Karnataka Times
Trending Stories, Viral News, Gossips & Everything in Kannada

Gold Rate: ದಿನೇ ದಿನೇ ಕುಸಿಯುತ್ತಿದೆ ಬಂಗಾರದ ಬೆಲೆ! ಮೇ ತಿಂಗಳ ಅಂತ್ಯಕ್ಕೆ ಎಷ್ಟಗಲಿದೆ ಗೊತ್ತಾ, ತಜ್ಞರ ಉತ್ತರ.

advertisement

ಭೂಮಿಯ ಮೇಲೆ ಇರುವಂತಹ ಅತ್ಯಂತ ಬೆಳೆಬಾಳುವಂತಹ ವಸ್ತುಗಳಲ್ಲಿ ಚಿನ್ನ ಪ್ರಥಮ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ ಯಾಕೆಂದರೆ ಪ್ರತಿಯೊಬ್ಬರು ಕೂಡ ಹೆಚ್ಚಾಗಿ ತಮ್ಮ ಬಳಿ ಹಣ ಬಂದಾಗ ಚಿನ್ನ ಖರೀದಿಸುವಂತಹ ಯೋಜನೆಯನ್ನೇ ಮಾಡುತ್ತಾರೆ. ಒಂದು ಸಮಯದಲ್ಲಿ ಚಿನ್ನದ ಬೆಲೆ (Gold Rate) ಏರಿಕೆಯಾಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಕಾರಣಗಳಿಂದಾಗಿ ಚಿನ್ನದ ಬೆಲೆ ಜಾಗತಿಕ ಮಟ್ಟದಲ್ಲಿ ಕೂಡ ಸಾಕಷ್ಟು ಇಳಿಕೆಯಾಗುತ್ತಿರುವುದು ಇಲ್ಲಿ ಕೂಡ ಅದೇ ಪರಿಣಾಮ ಬೀರುತ್ತಿದೆ.

ಮೇ ತಿಂಗಳ ಅಂತ್ಯದ ಸಂದರ್ಭದಲ್ಲಿ ಭಾರತ ದೇಶದಲ್ಲಿ ಚಿನ್ನದ ಬೆಲೆ ಯಾವ ಮಟ್ಟಕ್ಕೆ ಬರಬಹುದು ಎನ್ನುವುದರ ಬಗ್ಗೆ ಇವತ್ತಿನ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲು ಹೊರಟಿದ್ದೇವೆ ತಪ್ಪದೆ ಲೇಖನವನ್ನು ಕೊನೆಯವರೆಗೂ ಓದಿ.

ಮೇ ಅಂತ್ಯಕ್ಕೆ ಭಾರತದಲ್ಲಿ ಚಿನ್ನದ ಬೆಲೆ!

 

Image Source: Zee Business

 

ಅಲಂಕಾರಕ್ಕಾಗಿ ಕೂಡ ಚಿನ್ನವನ್ನು ಖರೀದಿ (Gold Purchase) ಮಾಡುತ್ತಾರೆ ಕಷ್ಟದ ಕಾಲದಲ್ಲಿ ಸಹಾಯ ಆಗಲಿ ಎನ್ನುವ ಕಾರಣಕ್ಕಾಗಿ ಕೂಡ ಚಿನ್ನವನ್ನ ಖರೀದಿ ಮಾಡುತ್ತಾರೆ. ಮೊದಲಿಂದಲೂ ಏರಿಕೆ ಆಗುತ್ತಿದ್ದ ಚಿನ್ನದ ಬೆಲೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪಮಟ್ಟಿಗೆ ಕಡಿಮೆಯಾಗುವ ಟ್ರೆಂಡ್ ಅನ್ನು ಪ್ರಾರಂಭಿಸಿದೆ. ಹಾಗಿದ್ರೆ ಮೇ ಅಂತ್ಯಕ್ಕೆ ಭಾರತದಲ್ಲಿ ಚಿನ್ನದ ಬೆಲೆ (Gold Rate) ಯಾವ ರೀತಿ ಇರಲಿದೆ ಅನ್ನೋದನ್ನ ತಿಳಿಯೋಣ ಬನ್ನಿ.

advertisement

ಇವತ್ತಿನ ಚಿನ್ನದ ದರ (Gold Price) ವನ್ನು ಭಾರತದಲ್ಲಿ ನೋಡೋದಾದ್ರೆ 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 6,624 ಆಗಿದೆ. ಅಂದರೆ ಅದರ ಅರ್ಥ 10 ಗ್ರಾಂ ಗೆ 66240 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂ ಗೆ 7,226 ರೂಪಾಯಿ ಆಗಿದೆ. ಅಂದರೆ ಹತ್ತು ಗ್ರಾಂ ಗೆ 72260 ಆಗಿದೆ.

ಮೇ ತಿಂಗಳ ಅಂತ್ಯಕ್ಕೆ 6624 ಪ್ರತಿಗ್ರಾಂ ಇರುವಂತಹ 22 ಕ್ಯಾರೆಟ್ ಚಿನ್ನದ ಬೆಲೆ 6200 ರೂಪಾಯಿಗಳ ಆಸುಪಾಸಿನಲ್ಲಿ ಕಾಣಿಸಿಕೊಳ್ಳಬಹುದೆಂಬುದಾಗಿ ಹೇಳಲಾಗಿದೆ. 7226 ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ (Gold Rate) 7,000ಗಳ ಆಸು ಪಾಸಿನಲ್ಲಿ ಕಾಣಿಸಿಕೊಳ್ಳಬಹುದೆಂದು ಅಂದಾಜಿಸಲಾಗಿದೆ.

 

Image Source: Zee Business

 

ಇದು ಕೇವಲ ಅಂದಾಜು ಮಾಡಿರುವಂತಹ ಮೊತ್ತವಾಗಿದ್ದು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯ ಟ್ರೆಂಡ್ ಯಾವ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಕಾಣಬೇಕಾಗಿದೆ. ಚಿನ್ನವನ್ನು ಖರೀದಿ ಮಾಡಿರುವಂತಹ ಹಾಗೂ ಖರೀದಿ ಮಾಡಲಿರುವಂತಹ ಗ್ರಾಹಕರಿಗೆ ಇದು ಬೇರೆ ಬೇರೆ ರೀತಿಯಲ್ಲಿ ಫಲಿತಾಂಶವನ್ನು ಬೀರಲಿದೆ ಯಾಕೆಂದರೆ ಪ್ರತಿಯೊಬ್ಬರೂ ಕೂಡ ಚಿನ್ನದ ಬೆಲೆ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕಾಗಿ ಮುಂದಿನ ಹೂಡಿಕೆಯ ದೃಷ್ಟಿಯಲ್ಲಿ ಅದನ್ನು ಖರೀದಿ ಮಾಡಿರುತ್ತಾರೆ.

ಒಂದು ವೇಳೆ ಕಷ್ಟಕಾಲದಲ್ಲಿ ಅವುಗಳನ್ನು ಮಾರಾಟ ಮಾಡುವ ಪರಿಸ್ಥಿತಿ ಬಂದ್ರೆ ಆಗ ತಾವು ಖರೀದಿ ಮಾಡಿರುವುದಕ್ಕಿಂತ ಚಿನ್ನದ ಹೆಚ್ಚಾಗಿರಬೇಕು ಎನ್ನುವುದಾಗಿ ಅವರು ಬಯಸುತ್ತಾರೆ. ಹೀಗಾಗಿ ಈಗಾಗಲೇ ಚಿನ್ನವನ್ನು ಖರೀದಿ ಮಾಡಿರುವವರು ಚಿನ್ನದ ಬೆಲೆ ಇನ್ನಷ್ಟು ಹೆಚ್ಚಾಗಲಿ ಎಂಬುದಾಗಿ ಬಯಸುತ್ತಾರೆ.

advertisement

Leave A Reply

Your email address will not be published.