Karnataka Times
Trending Stories, Viral News, Gossips & Everything in Kannada

Gold Purchase Limit: ಪ್ಯಾನ್ ಅಥವಾ ಆಧಾರ್ ಇಲ್ಲದೆ ಎಷ್ಟು ಚಿನ್ನವನ್ನು ನಗದು ರೂಪದಲ್ಲಿ ಖರೀದಿಸಬಹುದು ಗೊತ್ತಾ?

advertisement

ಹಬ್ಬ ಬಂತು ಎಂದು ನಗದು ಮೂಲಕ ಎಷ್ಟು ಚಿನ್ನ (Gold) ಬೇಕಾದರೂ ಖರೀದಿಸಬಹುದು ಎಂದು ಯೋಚಿಸುತ್ತಿದ್ದರೆ ಈ ಲೇಖನ ನೀವು ಓದಲೇ ಬೇಕು. ಹೌದು ID Proof/PAN Card ಇಲ್ಲದೆ ಒಬ್ಬ ವ್ಯಕ್ತಿ ಕಾನೂನುಬದ್ಧವಾಗಿ ಎಷ್ಟು ಚಿನ್ನವನ್ನು ಖರೀದಿಸಬಹುದು ಎಂದು ಇಂದು ನಾವು ನಿಮಗೆ ಹೇಳಲಿದ್ದೇವೆ? ಅಲ್ಲದೆ, PAN Card ನೀಡಿದ ನಂತರವೂ ನಗದು ಮೂಲಕ ಖರೀದಿಸಬಹುದಾದ ಚಿನ್ನದ ಪ್ರಮಾಣಕ್ಕೆ ಇರುವ ಮಿತಿ ಏಷ್ಟು ತಿಳಿದರೆ ನಿಜಕ್ಕೂ ಆಶ್ಚರ್ಯ ಪಡ್ತೀರಿ.

Money Laundering ನಿಯಮಗಳು ಕಠಿಣವಾಗಿವೆ:

ಮೊದಲನೆಯದಾಗಿ, ನಗದು ಮೂಲಕ ಚಿನ್ನವನ್ನು ಖರೀದಿಸಲು (Gold Purchase) ಸರ್ಕಾರವು ಯಾವ ನಿಯಮಗಳನ್ನು ಮಾಡಿದೆ ಎಂಬುದನ್ನು ನೋಡುವುದಾದರೆ. 2002 ರ ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (PMLA) ಅಡಿಯಲ್ಲಿ ನಗದು ಹಣದೊಂದಿಗೆ ಚಿನ್ನವನ್ನು ಖರೀದಿಸುವ ನಿಯಮಗಳನ್ನು ಸರ್ಕಾರ ಮಾಡಿದೆ. ಇದಕ್ಕಾಗಿ ಸರ್ಕಾರವು ಡಿಸೆಂಬರ್ 28, 2020 ರಂದು ನೋಟಿಸ್ ಸಹ ಜಾರಿ ಮಾಡಿತ್ತು.

 

 

ಈ ಕಾಯಿದೆಯಡಿ, ಗ್ರಾಹಕರು 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಚಿನ್ನವನ್ನು ನಗದು ರೂಪದಲ್ಲಿ ಖರೀದಿಸಿದರೆ, ಆಭರಣ ವ್ಯಾಪಾರಿಗಳು ತಕ್ಷಣವೇ ಆ ಗ್ರಾಹಕರ KYC ಅನ್ನು ತೆಗೆದುಕೊಳ್ಳುವ ಮೂಲಕ ಅಧಿಕಾರಿಗಳಿಗೆ ತಿಳಿಸಬೇಕು ಅಂದರೆ ಅವರ ಪ್ಯಾನ್ (PAN) ಅಥವಾ ಆಧಾರ್ ಕಾರ್ಡ್ (Aadhaar Card) ನಕಲು ಪ್ರತಿಯನ್ನು ಪಡೆದುಕೊಂಡು ಬಿಲ್ ಜೊತೆ ಲಗತ್ತಿಸಬೇಕು.

advertisement

Income Tax Rules ಏನು ಹೇಳುತ್ತವೆ?

ಆದಾಯ ತೆರಿಗೆ ಕಾನೂನುಗಳು ನಿರ್ದಿಷ್ಟ ಮಿತಿಯನ್ನು ಮೀರಿ ನಗದು ವಹಿವಾಟುಗಳನ್ನು ಅನುಮತಿಸುವುದಿಲ್ಲ. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 269ST ಅಡಿಯಲ್ಲಿ, ಒಬ್ಬ ವ್ಯಕ್ತಿ ಒಂದೇ ದಿನದಲ್ಲಿ 2 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಖರೀದಿಸಿದರೂ ಅಥವಾ ಕೆಲವು ಸಾವಿರ ಮೌಲ್ಯದ ಚಿನ್ನವನ್ನು ಒಂದು ದಿನದಲ್ಲಿ ಒಟ್ಟು 2 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ವಹಿವಾಟುಗಳನ್ನು ಮಾಡುವಂತಿಲ್ಲ. ಒಟ್ಟಿನಲ್ಲಿ ಒಬ್ಬ ವ್ಯಕ್ತಿ ಒಂದು ದಿನದಲ್ಲಿ 2 ಲಕ್ಷ ರೂಪಾಯಿಗಿಂತ ಹೆಚ್ಚು ಮೌಲ್ಯದ ಚಿನ್ನವನ್ನು ನಗದು ರೂಪದಲ್ಲಿ ಖರೀದಿಸುವಂತಿಲ್ಲ.

ಒಬ್ಬ ವ್ಯಕ್ತಿ ಒಂದೇ ದಿನದಲ್ಲಿ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಚಿನ್ನಾಭರಣವನ್ನು ನಗದು ರೂಪದಲ್ಲಿ ಖರೀದಿಸಿದರೆ ಅದು ಆದಾಯ ತೆರಿಗೆ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಅಂತಹ ವಹಿವಾಟುಗಳಲ್ಲಿ ನಗದು ತೆಗೆದುಕೊಳ್ಳುವ ವ್ಯಕ್ತಿಯು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 271 ಡಿ ಪ್ರಕಾರ ನಗದು ವಹಿವಾಟಿನ ಮೊತ್ತದ ಮೇಲೆ ದಂಡವನ್ನು ಪಾವತಿಸಲು ಹೊಣೆಗಾರನಾಗಿರುತ್ತಾನೆ.

2 ಲಕ್ಷಕ್ಕಿಂತ ಹೆಚ್ಚಿನ ಚಿನ್ನ ಖರೀದಿಸಲು PAN/Aadhaar Card ಅಗತ್ಯವಿದೆಯೇ?

ನೀವು 2 ಲಕ್ಷಕ್ಕಿಂತ ಹೆಚ್ಚು ಚಿನ್ನವನ್ನು ಖರೀದಿಸಲು ಬಯಸಿದರೆ ನೀವು ಪ್ಯಾನ್ ಅಥವಾ ಆಧಾರ್ ಕಾರ್ಡ್ ಅನ್ನು ಒದಗಿಸುವುದು ಕಡ್ಡಾಯವಾಗಿದೆ. ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 114B ಅಡಿಯಲ್ಲಿ 2 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಚಿನ್ನದ ಖರೀದಿಗೆ ಪ್ಯಾನ್ ವಿವರಗಳು ಕಡ್ಡಾಯವಾಗಿದೆ, ಇದಲ್ಲದೆ PMLA ನಿಯಮಗಳು ನಿರ್ದಿಷ್ಟ ನಿರ್ದಿಷ್ಟ ಮಿತಿಗಳನ್ನು ಮೀರಿದ ವಹಿವಾಟುಗಳಿಗೆ ಪ್ಯಾನ್ ಅಥವಾ ಆಧಾರ್ ಅನ್ನು ಕಡ್ಡಾಯಗೊಳಿಸಿದೆ.

advertisement

Leave A Reply

Your email address will not be published.