Karnataka Times
Trending Stories, Viral News, Gossips & Everything in Kannada

HDFC: HDFC ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಗುಡ್ ನ್ಯೂಸ್! ಬ್ಯಾಂಕ್ ಆದೇಶ

advertisement

ಸಾಲ ಮಾಡುವುದು ಎಲ್ಲ ಸಂದರ್ಭದಲ್ಲಿ ಒಳ್ಳೆಯದಲ್ಲವಾದರೂ ಅಗತ್ಯ ಎಂದು ಕಂಡುಬಂದರೆ ಸಾಲವನ್ನು ಪಡೆಯಲೇ ಬೇಕು. ಹಾಗೆಂದು ಪರಿಚಯಸ್ಥರ ಬಳಿ ಸಾಲ ಕೇಳಿದರೆ ಬಳಿಕ ಅವರು ವಾಪಾಸ್ಸು ಕೇಳುವ ಹೊತ್ತಿಗೆ ನಾವು ಅವರಿಗೆ ನೀಡಬೇಕಾಗುತ್ತದೆ. ಹಾಗಾಗಿ ಅನೇಕ ಬ್ಯಾಂಕುಗಳು ವೈಯಕ್ತಿಕ ಉದ್ದೇಶಕ್ಕೆ ಸಾಲ (Loan) ಸೌಲಭ್ಯ ನೀಡುತ್ತಿದ್ದು ನೀವು ಇದರ ಪ್ರಯೋಜನೆ ಪಡೆದುಕೊಳ್ಳಬಹುದು. ಹಾಗಾದರೆ ಯಾವ ಬ್ಯಾಂಕ್ ನಿಮಗೆ ಶೀಘ್ರ ಸಾಲ ನೀಡಲಿದೆ ಎಂಬ ಮಾಹಿತಿಯನ್ನು ನಾವಿಂದು ತಿಳಿಸಲಿದ್ದೇವೆ.

ನಮಗೆ ಕೆಲವೊಂದು ತುರ್ತು ಸಂದರ್ಭದಲ್ಲಿ ಸಾಲವನ್ನು ಅಗತ್ಯವಾಗಿ ಪಡಯಲೇ ಬೇಕಾದ ಅನಿವಾರ್ಯ ಸ್ಥಿತಿ ಎದುರಾದಾಗ ಏನು ಮಾಡುವುದು ಎಂಬ ಚಿಂತೆ ಕಾಡಲಿದೆ. ಹೀಗಾಗಿ ಸಾಲ ಕೇಳಲು ಬ್ಯಾಂಕ್ ಗೆ ಅಲೆಯಬೇಕಾಗುತ್ತದೆ. ಬ್ಯಾಂಕುಗಳು ಇಂದು ಸಾಲ ನೀಡಲು ಮುಂದಾದರೂ ಕೂಡಲೇ ಸಾಲ ಸಿಗಲಾರದು ಆದರೆ ಈ ಒಂದು ಬ್ಯಾಂಕಿನಲ್ಲಿ ನೀವು ಖಾತೆ (ಅಕೌಂಟ್) ಹೊಂದಿದ್ದರೆ ನಿಮಗೆ ಕ್ಷಣಾರ್ಧದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಹಾಗಾದರೆ ಆ ಬ್ಯಾಂಕ್ ಯಾವುದು? ಎಷ್ಟು ಸಾಲ ಸಿಗುತ್ತದೆ? ಎಂಬ ಇತ್ಯಾದಿ ಮಾಹಿತಿಯನ್ನು ನಾವು ಇಂದು ನಿಮಗೆ ಮಾಹಿತಿ ನೀಡಲಿದ್ದೇವೆ.

ಯಾವುದು ಆ ಬ್ಯಾಂಕ್:

 

Image Source: Mint

 

ದೇಶದ ಪ್ರತಿಷ್ಠಿತ ಬ್ಯಾಂಕ್ ನಲ್ಲಿ ಒಂದಾಗಿರುವ HDFC ಬ್ಯಾಂಕ್ ತನ್ನ ಗ್ರಾಹಕರಿಗೆ ಶೀಘ್ರ ಸಾಲ ನೀಡುವ ಯೋಜನೆಗೆ ಮುಂದಾಗಿದೆ. ಹಾಗಾಗಿ ಅತೀ ಕಡಿಮೆ ಅವಧಿಗೆ ಅತೀ ಹೆಚ್ಚಿನ ಸಾಲ ಸೌಲಭ್ಯ ಸಿಗಲಿದೆ. ಬಡ್ಡಿದರ ಕಡಿಮೆ ಇರುವ ಜೊತೆಗೆ ಗ್ರಾಹಕರಿಗೆ ಅನೇಕ ಪ್ರಯೋಜನೆ ಸಿಗಲಿದೆ. ಇಲ್ಲಿ ಕಡಿಮೆ ಬಡ್ಡಿದರದ ಅನೇಕ ಸೌಲಭ್ಯ ಕೂಡ ನಿಮ್ಮದಾಗಲಿದೆ. ಸುಲಭಕ್ಕೆ ವೈಯಕ್ತಿಕ ಸಾಲ ಪಡೆಯುವವರಿಗೆ HDFC ಒಂದು ಉತ್ತಮ ಆಯ್ಕೆಯಾಗಲಿದೆ.

advertisement

ಅರ್ಹತೆ ಏನು:

  • 21ವರ್ಷದಿಂದ 60ವರ್ಷದ ಒಳಗೆ ವಯೋಮಿತಿ ಹೊಂದಿರಬೇಕು.
  • ಉದ್ಯೋಗಸ್ಥರಿಗೆ ಮಾತ್ರವೇ ಸಿಗಲಿದೆ.
  • ಕನಿಷ್ಠ ಎರಡು ವರ್ಷದ ಕೆಲಸ ಅನುಭವ ಹೊಂದಿದ್ದು ಸ್ಯಾಲರಿ ಸ್ಲಿಪ್ ಕಡ್ಡಾಯವಾಗಿದೆ.
  • ಸ್ಯಾಲರಿ ಸ್ಲಿಪ್ ಜೊತೆಗೆ ಬ್ಯಾಂಕ್ ಸ್ಟೇಟ್ಮೆಂಟ್ ಕಡ್ಡಾಯ
  • 15ಸಾವಿರ ಮಾಸಿಕ ವೇತನ ಹೊಂದಿರಬೇಕು.
  • ಬ್ಯಾಂಕಿನಿಂದ ಸಿಬಿಲ್ ಸ್ಕೋರ್ ಉತ್ತಮವಾಗಿ ಇರಬೇಕು.
  • ಈ ಎಲ್ಲ ಅರ್ಹತೆ ಹೊಂದಿದ್ದವರು ಮೊಬೈಲ್ ನಲ್ಲಿ HDFC ಆ್ಯಪ್ ಮೂಲಕ ಕೂಡ ಲೋನ್ ಪಡೆಯಬಹುದು. ಇಲ್ಲವೇ ನೇರವಾಗಿ ಬ್ಯಾಂಕ್ ಭೇಟಿ ನೀಡಿ ಕೂಡ ಸಾಲ ಪಡೆಯಬಹುದು.

ಹತ್ತು ಲಕ್ಷ ರೂಪಾಯಿ ವರೆಗೂ ಸಾಲ:

 

Image Source: India TV News

 

ಬರೀ 10 ನಿಮಿಷಕ್ಕೆ 10ಲಕ್ಷ ರೂಪಾಯಿ ತನಕ ನಿಮಗೆ ಸಾಲ ಸೌಲಭ್ಯ ಸಿಗಲಿದೆ. ಈ ಒಂದು ವೈಯಕ್ತಿಕ ಸಾಲಕ್ಕೆ 14% ಬಡ್ಡಿದರ ಕೂಡ ನಿಗಧಿ ಆಗಿದ್ದು ಕಡಿಮೆ ಸಮಯಕ್ಕೆ50 ಸಾವಿರದಿಂದ 10 ಲಕ್ಷದ ತನಕ ವೈಯಕ್ತಿಕ ಸಾಲವನ್ಜು ನೀವು ಪಡೆಯಬಹುದು. ಈ ಬಡ್ಡಿದರವು ರೆಪೋ ದರದ ಮೇಲೆ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ಇದಕ್ಕೆ ನೀವು ಆಧಾರ್ ಕಾರ್ಡ್, ಸ್ಥಳ ಪುರಾವೆ, ವಾಹನ ಪರವಾನಿಗೆ, ಸ್ಯಾಲರಿ ಸ್ಲಿಪ್, ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್, ITR ಸಲ್ಲಿಕೆ ಪತ್ರ ಇತರ ದಾಖಲೆ ಸಲ್ಲಿಸಬೇಕು. ಹೀಗೆ ಮಾಡಿದ್ದ ಬಳಿಕ ನಿಮಗೆ ಶೀಘ್ರ ಸಾಲ ಸೌಲಭ್ಯ ಸಿಗಲಿದೆ.

advertisement

Leave A Reply

Your email address will not be published.