Bank Account: ಒಂದೇ ಫೋನ್ ನಂಬರ್ ಜೊತೆ ಹಲವಾರು ಬ್ಯಾಂಕ್ ಖಾತೆ ಇದ್ದವರಿಗೆ ಹೊಸ ಸೂಚನೆ! ಅಲರ್ಟ್
ಇಂದು ಪ್ರತಿಯೊಬ್ಬರಿಗೂ ಕೂಡ ಬ್ಯಾಂಕ್ ಖಾತೆ ಎನ್ನುವುದು ಅತೀ ಅವಶ್ಯಕ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಒಂದಾದರೂ ಖಾತೆ ಇದ್ದೆ ಇರುತ್ತದೆ. ಬ್ಯಾಂಕ್ ಖಾತೆ (Bank Account) ಒಂದೇ ಇರಬೇಕು ಎಂಬ ನಿಯಮ ಕೂಡ ಇಲ್ಲ. ಹಾಗಾಗಿ ಹೆಚ್ಚು ಖಾತೆಗಳನ್ನು ತೆರೆಯಲು ಅವಕಾಶ ಕೂಡ ಇದೆ. ಬ್ಯಾಂಕಿನಲ್ಲಿ ನಾವು ಕೆಲಸದ ಸಂಬಳ ಪಡೆಯಲು ಹೊಸ ಖಾತೆಗಳನ್ನು ತೆರೆಯುತ್ತೇವೆ. ಕೆಲವಷ್ಟು ಮಂದಿ, ಗೃಹ ಸಾಲ (Home Loan), ವಾಹನ ಸಾಲ (Vehicle Loan) ಹೀಗೆ ಬೇರೆ ಬೇರೆ ಕಾರಣಗಳಿಗೆ ಖಾತೆಗಳನ್ನು ತೆರೆಯುತ್ತಾರೆ.
RBI Action:
ಇಂದು ಜನರ ಹಣದ ಸುರಕ್ಷತೆಗಾಗಿ RBI ಬ್ಯಾಂಕ್ ಗಳಿಗೆ ಕಟ್ಟು ನಿಟ್ಟಿನ ಕ್ರಮ ವನ್ನು ಕೂಡ ಜಾರಿಗೆ ತರುತ್ತಿದೆ. ಆರ್ಬಿಐ, ಬ್ಯಾಂಕ್ಗಳ ಸಹಯೋಗದೊಂದಿಗೆ ಖಾತೆಗಳ ಭದ್ರತೆಯ ವಿಚಾರವಾಗಿ ಬದಲಾವಣೆಗಳನ್ನು ಮಾಡಲು ಕೂಡ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇಂದು ಹೆಚ್ಚಿನ ಜನರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ. ಇದಕ್ಕಾಗಿ RBI ಇದೀಗ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆ (Bank Account) ಹೊಂದಿರುವವರಿಗೆ ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದೆ.
ಒಂದೇ ನಂಬರ್ ಲಿಂಕ್ ಮಾಡಿದ್ದೀರಾ?
ಇಂದು ಬ್ಯಾಂಕ್ ಖಾತೆ (Bank Account) ಯನ್ನು ನಾವು ಆಧಾರ್ ಕಾರ್ಡ್ (Aadhaar Card) ಗೆ, ಮೊಬೈಲ್ ಸಂಖ್ಯೆಗೂ ಲಿಂಕ್ ಮಾಡಿಸುತ್ತೇವೆ. ಇನ್ನು ಮೊಬೈಲ್ ನಂ (Mobile Number) ನಮೂದು ಮಾಡುವಾಗ ಒಂದೇ ಫೋನ್ ಸಂಖ್ಯೆಯನ್ನು ಎಲ್ಲ ಬ್ಯಾಂಕ್ ಖಾತೆಗಳಿಗೂ ನೀಡುತ್ತೇವೆ. ಆದ್ರೆ ಇನ್ಮುಂದೆ ಹಾಗೆ ಮಾಡುವಂತಿಲ್ಲ.
ಕೆವೈಸಿ ಗೆ ಸಮಸ್ಯೆ ಉಂಟಾಗಲಿದೆ:
ಬ್ಯಾಂಕ್ ಖಾತೆ ಮಾಡುವಾಗ KYC ಫಾರ್ಮ್ ತುಂಬಬೇಕಾಗುತ್ತದೆ. ಇದಕ್ಕಾಗಿ KYC ಮಾನದಂಡ, ನಿಯವನ್ನು RBI ಬದಲಾವಣೆ ಮಾಡಬಹುದು. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಒಂದೇ ಫೋನ್ ನಂಬರ್ ಗೆ ಲಿಂಕ್ ಮಾಡಿದ ಖಾತೆದಾರರ ಬ್ಯಾಂಕ್ ಖಾತೆಗಾಗಿ KYC ಅನ್ನು ನವೀಕರಣ ಮಾಡುವಂತೆ ತಿಳಿಸಬಹುದು. ಹೌದು ಜಂಟಿ ಖಾತೆಗಳನ್ನು ಹೊಂದಿದ್ದರೆ KYC ಫಾರ್ಮ್ನಲ್ಲಿ ಇತರ ಬೇರೆ ಮೊಬೈಲ್ ಸಂಖ್ಯೆಯನ್ನು ನವೀಕರಿಸುವಂತೆ ತಿಳಿಸಬಹುದು.
ಕೆವೈಸಿ ಅತ್ಯಗತ್ಯ:
ಇಂದು ಬ್ಯಾಂಕ್ ಖಾತೆ (Bank Account) ತೆರೆಯಲು ಕೆವೈಸಿ ಅತೀ ಅಗತ್ಯ. ಬ್ಯಾಂಕ್ ಖಾತೆ ಮಾಡುವಾಗ ವ್ಯಕ್ತಿಯು ನೀಡಿರುವ ಮಾಹಿತಿಗಳು ಸರಿಯಾಗಿವೆ ಎಂದು ಪರಿಶೀಲಿಸಲು KYC ಅತೀ ಅಗತ್ಯ ವೆನಿಸಿದೆ. ಹೀಗಾಗಿ ಬ್ಯಾಂಕ್ ಗಳು ಹೊಸ ಖಾತೆ ತೆರೆಯುವ ಸಮಯದಲ್ಲಿ ಗ್ರಾಹಕರಿಂದ ಕೆವೈಸಿ ಮಾಹಿತಿಗಳು ಅಗತ್ಯ ಎಂದು ಸೂಚನೆ ನೀಡುತ್ತದೆ.