Karnataka Times
Trending Stories, Viral News, Gossips & Everything in Kannada

Car Loan: ಸ್ಟೇಟ್ ಬ್ಯಾಂಕ್ ನಿಂದ 5 ವರ್ಷಗಳಿಗೆ 12 ಲಕ್ಷ ಕಾರ್ ಲೋನ್ ಪಡೆಯುವುದಕ್ಕೆ ಎಷ್ಟು EMI ಪಾವತಿಸಬೇಕು ಗೊತ್ತಾ?

advertisement

ಕಾರು ಎನ್ನುವುದು ನಮ್ಮ ದೈನಂದಿನ ಸಂಚಾರಕ್ಕೆ ಅಗತ್ಯವಾಗಿರುವ ವಸ್ತು ಆಗಿದೆ. ಕೆಲವರು ಬೈಕ್ ನಲ್ಲಿ ಪ್ರಯಾಣಿಸಿದರೆ, ಇನ್ನು ಕೆಲವರಿಗೆ ಕಾರ್ ನಲ್ಲಿ ದೂರದ ಪ್ರಯಾಣ ಮಾಡುವ ಅನಿವಾರ್ಯತೆ ಇರುತ್ತದೆ ಹಾಗಾಗಿ ಪ್ರತಿಯೊಬ್ಬರೂ ಕಾರು ಖರೀದಿ ಮಾಡುವುದಕ್ಕೆ ಬಯಸುತ್ತಾರೆ. ಆದರೆ ಕಾರು ಖರೀದಿ ಮಾಡುವುದು ಸುಲಭ ಅಲ್ಲ. ಯಾಕಂದ್ರೆ ಪ್ರತಿಯೊಂದು ಕಾರು ಕೂಡ ಸಾಮಾನ್ಯ ವರ್ಗದವರಿಗೆ ದುಬಾರಿ ಎಂದೇ ಅನ್ನಿಸಬಹುದು. ಹಾಗಂತ ಚಿಂತೆ ಮಾಡುವ ಅಗತ್ಯ ಇಲ್ಲ. ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಪಡೆದು ಕಾರ್ ಖರೀದಿ ಮಾಡಬಹುದು.

ಮಾರುಕಟ್ಟೆಯಲ್ಲಿ ಇಂದು ವಿವಿಧ ಬಗೆಯ ಕಾರುಗಳು ಲಭ್ಯ ಇವೆ. ಕೈಗೆಟುಕುವ ಬೆಲೆಯ ಕಾರನ್ನು ನೀವು ಖರೀದಿಸಲು ಬಯಸಿದರೆ ಬ್ಯಾಂಕ್ನಿಂದ ಕಾರ್ ಲೋನ್ (Car Loan) ಪಡೆದುಕೊಂಡು ಪ್ರತಿ ತಿಂಗಳು EMI ಪಾವತಿ ಮಾಡುವುದರ ಮೂಲಕ ನಿಮ್ಮ ಇಷ್ಟದ ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು. ಸದ್ಯ, SBI ಬ್ಯಾಂಕ್ Car Loan ಗೆ ಎಷ್ಟು ಬಡ್ಡಿದರ ನಿಗದಿಪಡಿಸಿದೆ ನೋಡೋಣ.

SBI ನಲ್ಲಿ ಪಡೆದುಕೊಳ್ಳಿ Car Loan:

 

Image Source: Business League

 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪ್ರಸ್ತುತ 8.85% ನಿಂದ 9.80% ವರೆಗಿನ ಬಡ್ಡಿ ದರದಲ್ಲಿ ಹೊಸ ಕಾರು ಖರೀದಿಗೆ ಸಾಲ (Loan) ಸೌಲಭ್ಯ ಒದಗಿಸುತ್ತದೆ. ಅದರಲ್ಲೂ ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿದ್ರೆ, ಅಂದ್ರೆ 800 ಗಿಂತ ಜಾಸ್ತಿ ಇದ್ರೆ ಎಸ್ ಬಿಐ 8.85% ಬಡ್ಡಿ ದರದಲ್ಲಿ ವಾಹನ ಸಾಲವನ್ನು ನೀಡುತ್ತದೆ.

advertisement

12 ಲಕ್ಷ ರೂಪಾಯಿಗಳ ಕಾರು ಖರೀದಿಸಿದರೆ ತಿಂಗಳ EMI ಎಷ್ಟು?

 

Image Source: Mint

 

ನೀವು 12 ಲಕ್ಷಗಳ ಕಾರನ್ನು ಖರೀದಿ ಮಾಡುತ್ತೀರಿ ಎಂದು ಭಾವಿಸಿ, ಅದಕ್ಕೆ ನಿಮ್ಮ ಸಿಬಿಲ್ ಸ್ಕೋರ್ (CIBIL Score) ಚೆನ್ನಾಗಿದ್ದು, 8.85% ಬಡ್ಡಿ ದರದಲ್ಲಿ ಲೋನ್ (Car Loan) ಸಿಗಬಹುದು. ಈ ರೀತಿ ಸಾಲ ಸಿಕ್ಕರೆ ನೀವು ಪ್ರತಿ ತಿಂಗಳು ಪಾವತಿ ಮಾಡಬೇಕಾದ EMI ಮೊತ್ತ 24,823 ರೂಪಾಯಿಗಳು.

ಅಂದರೆ ಕೇವಲ ಐದು ವರ್ಷಗಳಲ್ಲಿ ನೀವು ನಿಮ್ಮ ಕಾರ್ ಲೋನ್ (Car Loan) ಮೊತ್ತ ಹಿಂತಿರುಗಿಸಬಹುದು. ಇದಕ್ಕೆ ಸುಮಾರು 2,89,365 ರೂಪಾಯಿಗಳನ್ನ ಬಡ್ಡಿಯಾಗಿ ಪಾವತಿಸುತ್ತೀರಿ. ಅಂದರೆ ಕಾರಿನ ಮೊತ್ತಕ್ಕಿಂತ ಹೆಚ್ಚು ಹಣವನ್ನು ಸಾಲವಾಗಿ ಮರುಪಾವತಿ ಮಾಡಬೇಕು.

ಒಟ್ಟಾರೆಯಾಗಿ ನೀವು 12 ಲಕ್ಷ ರೂಪಾಯಿಗಳ ಕಾರಿಗೆ 14, 89,365 ರೂಪಾಯಿಗಳನ್ನು ಮರುಪಾವತಿ ಮಾಡಬೇಕಾಗುತ್ತದೆ. ಆದಾಗ್ಯೂ ಕಾರು ಖರೀದಿಸುವ ಅನಿವಾರ್ಯತೆ ಇದ್ದಾಗ ಇಂತಹ ಹೆಚ್ಚುವರಿ ಖರ್ಚನ್ನು ನಿಭಾಯಿಸಲೇಬೇಕು.

advertisement

Leave A Reply

Your email address will not be published.