ ಅಗತ್ಯ ನಿಮಗೆ ಇದೆ ಎಂದು ಕಂಡು ಬಂದರೆ ಮಾತ್ರವೇ ಬ್ಯಾಂಕ್ ಖಾತೆ (Bank Account) ತೆರೆಯುವುದು ಉತ್ತಮ ಎನ್ನಬಹುದು.
ಅನಾನುಕೂಲತೆ ಇದೆ:
ಹೆಚ್ಚಿನ ಬ್ಯಾಂಕ್ ಖಾತೆ ಹೊಂದಿರುವುದು ಕೆಲವರಿಗೆ ಪ್ರತಿಷ್ಠೆಯ ವಿಚಾರ ಎನಿಸಬಹುದು. ಆದರೆ ಬ್ಯಾಂಕ್ ಖಾತೆ ಹೊಂದಿರುವಷ್ಟೇ ಸುಲಭವಾಗಿ ಅದನ್ನು ನಿರ್ವಹಣೆ ಕೂಡ ಮಾಡಬೇಕು. ಅಂದರೆ ನೀವು ಹೆಚ್ಚಿನ ಬ್ಯಾಂಕ್ ಖಾತೆ ಹೊಂದಿದ್ದಾಗ ಅದರಲ್ಲಿ ಮಿನಿಮಮ್ ಬ್ಯಾಲೆನ್ಸ್ ಅನ್ನೊದನ್ನು ಕಾಯ್ದಿರಿಸಬೇಕು. ಮಿನಿಮಮ್ ಬ್ಯಾಲೆನ್ಸ್ ನೀವು ಇಡದೆ ಹೋದರೆ ದಂಡ ಕೂಡ ಪಾವತಿ ಮಾಡಬೇಕಾಗಿ ಬರಲಿದೆ. ಇದರ ಜೊತೆಗೆ ಅನೇಕ ಶುಲ್ಕ ಕೂಡ ಕಟ್ಟಬೇಕು. ಎಟಿಎಂ, SMS ಇತ್ಯಾದಿ ಸೇವಾ ಶುಲ್ಕ ವಾರ್ಷಿಕ ಶುಲ್ಕ ಸಹ ಇರುತ್ತದೆ.
ಖಾತೆ ನಿರುಪಯುಕ್ತ ಆಗಲಿದೆ:
ಅನೇಕ ಖಾತೆ ತೆರೆದಾಗ ನಿಮಗೆ ಎಲ್ಲ ಖಾತೆ ಒಂದೆ ಪ್ರಕಾರ ನಿರ್ವಹಣೆ ಮಾಡಲು ಸಾಧ್ಯ ಆಗದೆ ಇರುವ ಸಾಧ್ಯತೆ ಕೂಡ ಇದೆ. ಅಂದರೆ ಕಡಿಮೆ ಪ್ರಮಾಣದಲ್ಲಿ ನೀವು ಆ ಖಾತೆ ಬಳಕೆ ಮಾಡಿದರೂ ಅಥವಾ ಪೂರ್ತಿ ಬಳಕೆ ಮಾಡದೇ ಇದ್ದರೂ ಕೂಡ ನಿಮ್ಮಿಂದ ಸೇವಾ ಶುಲ್ಕ ಪಾವತಿ ಮಾಡಲೇ ಬೇಕಾಗಲಿದೆ. ಹಾಗಾಗಿ ಇದು ಅನಗತ್ಯ ಹೊರೆ ಆಗುವ ಸಾಧ್ಯತೆ ಇದೆ. ಆ ಕಾರಣದಿಂದ ನೀವು ಕಡಿಮೆ ಬ್ಯಾಂಕ್ ಖಾತೆ ಹೊಂದಿರುವುದು ಉತ್ತಮ ಎನ್ನಬಹುದು.