Karnataka Times
Trending Stories, Viral News, Gossips & Everything in Kannada

Top Sell Bike: ಒಂದೇ ವರ್ಷದಲ್ಲಿ 15 ಲಕ್ಷ ಜನ ಖರೀದಿಸಿದ್ದಾರೆ ಈ ಬೈಕನ್ನು! ಕಡಿಮೆ ಬೆಲೆ 60Km ಮೈಲೇಜ್

advertisement

2024ನೇ ಆರ್ಥಿಕ ವರ್ಷದಲ್ಲಿ ನೋಡೋದಾದ್ರೆ ಅತ್ಯಂತ ಹೆಚ್ಚು ಮಾರಾಟ ಆಗಿರುವಂತಹ ಬೈಕುಗಳಲ್ಲಿ ಟಾಪ್ ಟೆನ್ ಸ್ಥಾನದಲ್ಲಿ ಯಾವೆಲ್ಲ ಬೈಕು (Bike) ಗಳು ಇವೆ ಎನ್ನುವಂತಹ ಲಿಸ್ಟ್ ಈಗಾಗಲೇ ಹೊರಬಂದಿದೆ. ಹಾಗಿದ್ದರೆ ಯಾವ ಬೈಕ್ಗಳು ಯಾವ ಸ್ಥಾನದಲ್ಲಿ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

ಅತ್ಯಂತ ಹೆಚ್ಚು ಮಾರಾಟ ಆಗಿರುವ ಬೈಕ್ ಗಳು (Top Sell Bike)

ಮೊದಲಿಗೆ ಮೊದಲನೇ ಸ್ಥಾನದಲ್ಲಿ ಇರುವಂತಹ ಬೈಕಿನ ಬಗ್ಗೆ ಮಾತನಾಡುವುದಾದರೆ ಎಲ್ಲರಿಗೂ ತಿಳಿದಿರುವ ಹಾಗೆ ಹೀರೋ ಸ್ಪ್ಲೆಂಡರ್ (Hero Splendour) ಬೈಕ್ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. 32. 93 ಲಕ್ಷಕ್ಕಿಂತಲೂ ಹೆಚ್ಚಿನ ಬೈಕ್ ಗಳನ್ನು 2024ನೇ ಆರ್ಥಿಕ ವರ್ಷದಲ್ಲಿ ಮಾರಾಟ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1.15 ಪ್ರತಿಶತ ಬೆಳವಣಿಗೆ ಕಂಡುಬಂದಿದೆ. ಸದ್ಯದ ಮಟ್ಟಿಗೆ 2024ರ ವರ್ಷದಲ್ಲಿ 15 ಲಕ್ಷಕ್ಕೂ ಹೆಚ್ಚಿನ ಮಾರಾಟ ಕಂಡಿರುವಂತಹ ಏಕೈಕ ಬೈಕ್ ಆಗಿದೆ.

ಎರಡನೇ ಸ್ಥಾನದಲ್ಲಿ ಹೋಂಡಾ ಶೈನ್ (Honda Shine)ಬೈಕ್ ಅನ್ನು ನೀವು ಕಾಣಬಹುದಾಗಿತ್ತು ಇದು 2024ರ ಆರ್ಥಿಕ ವರ್ಷದಲ್ಲಿ 14.82 ಲಕ್ಷ ಯೂನಿಟ್ ಬೈಕ್ ಗಳನ್ನು ಮಾರಾಟ ಮಾಡುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. 125 ಸಿಸಿ ಎಂಜಿನ್ ಬೈಕಿನ ಕ್ಯಾಟಗರಿಯಲ್ಲಿ ಇದು ಕಾಣಿಸಿಕೊಳ್ಳುತ್ತದೆ ಎಂದು ಹೇಳಬಹುದು. ಬೆಲೆಯ ವಿಚಾರಕ್ಕೆ ಬಂದರೆ ಕೂಡ ಇದು ಅತ್ಯಂತ ಕಡಿಮೆ ಬೆಲೆಯ ಬೈಕ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

advertisement

Image Source: BikeDekho

ಬಜಾಜ್ ಪಲ್ಸರ್ ವಿಚಾರದ ಬಗ್ಗೆ ಮಾತನಾಡುವುದಾದರೆ 2024ರ ಆರ್ಥಿಕ ವರ್ಷದಲ್ಲಿ ಈ ಬೈಕ್ 14.10 ಲಕ್ಷ ಯೂನಿಟ್ ಗಳನ್ನು ಮಾರಾಟ ಮಾಡುವ ಮೂಲಕ ಜನಪ್ರಿಯ ಬೈಕುಗಳಲ್ಲಿ ಒಂದಾಗಿ ಕಾಣಿಸಿಕೊಂಡಿದೆ. ಇದರ ಹಿಂದಿನ ವರ್ಷದ ಬೈಕ್ ಸೇಲ್ ಗೆ ಹೋಲಿಸಿದರೆ ಈ ಬಾರಿ ಈ ಬೈಕಿನ ಮಾರಾಟ 11.36 ಪ್ರತಿಶತ ಹೆಚ್ಚಾಗಿದೆ.

2024ರ ಆರ್ಥಿಕ ವರ್ಷದಲ್ಲಿ ಹೆಚ್ಚಾಗಿ ಮಾರಾಟ ಆಗಿರುವಂತಹ ಬೈಕುಗಳಲ್ಲಿ ಎಚ್ಎಫ್ ಡೀಲಕ್ಸ್ ಕೂಡ ಕಾಣಿಸಿಕೊಳ್ಳುತ್ತದೆ. ಕಳೆದ ಬಾರಿಗಿಂತ 1.70 ಪ್ರತಿಶತ ಮಾರಾಟದಲ್ಲಿ ಇಳಿಕೆ ಕಂಡು ಬಂದಿದೆ. 10.34 ಲಕ್ಷಕ್ಕೂ ಹೆಚ್ಚಿನ ಯೂನಿಟ್ ಗಳನ್ನು ಇದು ಮಾರಾಟ ಮಾಡಿದೆ.

10 ಲಕ್ಷ ಯೂನಿಟ್ ಗಳಿಗಿಂತ ಕಡಿಮೆ ಮಾರಾಟವಾಗಿರುವ ಬೈಕುಗಳು

ಬಜಾಜ್ ಪ್ಲಾಟಿನ (Bajaj Platina)  ಬೈಕಿನ ಬಗ್ಗೆ ಮಾತನಾಡುವುದಾದರೆ ಕಳೆದ ಬಾರಿಗಿಂತ ಈ ಬಾರಿಯ ಆರ್ಥಿಕ ವರ್ಷದಲ್ಲಿ ಈ ಬೈಕು 5.02 ಲಕ್ಷ ಯೂನಿಟ್ ಗಳನ್ನು ಮಾರಾಟ ಮಾಡಿದೆ. ಟಿವಿಎಸ್ ರೈಡರ್ ಬೈಕಿನ ಮಾರಾಟ ಕೂಡ ಹೆಚ್ಚಾಗಿದ್ದು ಈ ಆರ್ಥಿಕ ವರ್ಷದಲ್ಲಿ ಅದು 4.78 ಲಕ್ಷ ಯೂನಿಟ್ ಬೈಕುಗಳನ್ನು ಇದು ಮಾರಾಟ ಮಾಡಿದೆ. ಇನ್ನು ಟಿವಿಎಸ್ ಅಪಾಚೆ 3.78 ಯೂನಿಟ್, ಪ್ಯಾಶನ್ 3.22 ಲಕ್ಷ ಯೂನಿಟ್, ಹೀರೋ ಗ್ಲಾಮರ್ ಬೈಕ್ 2.35 ಲಕ್ಷಗಳಿಗಿಂತಲೂ ಹೆಚ್ಚಾಗಿ ಯೂನಿಟ್ ಅನ್ನು ಮಾರಾಟ ಮಾಡಿದೆ.

advertisement

Leave A Reply

Your email address will not be published.