Karnataka Times
Trending Stories, Viral News, Gossips & Everything in Kannada

Virendra Sehwag: ಈ ಬಾರಿಯ T20 ವಿಶ್ವಕಪ್ ಗೆ ಇಂಡಿಯನ್ ಟೀಮ್ ಆಯ್ಕೆ ಮಾಡಿದ ವೀರೇಂದ್ರ ಸೆಹ್ವಾಗ್! ಹೀಗಿದೆ ಬಲಿಷ್ಠ ಟೀಮ್

advertisement

ಈಗಾಗಲೇ ಐಪಿಎಲ್ ವೇಗವಾಗಿ ಸಾಗುತ್ತಿದ್ದು ಇನ್ನೇನು ಕೆಲವೇ ವಾರಗಳಲ್ಲಿ ಈ ಕ್ರಿಕೆಟ್ ಹಬ್ಬ ಮುಗಿಯುವಂತಹ ಸಾಧ್ಯತೆ ಇದೆ. ಮುಂದಿನ ಆಕರ್ಷಣೆಯ ಕೇಂದ್ರ ಬಿಂದುವಾಗಿ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ನಲ್ಲಿ ನಡೆಯುವಂತಹ ಟಿ20 ವಿಶ್ವಕಪ್ ಆಗಿದೆ. ಈಗಲೂ ಕೂಡ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಯಾರೆಲ್ಲ ತಂಡದಲ್ಲಿ ಆಡಲಿದ್ದಾರೆ ಎನ್ನುವಂತಹ ಕುತೂಹಲ ಹಾಗೂ ನಿರೀಕ್ಷೆಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕಾವೇರುತ್ತಿದೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಲೆಜೆಂಡ್ ಕ್ರಿಕೆಟರ್ ಆಗಿರುವಂತಹ ವೀರೇಂದ್ರ ಸೆಹ್ವಾಗ್ (Virendra Sehwag) ತಂಡದಲ್ಲಿ ಯಾರೆಲ್ಲ ಇರಬೇಕು ಎನ್ನುವಂತಹ ತಮ್ಮ ನಿರೀಕ್ಷೆ ಆಟಗಾರರ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದ್ದು ಬನ್ನಿ ಅವರ ಲಿಸ್ಟಿನಲ್ಲಿ ಯಾವೆಲ್ಲ ಆಟಗಾರರು ಇದ್ದಾರೆ ಎನ್ನುವುದನ್ನು ತಿಳಿದುಕೊಳ್ಳೋಣ.

ಸೆಹ್ವಾಗ್ (Virendra Sehwag) ರವರ ಪ್ರಕಾರ ಈ ಆಟಗಾರರು t20 ವಿಶ್ವಕಪ್ ತಂಡದಲ್ಲಿ ಇರಬೇಕು

advertisement

ಮೊದಲನೆಯದಾಗಿ ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮ (Rohit Sharma) ಹಾಗೂ ಯಶಸ್ವಿ ಜೈಸ್ವಾಲ್ (Yashaswi Jaiswal) ಇಬ್ಬರನ್ನು ಕೂಡ ಓಪನರ್ ಆಗಿ ಆಯ್ಕೆ ಮಾಡಿದ್ದಾರೆ. ಇದಾದ ನಂತರ ಉಳಿದ ಕ್ರಮ ಅಂಕವನ್ನು ಆಡೋದಕ್ಕೆ ವಿರಾಟ್ ಕೊಹ್ಲಿ (Virat Kohli) ಸೂರ್ಯ ಕುಮಾರ್ ಯಾದವ್ (Suryakumar Yadav) ಹಾಗೂ ರಿಷಬ್ ಪಂತ್ (Rishab Pant) ಅವರನ್ನು ಸೆಹ್ವಾಗ್ ಆಯ್ಕೆ ಮಾಡಿದ್ದಾರೆ. ಇನ್ನು ಫಿನಿಷರ್ ಜವಾಬ್ದಾರಿಯನ್ನು ನಿರ್ವಹಿಸುವುದಕ್ಕಾಗಿ ರಿಂಕು ಸಿಂಗ್ ಅಥವಾ ಶಿವಂ ದುಬೆ ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕು ಎನ್ನುವುದಾಗಿ ಸೇಹ್ವಾಗ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರವೀಂದ್ರ ಜಡೇಜ ಅವರಂತಹ ಆಲ್ರೌಂಡರ್ ಅನ್ನು ಕೂಡ ಆಯ್ಕೆ ಮಾಡಿರುವಂತಹ ಸೆಹ್ವಾಗ್ ಹಾರ್ದಿಕ್ ಪಾಂಡ್ಯ ಅವರನ್ನು ತಂಡದಿಂದ ದೂರ ಇಟ್ಟಿದ್ದಾರೆ.

Image Source: Scroll.in

ಕುಲದೀಪ್ ಯಾದವ್ ಅವರನ್ನ ಸ್ಪೆಷಲ್ ಸ್ಪಿನ್ನರ್ ಆಗಿ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಇವರ ಜೊತೆಗೆ ಬೌಲಿಂಗ್ ಅಟ್ಯಾಕ್ ಅನ್ನು ಮುನ್ನಡೆಸುವುದಕ್ಕಾಗಿ ಬೂಮ್ರ ಅವರನ್ನು ಕೂಡ ಆಯ್ಕೆ ಮಾಡಿದ್ದಾರೆ. ಆಡುವ ಹನ್ನೊಂದರ ಬಳಗದಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಸಂದೀಪ್ ಶರ್ಮ ಅವರನ್ನು ಕೂಡ ಈ ಹಿರಿಯ ಆಟಗಾರ ಆಯ್ಕೆ ಮಾಡಿದ್ದಾರೆ. ಒಟ್ಟಾರೆಯಾಗಿ ಈ ಬಾರಿಯ t20 ವಿಶ್ವಕಪ್ ಅನ್ನು ಗೆಲ್ಲಲೇ ಬೇಕಾಗಿರುವಂತಹ ಒತ್ತಡದಲ್ಲಿ ಭಾರತೀಯ ಕ್ರಿಕೆಟ್ ತಂಡ ಇದೆ. ಉತ್ತಮ ತಂಡವನ್ನು ಆಯ್ಕೆ ಮಾಡಿ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಈ ಬಾರಿಯ ಟಿ 20 ವಿಶ್ವಕಪ್ ಗೆ ಕಳುಹಿಸಲಿದೆ ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.

advertisement

Leave A Reply

Your email address will not be published.