Karnataka Times
Trending Stories, Viral News, Gossips & Everything in Kannada

Lava: ಲಾವಾ ಮೊಬೈಲ್ಸ್ ಮೇಲೆ ಅಮೇಜಾನ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ಭರ್ಜರಿ ರಿಯಾಯಿತಿ, ಮಿಸ್ ಮಾಡ್ಕೊಳ್ಬೇಡಿ

advertisement

ದಸರಾ ದೀಪಾವಳಿ ಅವಧಿಯ ಸೇಲ್ ಗಳನ್ನು ಬಿಟ್ಟರೆ ಹೆಚ್ಚಾಗಿ ಆಫರ್ ಗಳು ಸಿಗುವುದು ರಿಪಬ್ಲಿಕ್ ಡೇ ಸಮಯದ ಸೇಲ್ ನಲ್ಲಿ. ಗಣರಾಜ್ಯ ದಿನಕ್ಕೆ ಇನ್ನೇನು ಹತ್ತು ದಿನಗಳು ಇದೆ ಎನ್ನಬೇಕಾದರೆ ಅಮೆಜಾನ್ ನಲಿ ರಿಪಬ್ಲಿಕ್ ಡೇ ಸೇಲ್ ನಡೆಯುತ್ತಿದೆ. ಈ ಸೇಲ್ ನಲ್ಲಿ ಲಾವಾ ಕಂಪನಿಯ ಫೋನ್ ಗಳು ಭಾರಿ ಡಿಸ್ಕೌಂಟ್ ದರದೊಂದಿಗೆ ಲಭ್ಯ ಇವೆ. ಭಾರತದ ಮೊಬೈಲ್ ಫೋನ್ ತಯಾರಕ ಕಂಪನಿ ಲಾವಾ ನೊಯಿಡಾದಲ್ಲಿ ತನ್ನ ಹೆಡ್ ಆಫೀಸ್ ಅನ್ನು ಹೊಂದಿದೆ. ದೇಶದಾದ್ಯಂತ ಆರು ಆಫೀಸ್ ಗಳನ್ನು ಹಾಗೂ ಮೂರು ಮೊಬೈಲ್ ತಯಾರಿಕಾ ಘಟಕಗಳನ್ನು ಈ ಕಂಪನಿ ಹೊಂದಿದೆ.

ತನ್ನ ಸ್ಮಾರ್ಟ್ ಫೋನ್ ಸರಣಿಯ ಫೀಚರ್ಸ್ಗಳಿಂದ ತುಂಬಿರುವ ಮೊಬೈಲ್ ಫೋನ್ ಗಳನ್ನು ಲಾವಾ (Lava) ಅಮೆಜಾನ್ ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ಉತ್ತಮ ಡಿಸ್ಕೌಂಟ್ ನೊಂದಿಗೆ ನೀಡುತ್ತಿದೆ. ಹಾಗಾದರೆ ಯಾವ ಮೊಬೈಲ್ ಗಳು ಲಭ್ಯ ಇವೆ ? ಅದರಲ್ಲಿರುವ ಫೀಚರ್ಸ್ ಗಳು ಏನು ? ಹಾಗೂ ಯಾವ ಬೆಲೆಗೆ ಈ ಫೋನ್ ಗಳು ಲಭ್ಯ ಇದೆ ನೋಡೋಣ.

Lava Storm 5G

ಈ ಫೋನ್ ಗೇಮರ್ಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾದ ಸ್ಮಾರ್ಟ್ ಫೋನ್ ಆಗಿದೆ. ಇದು ಗೇಮರ್ಸ್ ಗಳಿಗೆ ಲ್ಯಾಗ್ ಫ್ರೀ ಎನ್ನಬಹುದಾದ ಪರ್ಫಾರ್ಮೆನ್ಸ್ ನೀಡುತ್ತದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್ ನೊಂದಿಗೆ ಬರುವ ಈ ಫೋನ್ 8 ಜಿಬಿ ರಾಮ್ (RAM) ಅನ್ನು ಹೊಂದಿದೆ ಹಾಗೂ ಇದನ್ನು 16ಜಿಬಿಗಳ ತನಕ ಎಕ್ಸ್ ಪಾಂಡ್ ಮಾಡಬಹುದಾಗಿದೆ. 128 ಜಿಬಿಯ ಸ್ಟೋರೇಜ್ ನೊಂದಿಗೆ ಈ ಫೋನ್ ಲಭ್ಯವಿದ್ದು ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಇದ್ದಲ್ಲಿ 10% ನ ಅಡಿಷನಲ್ ಡಿಸ್ಕೌಂಟ್ ಸಿಗಲಿದೆ. ಈ ಎಲ್ಲಾ ಡಿಸ್ಕೌಂಟ್ಗಳನ್ನು ಪರಿಗಣಿಸಿ ಸ್ಟಾರ್ಮ್ 5ಜಿ 11,499 ರೂಪಾಯಿಗಳಿಗೆ ಲಭ್ಯವಾಗಲಿದೆ.

ಬ್ಲೇಝ್ 5 ಜಿ (Lava Blaze 5G)

ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಹೊಂದಿರುವ ಬ್ಲೇಝ್ ಬ್ಲೇಝ್ 5 ಜಿ ಫೋನ್ ಪ್ರೀಮಿಯಂ ಎನ್ನಬಹುದಾದ ಗ್ಲಾಸ್ ಬ್ಯಾಕ್ ಅನ್ನು ಹೊಂದಿದೆ. 50 ಮೆಗಾ ಪಿಕ್ಸೆಲ್ ಎ.ಐ (AI) ಟ್ರಿಪಲ್ ಕ್ಯಾಮೆರಾ ಸೆಟ್ ಅಪ್ ಅನ್ನು ಈ ಫೋನ್ ಹೊಂದಿದೆ. ಬ್ಲೇಸ್ ಫೈಜಿ ಫೋನ್ 3 ಮಾದರಿಗಳಲ್ಲಿ ಲಭ್ಯವಿದ್ದು ಇದರ ಬೆಲೆಗಳು 9499 ದಿಂದ ಆರಂಭವಾಗಿ 10499 ತನಕ ಇದೆ. ಎಸ್. ಬಿ. ಐ ನ ಆಫರ್ ಗಳು ಈ ಫೋನ್ ನ ಮೇಲೂ ಲಭ್ಯ ಇದೆ.

advertisement

ಅಗ್ನಿ 2 – 5ಜಿ (Lava Agni2 5G)

ಅಗ್ನಿ 2 – 5ಜಿ ಫೋನ್ 6.7 ಇಂಚ್ ನ ಫುಲ್ ಎಚ್ ಡಿ ಪ್ಲಸ್ ಡಿಸ್ಪ್ಲೇ ಅನ್ನು ಹೊಂದಿದೆ. ಇದರ ಡಿಸ್ಪ್ಲೆ 120 ಹರ್ಡ್ಜ್ ನ ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಈ ಫೋನ್ನಲ್ಲಿ ಎಮೋಲೆಡ್ ಡಿಸ್ಪ್ಲೇ ಇದ್ದು ಅದು ಕರ್ವ್ ಡ್ ಗ್ಲಾಸ್ ಕೂಡ ಹೊಂದಿದೆ, ಈ ಫೋನ್ ನ ಕಲರ್ ಡೆಪ್ತ್ 1.07 ಬಿಲಿಯನ್ ಆಗಿದ್ದು ಅತ್ಯುತ್ತಮವಾದ ಡಿಸ್ಪ್ಲೇ ಅನುಭವವವನ್ನು ಪಡೆಯಬಹುದು. ಡಿಸ್ಕೌಂಟ್ಗಳನ್ನು ಪರಿಗಣಿಸಿ ಈ ಫೋನ್ 15,499 ಗಳಿಗೆ ಲಭ್ಯವಿದ್ದು ಇದರಲ್ಲಿ 3,500 ರೂಪಾಯಿಯ ಎಕ್ಸ್ಚೇಂಜ್ ಬೋನಸ್ ಕೂಡ ಸೇರಿಕೊಂಡಿದೆ.

Lava O1

ಲಾವಾ 1 ಎಂಟ್ರಿ ಲೆವೆಲ್ ನ ಸ್ಮಾರ್ಟ್ ಫೋನ್ ಆಗಿದ್ದು ಬೇಸಿಕ್ ಫೀಚರ್ಸ್ ಗಳನ್ನು ಹೊಂದಿದೆ. ಇದು ಯುನಿ ಎಸ್ ಓ ಸಿ ಟಿ606 ಸಿಪಿಯು ನೊಂದಿಗೆ ಬರುತ್ತದೆ. ಇದು 90 ಹರ್ಡ್ಜ್ ರಿಫ್ರೆಶ್ ರೇಟ್ ಹೊಂದಿರುವ ಎಲ್ ಸಿ ಡಿ ಸ್ಕ್ರೀನ್ ಅನ್ನು ಹೊಂದಿದೆ. ಲಾವಾ 1 ನ ಬೆಲೆ 6,999 ಆಗಿದೆ.

advertisement

Leave A Reply

Your email address will not be published.