Karnataka Times
Trending Stories, Viral News, Gossips & Everything in Kannada

RBI: ಈ ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಕೇಂದ್ರ ಹಣಕಾಸು ಸಚಿವಾಲಯದ ಹೊಸ ಸೂಚನೆ!

advertisement

ಇಂದು ಡಿಜಿಟಲ್ ಪಾವತಿ ಬಳಕೆ ಬಗ್ಗೆ ಹೇಳಬೇಕಾಗಿಲ್ಲ. ಕೈಯಲ್ಲಿ ಹಣ ಇಲ್ಲದಿದ್ರೂ ಮೊಬೈಲ್ ಒಂದು ಇದ್ದರೆ ಸಾಕು, ಎಲ್ಲಿಂದ ಯಾರಿಗೂ ಬೇಕಾದರೂ ಹಣ ವರ್ಗಾವಣೆ ಮಾಡಬಹುದು. ಅದರಲ್ಲೂ ಭಾರತದಲ್ಲಿ ಡಿಜಿಟಲ್ ಪಾವತಿ ಬಳಕೆ ಮಾಡುವವರ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ. ಆದರೆ ಇತ್ತಿಚೆಗೆ ಮಾತ್ರ ಯುಪಿಐ ಬಳಕೆದಾರರಿಗೆ ಈ ಬಗ್ಗೆ ಸ್ವಲ್ಪಮಟ್ಟಿಗೆ ಭಯ ಹೆಚ್ಚಾಗಿದೆ. ಹೌದು ಇತ್ತೀಚೆಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್ ಬಿಐ ನಿಯಮ ಮೀರಿದ್ದಕ್ಕಾಗಿ ನಿರ್ಬಂಧ ವಿಧಿಸಿತ್ತು‌ RBI ನಿರ್ಧಾರದ ಬಳಿಕ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ Paytm ತೊರೆದು ಇತರ ಆ್ಯಪ್ ಗಳತ್ತ ಜನರು ಮುಖ ಮಾಡಿದ್ದಾರೆ.ಇದೀಗ ಪೇಟಿಎಂ ಬ್ಯಾಂಕ್ ಹೊಂದಿದ್ದ ಬಳಕೆದಾರರಿಗೆ ಮಹತ್ವದ ಸುದ್ದಿಯೊಂದು ಇದ್ದು ನೀವು ಈ ಮಾಹಿತಿ ತಿಳಿಯಲೇ ಬೇಕು.

ನಿಯಮ ಉಲ್ಲಂಘನೆಗೆ RBI ಕ್ರಮ:

 

Image Source: Banking Frontiers

 

ಮೊನ್ನೆಯಷ್ಟೆ ರಿಸರ್ವ್ ಬ್ಯಾಂಕ್ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಕಟ್ಟು ನಿಟ್ಟಿನ ಕ್ರಮವನ್ನು ಜಾರಿಗೆ ತಂದಿತ್ತು.‌ ಹೌದು, ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ 31 ರಂದು ಪೇಟಿಎಮ್‌ ಪಾವತಿಗಳ ಮೇಲೆ ಪ್ರಮುಖ ವ್ಯಾಪಾರ ನಿರ್ಬಂಧಗಳನ್ನು ವಿಧಿಸಿತ್ತು‌, ಇದೀಗ RBI ವಿಧಿಸಿರುವ ನಿಷೇಧಕ್ಕೆ ಮಾರ್ಚ್ 15 ಕೊನೆಯ ದಿನಾಂಕ ಕೂಡ ಆಗಿದೆ.

ಯಾಕಾಗಿ ಈ ಕ್ರಮ?

advertisement

ರಿಸರ್ವ್ ಬ್ಯಾಂಕ್ ಠೇವಣಿಗಳನ್ನು ಗ್ರಾಹಕರಿಂದ ಸ್ವೀಕರಿಸುವ ಬಗ್ಗೆ ಮತ್ತು ಕ್ರೆಡಿಟ್ ವ್ಯವಹಾರಗಳನ್ನು ಮಾಡುವುದರ ಮೇಲೆ ನಿಷೇಧವನ್ನು ಕೂಡ ಹೇರಿತ್ತು. ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನಲ್ಲಿ ಬಳಕೆದಾರರ ಸರಿಯಾದ ಗುರುತೇ, ದಾಖಲೆ ಇಲ್ಲದೆಯೇ ಖಾತೆಗಳನ್ನು ತೆರೆದಿತ್ತು. ಇನ್ನು 1000ಕ್ಕೂ ಹೆಚ್ಚು ಖಾತೆಗಳಿಗೆ 1 PAN Card ಸಂಖ್ಯೆ ಬಳಸಿರುವುದು ಕೂಡಾ ಕಂಡುಬಂದಿದೆ. ಇನ್ನೂ ಕೆವೈಸಿ ಪರಿಶೀಲನೆಯನ್ನು ಸೂಕ್ತವಾಗಿ ನಡೆಸದೇ ಇರುವುದು ಕೂಡ RBI ಗಮನಕ್ಕೆ ಬಂದಿತ್ತು.‌ಇದಕ್ಕಾಗಿ RBI ನಿರ್ಬಂಧ ವಿಧಿಸಿದೆ.

ಪೆಟಿಎಮ್ ಯಾವುದೇ ಬ್ಯಾಂಕ್ ನ ಹೆಸರನ್ನು ಅಧಿಕೃತ ಗೊಳಿಸಿಲ್ಲ:

 

Image Source: Madhyamam

 

ಪ್ರಸ್ತುತ, Axis Bank, Canara Bank, Yes Bank and Kotak Mahindra Bank ಈ ಪೇಟಿಎಂ ಖಾತೆದಾರರನ್ನೂ ಬರಮಾಡಿಕೊಳ್ಳುವ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದರೂ ಪೇಟಿಎಂ ಮಾತ್ರ ಯಾವುದೇ ಬ್ಯಾಂಕ್ ನ‌ ಹೆಸರನ್ನು ಅಂತಿಮಗೊಳಿಸಿಲ್ಲ. ಅದೇ ರೀತಿ ಅರ್ ಬಿ ಐ ಗೆ ಪೆಟಿಎಮ್ ಪೇಮೆಂಟ್ಸ್ ಬ್ಯಾಂಕಿನ ಖಾತೆಗಳನ್ನು ಯಾವ ಬ್ಯಾಂಕಿನ ಹೆಸರಿಗೆ ನೀಡಲಾಗುವುದು ಎಂಬುದನ್ನು ನಿರ್ಧರಿಸಲು ಕೂಡ ಇನ್ನೂ ಸಾಧ್ಯವಾಗಿಲ್ಲ.

ಈ ಸಂದೇಹ ಇದೆ:

Paytm ಅನ್ನು ಬೇರೆ ಬ್ಯಾಂಕ್ ಆಯ್ಕೆ ಮಾಡಲಾಗುತ್ತದೆಯೇ ಅಥವಾ ಕಡಿಮೆ ಸಂಖ್ಯೆಯ ಖಾತೆಗಳಿಗೆ ವರ್ಗಾಯಿಸಲಾಗುತ್ತದೆಯೇ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.ಈ ಬಗ್ಗೆಯು ಸಂದೇಹ ಇರಲಿದೆ. ಆದರೆ ಯುಪಿಐ ಬಳಕೆದಾರರಿಗೆ ಪೇಟಿಎಂ ಹ್ಯಾಂಡಲ್ ಬಳಸಲು ಅವಕಾಶ ನೀಡಿದೆ. ಕ್ಯೂಆರ್ ಕೋಡ್ ಮತ್ತು ಪಾಯಿಂಟ್ ಆಫ್ ಸೇಲ್ ಯಂತ್ರವನ್ನು ಚಾಲನೆಯಲ್ಲಿಡಲು ಕೂಡ ಆದೇಶ ನೀಡಲಾಗಿದೆ.

advertisement

Leave A Reply

Your email address will not be published.