Karnataka Times
Trending Stories, Viral News, Gossips & Everything in Kannada

BSNL: ದೇಶದ ಜನತೆಗೆ ಸಿಹಿಸುದ್ದಿ ಕೊಟ್ಟ BSNL! ಅಂಬಾನಿ ಕಂಗಾಲು

advertisement

ಸ್ನೇಹಿತರೆ ಕಳೆದ ಕೆಲವು ದಿನಗಳಿಂದ BSNL ಕಂಪನಿಯು ಉಚಿತವಾಗಿ 4G ಸಿಮ್ಗಳನ್ನು ವಿತರಣೆ ಮಾಡುವ ಕೆಲಸಕ್ಕೆ ಮುಂದಾಗಿದ್ದರು. ಅದರಂತೆ ಪಂಜಾಬ್, ಹರಿಯಾಣ, ಹಿಮಾಚಲ್ ಪ್ರದೇಶ್, ಉತ್ತರಕಾಂಡ ಹಾಗೂ ಪಶ್ಚಿಮ ಉತ್ತರ ಪ್ರದೇಶದಾದ್ಯಂತ ಬಿಎಸ್ಎನ್ಎಲ್ ಕಂಪನಿ ಅತಿ ಹೆಚ್ಚು 4G ಚಂದಾದಾರರನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (Tata Consultancy Services) ಮತ್ತು ಸರ್ಕಾರದ ಸೆಂಟ್ರಲ್ ಆಫ್ ಡೆವಲಪ್ಮೆಂಟ್ ಆಫ್ ಟೆಲಿ ಮ್ಯಾಟ್ರಿಕ್ಸ್ (Government Central Development of Telematrix) ನಂತಹ ಕಂಪನಿಗಳ ಸಂಯೋಜನೆಯಿಂದ ಈ ಕಾರ್ಯವನ್ನು ಪೂರೈಸಲಾಗಿರುವ ಮಾಹಿತಿಯನ್ನು ಕಂಪನಿ ಅಧಿಕೃತವಾಗಿ ಹಂಚಿಕೊಂಡಿದೆ.

12 ತಿಂಗಳೊಳಗೆ BSNL 5G ನೆಟ್ವರ್ಕ್ ಲಭ್ಯ:

 

Image Source: Euractiv

 

ಸದ್ಯ ದೇಶದಾದ್ಯಂತ BSNL 4G SIM ವಿಚಾರಣಾ ಕಾರ್ಯವು ಯಶಸ್ವಿಯಾಗಿ ನೆರವೇರುತ್ತಿದ್ದು, ಈಗಾಗಲೇ 8 ಲಕ್ಷಕ್ಕೂ ಅಧಿಕ ಗ್ರಾಹಕರು 4G ಸಿಮ್ ಗಳನ್ನು ಬಳಸಲು ಮುಂದಾಗುತ್ತಿದ್ದಾರೆ. ಹೀಗಿರುವಾಗ ಹಿರಿಯ ಅಧಿಕಾರಿಗಳು ‘ಆದಷ್ಟು ಬೇಗ ಈ ನೆಟ್ವರ್ಕ್ನ ಮುಖ್ಯ ಭಾಗವನ್ನು ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಪ್ರದೇಶಗಳಿಗೆ ಸ್ಥಾಪಿಸಲಾಗುವುದು, ಹಾಗೂ ಮುಂದಿನ 12 ತಿಂಗಳ ನಂತರ 5G ಸೇವೆಗಳ ರೋಲ್ ಔಟ್(5G Services Rollout) ಕಾರ್ಯವನ್ನು ಜಾರಿಗೆ ತರಲಾಗುತ್ತಿದೆ’ ಎಂದಿದ್ದಾರೆ.

advertisement

3500ಕ್ಕೂ ಹೆಚ್ಚಿನ BSNL ಟವರ್ಗಳ ಸ್ಥಾಪನೆ:

ಬಿಎಸ್ಎನ್ಎಲ್ (BSNL) ಕಂಪನಿ ಅತಿ ಕಡಿಮೆ ಅವಧಿಯಲ್ಲಿ ದೇಶವ್ಯಾಪ್ತಿ 350೦ಕ್ಕೂ ಹೆಚ್ಚಿನ ಟವರ್ಗಳನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದು, 20,000ಗಳನ್ನು ಸ್ಥಾಪನೆ ಮಾಡಿದ ನಂತರ ಏರ್ಟೆಲ್, ಜಿಯೋ ಹಾಗೂ ವೊಡಾಫೋನ್ ನಂತೆ ವಾಣಿಜ್ಯವಾಗಿ ಬಿಎಸ್ಎನ್ಎಲ್ ಕೆಲಸ ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ ಕಂಪನಿ ಪ್ರಪಂಚದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚಿನ ಟವರ್ ಗಳನ್ನು ಸ್ಥಾಪಿಸಿ, 12 ತಿಂಗಳೊಳಗೆ ಹತ್ತು ಲಕ್ಷ ಚಂದಾದಾರರನ್ನು ಗಳಿಸುವ ಪ್ರಯತ್ನದಲ್ಲಿದೆ.

ಜಿಯೋ ಕಂಪನಿಯೊಂದಿಗೆ ನೇರವಾದ ಸ್ಪರ್ಧೆಗೆ:

 

Image Source: mysmartprice

 

ಬಿಎಸ್ಎನ್ಎಲ್ ಕಂಪನಿಯು (BSNL Company) ಈ ವರ್ಷಾಂತ್ಯಾದೊಳಗೆ 5G ನೆಟ್ವರ್ಕ್ ಅನ್ನು ಪರಿಚಯಿಸುವ ನಿರೀಕ್ಷೆಯಲ್ಲಿತ್ತು. ಆದರೆ ಕೆಲ ಕಾರ್ಯ ವಿಳಂಬನೆಯಿಂದಾಗಿ ಮುಂದಿನ ವರ್ಷಕ್ಕೆ 5G ನೆಟ್ವರ್ಕ್ ಅನ್ನು ಪರಿಚಯಿಸಲಿರುವ ಭರವಸೆಯನ್ನು ನೀಡಿದ್ದಾರೆ. ಆದರೆ ಒಂದು ವರ್ಷದೊಳಗೆ 5G ನೆಟ್ವರ್ಕ್ (5G Network) ಅನ್ನು ವಿಸ್ತರಿಸುವ ಕಾರ್ಯದಲ್ಲಿ ಯಶಸ್ವಿಯಾಗಿರುವ ಜಿಯೋ ಕಂಪನಿ BSNL ನೊಂದಿಗೆ ನೇರವಾದ ಸ್ಪರ್ಧೆಗಿಳಿದಿದೆ.

advertisement

Leave A Reply

Your email address will not be published.