Karnataka Times
Trending Stories, Viral News, Gossips & Everything in Kannada

BSNL: ಬೆಳ್ಳಂಬೆಳಿಗ್ಗೆ 2 ಹೊಸ ರಿಚಾರ್ಜ್ ಪ್ಲಾನ್ ಘೋಷಿಸಿದ BSNL! ಜಿಯೋಗೆ ನಡುಕ

advertisement

ಭಾರತದಲ್ಲಿ ಟೆಲಿಕಾಂ ಇಂಡಸ್ಟ್ರಿಯಲ್ಲಿ ಬೇರೆ ಬೇರೆ ಕಂಪನಿಗಳು ಪರಸ್ಪರ ಒಂದನ್ನೊಂದು ನೆಲಕ್ಕೆ ಅಪ್ಪಳಿಸುವಂತಹ ನಿಟ್ಟಿನಲ್ಲಿ ಹೊಸ ಹೊಸ ಪ್ಲಾನ್ ಗಳನ್ನು ಜಾರಿಗೆ ತರುತ್ತಿವೆ. ಗ್ರಾಹಕರು ಕೂಡ ತಮಗೆ ಹೆಚ್ಚು ಲಾಭವನ್ನು ನೀಡುವಂತಹ ಕಂಪನಿಗಳ ರಿಚಾರ್ಜ್ ಪ್ಲಾನ್ ಅನ್ನು ಹಾಗೂ ಸಿಮ್ ಕಾರ್ಡ್ಗಳನ್ನು ಬಳಸುವುದಕ್ಕೆ ಮುಂದಾಗುತ್ತಿದ್ದಾರೆ. ಇವತ್ತಿನ ಲೇಖನದಲ್ಲಿ ನಾವು ಮಾತನಾಡಲು ಹೊರಟಿರೋದು ನಮ್ಮ ಭಾರತೀಯ ಟೆಲಿಕಾಂ ಇಂಡಸ್ಟ್ರಿಯಲ್ಲಿ ಕಳೆದ ಸಾಕಷ್ಟು ವರ್ಷಗಳಿಂದ BSNL ಸರ್ಕಾರಿ ಸಂಸ್ಥೆಯಾಗಿ ಕಾಣಿಸಿಕೊಳ್ಳುತ್ತಿದ್ದು ಈಗ ತನ್ನ ಎರಡು ವಿಶೇಷ ಯೋಜನೆಗಳ ಮೂಲಕ ಗ್ರಾಹಕರಲ್ಲಿ ಮತ್ತೆ ಸಂಚಲನವನ್ನು ಮೂಡಿಸುವುದಕ್ಕೆ ಹೊರಟಿದೆ. ಹಾಗಿದ್ರೆ ಬನ್ನಿ ಆ ರೀಚಾರ್ಜ್ ಪ್ಲಾನ್ ಗಳ ವಿವರವನ್ನು ಪಡೆದುಕೊಳ್ಳೋಣ.

BSNL ನ 99 ರೂಪಾಯಿಗಳ ರಿಚಾರ್ಜ್ ಪ್ಲಾನ್

ಸಾಕಷ್ಟು ಸಮಯಗಳಿಂದ ತೆರೆ ಮೆರೆಗೆ ಸರಿದಿರುವ ಬಿಎಸ್ಎನ್ಎಲ್ ಸಂಸ್ಥೆ ಈಗ ಮತ್ತೆ ತನ್ನ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದೇ ರೀತಿಯಲ್ಲಿ ಜಾರಿಗೆ ತಂದಿರುವಂತಹ 99 ರಿಚಾರ್ಜ್ ಪ್ಲಾನ್ ಬಗ್ಗೆ ಇವತ್ತಿನ ಈ ಲೇಖನದಲ್ಲಿ ಹೇಳುವುದಕ್ಕೆ ಹೊರಟಿದ್ದೀವಿ. ಹಾಗಿದ್ದರೆ ಬನ್ನಿ 99 ರೂಪಾಯಿಗಳ ರಿಚಾರ್ಜ್ ಪ್ಲಾನ್ ನಲ್ಲಿ ಏನೆಲ್ಲಾ ಸಿಗುತ್ತದೆ ಅನ್ನೋದನ್ನ ತಿಳಿಯೋಣ.

advertisement

Image Source: Gizbot Malayalam

99 ರೂಪಾಯಿ ರಿಚಾರ್ಜ್ ಪ್ಲಾನ್ ನಲ್ಲಿ ಮೊದಲಿಗೆ 18 ದಿನಗಳ ವ್ಯಾಲಿಡಿಟಿ ಸಿಕ್ತಾ ಇತ್ತು ಆದರೆ ಈಗ 17 ದಿನಗಳ ವ್ಯಾಲಿಡಿಟಿ ಸಿಕ್ತಾ ಇದೆ. ಈ ವ್ಯಾಲಿಡಿಟಿಯ ಲೆಕ್ಕಾಚಾರದಲ್ಲಿ ನೋಡೋದಾದ್ರೆ ದಿನಕ್ಕೆ ಕೇವಲ 5.5 ರೂಪಾಯಿಗಳ ಖರ್ಚು ಮಾತ್ರ ಆಗುತ್ತೆ. ಇದರಲ್ಲಿ ಬಿಎಸ್ಎನ್ಎಲ್ ಸಂಸ್ಥೆ ಯಾವುದೇ ರೀತಿಯ ಡೇಟಾ ಆಫರ್ ಅನ್ನು ಗ್ರಾಹಕರಿಗೆ ನೀಡುತ್ತಿಲ್ಲ. 17 ದಿನಗಳ ಕಾಲ ಅನಿಯಮಿತ ಕರೆ ಸೇವೆಯನ್ನು ನೀಡಲಾಗುತ್ತದೆ. ಈ ರಿಚಾರ್ಜ್ ಪ್ಲಾನ್ ಪ್ರಮುಖವಾಗಿ ಕೇವಲ ಕಾಲಿಂಗ್ ಸೇವೆಯನ್ನು ಮಾತ್ರ ಬಯಸುವವರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಬಹುದು. ಹೀಗಾಗಿ ಕೇವಲ ವ್ಯಾಲಿಡಿಟಿ ಹಾಗೂ ಕಾಲಿಂಗ್ ಸೇವೆಯನ್ನು ಮಾತ್ರ ಬಯಸುವಂತಹ ಬಿಎಸ್ಎನ್ಎಲ್ ಗ್ರಾಹಕರು ಈ ರಿಚಾರ್ಜ್ ಮಾಡಬಹುದಾಗಿದೆ.

BSNL ನ 187 ರೂಪಾಯಿಗಳ ರಿಚಾರ್ಜ್ ಪ್ಲಾನ್

BSNL ಸಂಸ್ಥೆ ಪರಿಚಯಿಸಿರುವಂತಹ 187 ಹೊಸ ರಿಚಾರ್ಜ್ ಪ್ಲಾನ್ ಕೂಡ ನಿಮಗೆ ಉತ್ತಮ ವ್ಯಾಲಿಡಿಟಿ ನೀಡುತ್ತಿದೆ. ಹೌದು 27 ದಿನಗಳ ವ್ಯಾಲಿಡಿಟಿಯನ್ನು ಈ ರಿಚಾರ್ಜ್ ಪ್ಲಾನ್ ನೀಡುತ್ತಿದೆ. ಪ್ರತಿದಿನ ನಿಮಗೆ ಈ ರಿಚಾರ್ಜ್ ಪ್ಲಾನ್ ನಲ್ಲಿ 2GB ಇಂಟರ್ನೆಟ್ ಡೇಟಾ ಕೂಡ ಸಿಗುತ್ತೆ. ಇನ್ನು ರಿಚಾರ್ಜ್ ಪ್ಲಾನ್ ಮುಗಿಯೋ ತನಕ ನಿಮಗೆ 100 ಎಸ್ಎಂಎಸ್ ಕೂಡ ಪ್ರತಿದಿನ ಉಚಿತವಾಗಿರುತ್ತದೆ. ಇದು ಕೇವಲ ಕಾಲಿಂಗ್ ಸೇವೆಯನ್ನು ಮಾತ್ರವಲ್ಲದೆ ಇಂಟರ್ನೆಟ್ ಬಳಕೆ ಮಾಡುವಂತಹ ಗ್ರಾಹಕರಿಗೂ ಕೂಡ ಸರಿ ಹೊಂದುವಂತಹ ಯೋಜನೆ ಆಗಿದೆ ಎಂದು ಹೇಳಬಹುದಾಗಿದೆ. ಈ ರೀತಿಯ ಯೋಜನೆಗಳ ಮೂಲಕ ಬಿಎಸ್ಎನ್ಎಲ್ ತನ ಗ್ರಾಹಕರನ್ನು ಮತ್ತೆ ಮರುಕಳಿಸಿ ಪಡೆಯುವಂತಹ ಕೆಲಸವನ್ನು ಮಾಡುತ್ತಿದೆ.

advertisement

Leave A Reply

Your email address will not be published.