Karnataka Times
Trending Stories, Viral News, Gossips & Everything in Kannada

Realme 12 Pro ಸ್ಮಾರ್ಟ್ ಫೋನ್ ಬಿಡುಗಡೆಗೆ ದಿನಾಂಕ ಫಿಕ್ಸ್ , 200mp ಕ್ಯಾಮೆರಾ ಹಾಗೂ 500mAh ಬ್ಯಾಟರಿ ಸಾಮರ್ಥ್ಯ!

advertisement

ನೀವು ಬಜೆಟ್ ಫ್ರೆಂಡ್ಲಿ ಹಾಗೂ ಅತ್ಯಂತ ವೈಶಿಷ್ಟ್ಯತೆಯಿಂದ ಕೂಡಿದ ಸ್ಮಾರ್ಟ್ ಫೋನ್ ಹುಡುಕುತ್ತಿದ್ದರೆ ರಿಯಲ್ ಮಿ 12 ಸರಣಿ ಬಿಡುಗಡೆ ವರೆಗೂ ಕಾಯುವುದು ಸೂಕ್ತ. ರಿಯಲ್ ಮಿ ತನ್ನ ಸರಣಿ ಫೋನ್ ಗಳ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದು, ಖರೀದಿ ಮಾಡಲು ಜನ ಮುಗಿಬಿದ್ದಿದ್ದಾರೆ.

ರಿಯಲ್ ಮಿ 12 ಪ್ರೊ ಸರಣಿ!

ರಿಯಲ್ ಮೀ 12 ಪ್ರೊ (Realme 12 Pro) ಸರಣಿ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈ ಫೋನ್ ಗಳಲ್ಲಿ ಸಾಕಷ್ಟು ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಡಿಎಸ್ಎಲ್ಆರ್ ಕ್ಯಾಮೆರಾ ಕ್ಲಾರಿಟಿ, ಈ ಸ್ಮಾರ್ಟ್ ಫೋನ್ ನಲ್ಲಿಯೂ ಪಡೆದುಕೊಳ್ಳಬಹುದು. ಅದಕ್ಕಾಗಿ 200 ಎಮ್ ಪಿ ಕ್ಯಾಮೆರಾ ಅಳವಡಿಸಲಾಗಿದೆ.

ರಿಯಲ್ ಮಿ 12 ಪ್ರೋ ಸ್ಮಾರ್ಟ್ ಫೋನ್ ಬಿಡುಗಡೆ ದಿನಾಂಕ!

ಕಂಪನಿ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಹಾಗೂ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಇದೇ ಜನವರಿ 29, 2024 ರಂದು ರಿಯಲ್ ಮಿ ಸ್ಮಾರ್ಟ್ ಫೋನ್ ಬಿಡುಗಡೆ ಆಗಲಿದೆ.

ರಿಯಲ್ ಮಿ 12 ಸರಣಿಯಲ್ಲಿ ಎರಡು ಪ್ರಮುಖ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲಾಗುವುದು. ರಿಯಲ್ ಮಿ 12 ಪ್ರೊ (Realme12 Pro)ಹಾಗೂ ರಿಯಲ್ ಮಿ 12 ಪ್ರೊ+ (Realme12 Pro Plus).

advertisement

ರಿಯಲ್ ಮಿ 12 ಪ್ರೊ ವೈಶಿಷ್ಟ್ಯತೆಗಳು!

  • ಫೋನ್ ಹಿಂಭಾಗದಲ್ಲಿ, ವೃತಾಕಾರದ ಕ್ಯಾಮರಾ ಅಳವಡಿಸಲಾಗಿದ್ದು, ಎಲ್ಇಡಿ ಫ್ಲಾಶ್ ಲೈಟ್ ಜೊತೆಗೆ 3 ಕ್ಯಾಮರಾ ಅಳವಡಿಸಲಾಗಿದೆ.
  • ಕ್ಯಾಮೆರಾ ಕ್ಲಾರಿಟಿ ಅತ್ಯುತ್ತಮವಾಗಿದ್ದು, 200 MP ಪ್ರಾಥಮಿಕ ಕ್ಯಾಮೆರಾ ಅಳವಡಿಸಲಾಗಿದೆ. ಪೆರಿಸ್ಕೋಪ್ ಕ್ಯಾಮೆರಾ ಕೂಡ ಕೊಡಲಾಗಿದೆ. ಇದರ ಜೊತೆಗೆ 80 ಫೋಕಲ್ ಲೆಂತ್ ಹಾಗೂ ಪೋರ್ಟ್ರೇಟ್ ಎಫೆಕ್ಟ್ ಬೆಂಬಲಿಸುತ್ತದೆ.
  • 8 MP ಅಲ್ಟ್ರಾ ವೈಡ್ ಕ್ಯಾಮೆರಾ, 32 ಎಂ ಪಿ ಟೆಲಿಫೋಟೋ ಕ್ಯಾಮರಾ ಕೂಡ ಇದೆ.
  • 3,699 ರೂಪಾಯಿ ಮೌಲ್ಯದ Buds Air5 ಕೂಡ ಪಡೆಯಬಹುದು. ರಿಯಲ್ ಮಿ 12 ಸರಣಿ ಫೋನ್ ನಲ್ಲಿ 3x ಜೂಮ್ ಕೂಡ ನೀಡಲಾಗಿದೆ. 120 x ಡಿಜಿಟಲ್ ಜೂಮ್ ಅನ್ನು ಬೆಂಬಲಿಸುತ್ತದೆ.

ರಿಯಲ್ ಮೀ 12 ಪ್ರೊ ಫೋನ್ ಪ್ರೊಸೆಸರ್!

6.67 ಇಂಚಿನ ಕರ್ವ್ಡ್ ಎಡ್ಜ್ AMOLED ಡಿಸ್ಪ್ಲೇ ಕಾಣಬಹುದು. ಇದು ಪೂರ್ಣ ಹೆಚ್ ಡಿ ಯನ್ನು ಬೆಂಬಲಿಸುತ್ತದೆ. ರಿಯಲ್ ಮಿ 12 ಪ್ರೊ Qualcomm Snapdragon 6 Gen 1 ಪ್ರೊಸೆಸರ್ ಅನ್ನು ಬೆಂಬಲಿಸಿದ್ರೆ ರಿಯಲ್ ಮಿ 12 Pro+ Qualcomm Snapdragon 7s Gen 2 ಪ್ರೊಸೆಸರ್ ಹೊಂದಿದೆ.

ಎರಡು ಸರಣಿ ಫೋನ್ ನಲ್ಲಿ 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಕೊಡಲಾಗಿದೆ. 67W ವೇಗದ ಚಾರ್ಜರ್ ಸೌಲಭ್ಯ ಇದ್ದು 500mAh ಬ್ಯಾಟರಿ ಹೊಂದಿದೆ. ಜನವರಿ 29, 2024ರಂದು 12 ಗಂಟೆಗೆ ರಿಯಲ್ ಮೀ ಸರಣಿ ಬಿಡುಗಡೆ ಆಗಲಿದ್ದು, ಈ ಫೋನ್ಗಳ ಬೆಲೆ ಇನ್ನೂ ಬಹಿರಂಗಗೊಂಡಿಲ್ಲ.

advertisement

Leave A Reply

Your email address will not be published.