Karnataka Times
Trending Stories, Viral News, Gossips & Everything in Kannada

Ashwini Vaishnaw: ಬಡವ ಶ್ರೀಮಂತ ಎನ್ನದೆ ಎಲ್ಲರಿಗೂ ಒಂದೇ ರೂಲ್ಸ್! ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್

advertisement

ನಮ್ಮ ಭಾರತದ ರೈಲ್ವೆ ಇಲಾಖೆಯಲ್ಲಿ ಮೊದಲು ಕೇವಲ ಜನರಲ್ ಹಾಗೂ ಸ್ಲೀಪರ್ ಕೋಚ್ ನಲ್ಲಿ ಮಾತ್ರ ಜನರ ನೂಕುನುಗ್ಗಲು ಕಂಡುಬರುತ್ತಿತ್ತು ಆದರೆ ಈಗ ಇದು ಎಸಿ ಕೋಚ್ ಗೆ ಕೂಡ ಹರಡಿದೆ ಎಂದು ಹೇಳಬಹುದಾಗಿದೆ. ಈ ಕುರಿತಂತೆ ಸಾಕಷ್ಟು ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಚಾರದ ಕುರಿತಂತೆ ರೈಲ್ವೆ ಮಂತ್ರಿ ಆಗಿರುವಂತಹ ಅಶ್ವಿನಿ ವೈಷ್ಣವ್ (Ashwini Vaishnaw) ರವರು ಇನ್ನು ಐದು ವರ್ಷದಲ್ಲಿ ಎಲ್ಲರಿಗೂ ಕನ್ಫರ್ಮ್ ಟಿಕೇಟ್ ಸಿಗಲಿದೆ ಎಂಬುದಾಗಿ ಹೇಳಿದ್ದಾರೆ. ಐದು ವರ್ಷಗಳಲ್ಲಿ ಪ್ರತಿಯೊಂದು ಕೂಡ ವೈಟಿಂಗ್ ಸಮಸ್ಯೆ ಎನ್ನುವುದು ಸಂಪೂರ್ಣವಾಗಿ ನಿವಾರಣೆ ಆಗಲಿದೆ ಎನ್ನುವಂತಹ ಭರವಸೆಯನ್ನು ನೀಡಿದ್ದಾರೆ.

ಐದು ವರ್ಷಗಳಲ್ಲಿ ಹೆಚ್ಚಿಸಲಾಗುತ್ತದೆ ರೈಲ್ವೆ ನೆಟ್ವರ್ಕ್ ನ ಸಾಮರ್ಥ್ಯ

ಈ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಆಡಳಿತ ಅವಧಿಯಲ್ಲಿ ರೈಲ್ವೆ ನೆಟ್ವರ್ಕ್ ನಲ್ಲಿ ಹಾಗೂ ಸಿಸ್ಟಮ್ ನಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ತಂದು ರೈಲ್ವೆ ಇಲಾಖೆ ಬೆಳೆಯುವಂತೆ ಮಾಡಿದ್ದಾರೆ ಹೀಗಾಗಿ ಮುಂದಿನ ಐದು ವರ್ಷಗಳಲ್ಲಿ ಕೂಡ ಈಗ ಹೇಳಿರುವಂತೆ ಯಾರಿಗೂ ಕೂಡ ಕಾಯಬೇಕಾದ ಅಗತ್ಯವಿರುವುದಿಲ್ಲ ಪ್ರತಿಯೊಬ್ಬರಿಗೂ ಕನ್ಫರ್ಮ್ ಟಿಕೆಟ್ ಸಿಗುವ ಬದಲಾವಣೆಯನ್ನು ತರಲಿದ್ದೇವೆ ಎಂಬುದಾಗಿ ಅಶ್ವಿನಿ ವೈಷ್ಣವ್ (Ashwini Vaishnaw) ಹೇಳಿದ್ದಾರೆ.

advertisement

ರೈಲ್ವೆ ಮಂತ್ರಿಗಳು ಹೇಳಿರುವ ಪ್ರಕಾರ 35 ವರ್ಷಗಳಲ್ಲಿ ಭಾರತೀಯ ರೈಲ್ವೆ ಇಲಾಖೆ ಇನ್ನಷ್ಟು ಅಭಿವೃದ್ಧಿಯನ್ನು ಸಾಧಿಸಲಿದೆ ಎಂಬುದಾಗಿ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. 2014ರಿಂದ 2024ರ ವರೆಗೆ ಅಂದರೆ ಮೋದಿ ಅವರ ಆಡಳಿತ ಅವಧಿಯಲ್ಲಿ ಬರೋಬ್ಬರಿ 31,000 ಕಿಲೋಮೀಟರ್ ಗಳಿಗೂ ಅಧಿಕ ರೈಲ್ವೆ ಟ್ರ್ಯಾಕ್ ಅನ್ನು ನಿರ್ಮಾಣ ಮಾಡಲಾಗಿದೆ. ಅದಕ್ಕಿಂತ ಹಿಂದಿನ 10 ವರ್ಷ ಅಂದರೆ 2004 ರಿಂದ 2014ರ ವರೆಗೆ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಕೇವಲ 5000 ಕಿ.ಮೀ ರೈಲ್ವೆ ಟ್ರ್ಯಾಕ್ ಅನ್ನು ಮಾತ್ರ ನಿರ್ಮಾಣ ಮಾಡಲಾಗಿತ್ತು. ಇದನ್ನು ಉದಾಹರಣೆಯಾಗಿ ನೀಡುತ್ತಾ ನರೇಂದ್ರ ಮೋದಿ ಅವರ ದೂರ ದೃಷ್ಟಿಕೋನದಲ್ಲಿ ರೈಲ್ವೆ ಇಲಾಖೆ ಸಾಕಷ್ಟು ಬೆಳವಣಿಗೆಯನ್ನು ಕಂಡಿದೆ ಎಂಬುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಹಾಗೂ ಬಿಜೆಪಿ ಆಡಳಿತ ಅವಧಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಏನಾಗಿದೆ?

ಮನಮೋಹನ್ ಸಿಂಗ್ ರವರು ಪ್ರಧಾನ ಮಂತ್ರಿ ಆಗಿದ್ದಾಗ 2004 ರಿಂದ 2014ರ ವರೆಗೆ ಕೇವಲ 32,000 ಕೋಚ್ ಗಳನ್ನು ಮಾತ್ರ ನಿರ್ಮಾಣ ಮಾಡಲಾಗಿತ್ತು. ಆದರೆ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ 2014ರಿಂದ 2024ರ ವರೆಗೆ 10 ವರ್ಷದಲ್ಲಿ 54,000ಕ್ಕೂ ಅಧಿಕ ಕೋಚ್ ಗಳನ್ನು ನಿರ್ಮಾಣ ಮಾಡಲಾಗಿದೆ. ಇದೇ ರೀತಿಯಲ್ಲಿ ಸಾಕಷ್ಟು ಉದಾಹರಣೆಗಳನ್ನು ನೀಡುತ್ತಾ ಇಂದಿನ ಸರ್ಕಾರಕ್ಕಿಂತ ಈ ಹತ್ತು ವರ್ಷದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ರೈಲ್ವೆ ಇಲಾಖೆಯಲ್ಲಿ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತಂದು ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ ಯಶಸ್ವಿಯಾಗಿ ಪೂರೈಸುವುದಕ್ಕೆ ಸಾಧ್ಯವಾಗಿದೆ ಎಂಬುದಾಗಿ ಅಶ್ವಿನಿ ವೈಷ್ಣವ್ ಹೇಳಿಕೊಂಡಿದ್ದಾರೆ.

advertisement

Leave A Reply

Your email address will not be published.