Karnataka Times
Trending Stories, Viral News, Gossips & Everything in Kannada

ATM: ATM ನಿಂದ ನಕಲಿ ನೋಟು ಬಂದರೆ ತಕ್ಷಣವೇ ಹೀಗೆ ಮಾಡಿದ್ರೆ ಅಸಲಿ ನೋಟು ಪಡೆಯಬಹುದು!

advertisement

ಇಂದು ಆಧುನಿಕರಣ ಅಭಿವೃದ್ಧಿ ಯಾದಂತೆ ಕೆಲಸಗಳು ಸರಳವಾಗಿ ಬಿಟ್ಟಿದೆ. ಅದೇ ರೀತಿ ಹಣದ ವಹಿವಾಟುಗಳು ಕೂಡ‌ಸರಳವಾಗಿ ಇಂದು ನಡೆಯುತ್ತದೆ.‌ತಕ್ಷಣಕ್ಕೆ ಹಣದ ಅವಶ್ಯಕತೆ ಇದೆ ಎಂದಾಗ ಬ್ಯಾಂಕ್ ಗೆ‌ ತೆರಳಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಹತ್ತಿರದ ATM ಗೆ ತೆರಳಿ ಹಣ ಡೆಬಿಡ್ ಮಾಡಲು ಅವಕಾಶ ಇದೆ. ಇಂದು ಡಿಜಿಟಲ್ ವಹಿವಾಟು ಆರಂಭವಾದ ನಂತರ ಆನ್‌ಲೈನ್ ವಹಿವಾಟು (Online Transaction) ಗಳಿಗೆ ಜನರು ಹೆಚ್ಚು ಆಸಕ್ತಿ ವಹಿಸಿದ್ದಾರೆ. ಆದರೆ ತಕ್ಷಣಕ್ಕೆ ನಗದು ಬೇಕು ಎಂದಾಗ ಎಟಿಎಂಗಳಿಂದ ಹಣ ಪಡೆಯುತ್ತಾರೆ.‌ ಆದ್ರೆ ATM ನಿಂದ Fake Note ಬಂದರೆ ಏನು ಮಾಡಬೇಕು ಎಂಬ ಸಂದೇಹ ಇದ್ದರೆ ಈ ಲೇಖನ ಓದಿ.

ಈ ನಿಯಮ ಇದೆ:

ಇಂದು ಹೊಸ ತಂತ್ರಗಳೊಂದಿಗೆ ನಕಲಿ ನೋಟು ಪ್ರಿಂಟ್ (Fake Note Print) ಮಾಡಲಾಗುತ್ತಿದೆ. ಅಸಲಿ ಯಾವುದು ನಕಲಿ ಯಾವುದು ಅಂತ ಕಂಡುಹಿಡಿಯುವುದಕ್ಕೂ ಜನರಿಗೆ ಕಷ್ಟವಾಗುತ್ತಿದೆ. ರಿಸರ್ವ್ ಬ್ಯಾಂಕ್ ನಿಗದಿ ಮಾಡಿರುವ ನಿಯಮದ ಪ್ರಕಾರ, ATM ಗಳಿಂದ ಹರಿದ ನೋಟು (Torn Note) ಪಡೆದಿದ್ದರೆ ಬ್ಯಾಂಕ್‌ಗಳಲ್ಲಿ ಇದನ್ನು ರಿಟರ್ನ್ ‌ಮಾಡಬೇಕಾಗುತ್ತದೆ.

ಹೀಗೆ ಮಾಡಿ:

 

advertisement

 

ನೀವು ಎಟಿಎಂನಿಂದ ಹಣವನ್ನು ಪಡೆಯುವ ಸಂದರ್ಭದಲ್ಲಿ ನಕಲಿ ನೋಟು ಬಂದಿದ್ದರೆ ಈ ವಹಿವಾಟಿನ ರಸೀದಿಯನ್ನ ತೆಗೆದುಕೊಂಡು ಯಾವ ಬ್ಯಾಂಕ್ ATM ನಿಂದ ಹಣ ಪಡೆದಿದ್ದೀರಾ ಅಲ್ಲಿಗೆ ತೆರಳಿ ಬ್ಯಾಂಕ್ ಉದ್ಯೋಗಿಗೆ ತಿಳಿಸಿ. ನಂತರ ನಿಮಗೆ ನೀಡಲಾದ ಫಾರ್ಮ್ ಬಳಸಿ‌ ಅದನ್ನು Fill off ಮಾಡಿ ಇಲ್ಲಿ ಎಟಿಎಂನಿಂದ ಹಣ ತೆಗೆದ ಮಾಹಿತಿ ನಮೂದಿಸ ಬೇಕಾಗುತ್ತದೆ. ಹಣ ತೆಗೆದ ದಿನಾಂಕ, ಸಮಯ ಮತ್ತು ಸ್ಥಳವನ್ನು ಬರೆಯಬೇಕಾಗುತ್ತದೆ. ಅಲ್ಲದೆ, ಟ್ರಾನ್ಸಾಕ್ಶನ್ ಸ್ಲಿಪ್ ಜೊತೆಗೆ ನಿಮ್ಮ ಮೊಬೈಲ್‌ಗೆ ಬಂದ ಸಂದೇಶದ ವಿವರಗಳನ್ನು ನೀಡಬೇಕಾಗುತ್ತದೆ.ನಂತರ ಅದನ್ನು ರಸೀದಿ ಮತ್ತು ನಕಲಿ ನೋಟುಗಳೊಂದಿಗೆ ಬ್ಯಾಂಕಿಗೆ ನೀಡಿ.ಒಂದು ವಾರದ ಒಳಗೆ ನಿಮ್ಮ ಹಣವನ್ನು ಬ್ಯಾಂಕ್ ವಾಪಸ್ ನೀಡುತ್ತದೆ.

ಬ್ಯಾಂಕ್ ನಿರಾಕರಣೆ ಮಾಡುವಂತಿಲ್ಲ:

ಎಟಿಎಂಗಳಿಂದ ಹರಿದ ನೋಟುಗಳನ್ನು ಬದಲಾಯಿಸಲು ಯಾವುದೇ ಬ್ಯಾಂಕ್ ನಿರಾಕರಿಸುವಂತಿಲ್ಲ. ಒಂದು ವೇಳೆ ಅರ್ ಬಿ ಐ ನ ನಿಯಮ ಉಲ್ಲಂಘನೆ ಮಾಡಿದ್ರೆ ಬ್ಯಾಂಕ್ ಮತ್ತು ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು.

advertisement

Leave A Reply

Your email address will not be published.