Karnataka Times
Trending Stories, Viral News, Gossips & Everything in Kannada

HSRP: HSRP ನಂಬರ್ ಪ್ಲೇಟ್ ಬಗ್ಗೆ ಬೆಳ್ಳಂಬೆಳಿಗ್ಗೆ ಸಚಿವರಿಂದ ಹೊಸ ಮಾಹಿತಿ! ಇದುವರೆಗೂ ಬುಕ್ ಮಾಡದವರು ತಿಳಿದುಕೊಳ್ಳಿ

advertisement

ಹಳೆ ಕಾಲದ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಕಡ್ಡಾಯವಾಗಿ ಬೇಕು ಎಂದು ಮನಗಂಡು ರಾಜ್ಯದಲ್ಲಿ ಹಳೆ HSRP ನೋಂದಣಿ ಮಾಡಿಸಲು ಜನರಿಗೆ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಸರಕಾರ ಅನೇಕ ಸಲ ಕಾಲಾವಕಾಶ ನೀಡಿದ್ದರೂ ಜನರು ಮಾತ್ರ ಈ ಬಗ್ಗೆ ಪೂರ್ತಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆರಂಭಿಕ ಎರಡು ತಿಂಗಳ ಒಳಗೆ ಎಲ್ಲ ವಾಹನಕ್ಕೆ HSRP  ಅಳವಡಿಕೆ ಮಾಡಬಹುದು ಎಂದೇ ಯೋಜಿಸಲಾಗಿತ್ತು ಆದರೆ ಅದು ಸಾಧ್ಯವಾಗಲಿಲ್ಲ.

ಗಡುವು ವಿಸ್ತರಣೆ ಆಗಲಿದೆಯೇ?

ಫೆಬ್ರವರಿ 17 , 2024 ಕೊನೆಯ ದಿನ ಎಂದು ಹೇಳಲಾಗಿತ್ತು. ಆದರೆ ಫೆಬ್ರವರಿ ತಿಂಗಳಿನಲ್ಲಿ ಎರಡು ಕೋಟಿ ವಾಹನದಲ್ಲಿ ಕೇವಲ 5%. ಮಾತ್ರವೇ HSRP ಅಳವಡಿಕೆ ಮಾಡಿಕೊಂಡಿದ್ದರು. HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿದ್ದ ಪ್ರಮಾಣ ಕಡಿಮೆಯಾಗಿದೆ ಹಾಗಾಗಿ ಈ ಗಡುವನ್ನು ಮೇ 31, 2024ರ ವರೆಗೆ ವಿಸ್ತರಣೆ ಮಾಡಲಾಗಿದೆ. ಮೇ ಕೊನೆ ದಿನದ ವರೆಗೆ ಕಾಲಾವಕಾಶ ನೀಡಿದ್ದರೂ ಕೂಡ ಇ‌ನ್ನು ಕಾಲಾವಕಾಶ ಸಿಗುತ್ತಾ ಎಂದು ಜನ ಕಾಯುತ್ತಲಿದ್ದು  ಈ ಬಗ್ಗೆ  ಸಚಿವರು ಕೂಡ ಬಹಿರಂಗ ಹೇಳಿಕೆ ನೀಡಿದ್ದಾರೆ.

ಬಹಳ ಬಾಕಿ ಇದೆ

advertisement

ಕಳೆದ ಫೆಬ್ರವರಿ ತಿಂಗಳಲ್ಲಿ ರಾಜ್ಯದ ಎರಡು ಕೋಟಿ ವಾಹನದಲ್ಲಿ 5% ವಾಹನಕ್ಕೆ ಮಾತ್ರ HSRP ಅಳವಡಿಸಲಾಗಿದೆ. ಈ ಬಾರಿ ಎಪ್ರಿಲ್  25ರ ತನಕ ರಾಜ್ಯದಲ್ಲಿ 34ಲಕ್ಷಕ್ಕೂ ಅಧಿಕ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಬರೀ ಎಪ್ರಿಲ್ ಒಂದೇ ತಿಂಗಳಿಗೆ 18.55 ಲಕ್ಷ  ವಾಹನಕ್ಕೆ ನೋಂದಣಿ ಈಗ ಕೂಡ ನಡೆಯುತ್ತಿದೆ. ಎರಡು ಕೋಟಿ ವಾಹನಗಳಿಗೆ HSRP ಅಳವಡಿಕೆ ಮಾಡಬೇಕಿದ್ದು ಮೇ 31ರ ಒಳಗೆ 75ಲಕ್ಷ ನಂಬರ್ ಪ್ಲೇಟ್ ನೋಂದಣಿ ಆಗಲಿದೆ ಎಂಬ ನಿರೀಕ್ಷೆ ಇದೆ. ಹಾಗಿದ್ದರೂ ಮೇ ಬಳಿಕ ಗಡುವಿನ ವಿಸ್ತರಣೆ ಆಗಬಹುದು ಎಂದು ಕಾಯುತ್ತಿರುವವರು ಇದ್ದಾರೆ. ಆದರೆ ಗಡುವು ವಿಸ್ತರಣೆ ಬಗ್ಗೆ ಸಾರಿಗೆ ಇಲಾಖೆ ಯಾವುದೇ ಹೇಳಿಕೆ ನೀಡಲಿಲ್ಲ.

Image Source: Paytm

ಸಚಿವರು ಹೇಳಿದ್ದೇನು?

ಈ ಬಗ್ಗೆ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ (Ramalinga Reddy)ಅವರು ಮಾತನಾಡಿ, HSRP ಅಳವಡಿಕೆಗೆ ರಾಜ್ಯ ಸರಕಾರ ನಿರೀಕ್ಷೆ ಮಾಡಿದ್ದ ಪ್ರಮಾಣದಲ್ಲಿ ಇನ್ನೂ ಕೂಡ ನೋಂದಣಿ ಮಾಡಿಕೊಳ್ಳಲಿಲ್ಲ. ಯಾವಾಗ ಈ ಹೊಸ HSRP ಪೂರ್ಣ ಗೊಳ್ಳಲಾಗುವುದು ಎಂಬುದು ಪೂರ್ತಿ ಮಾಹಿತಿ ಇಲ್ಲ. ಮೇ 31ರ ಒಳಗೆ ಒಂದು ಕೋಟಿಯಾದರೂ HSRP ಅಳವಡಿಕೆಗೆ ಮಾಡಬೇಕು ಎಂದು ಅಂದುಕೊಂಡಿದ್ದಾಗಿ ಅವರು ತಿಳಿಸಿದ್ದಾರೆ. ಗಡುವು ಸದ್ಯ ಮೇ 31ರ ತನಕವೇ ಇರಲಿದೆ ಅಲ್ಲಿಂದ ವಿಸ್ತರಣೆ ಆಗುವ ಬಗ್ಗೆ ಈಗಲೇ ಮಾಹಿತಿ ನೀಡಲು ಸಾಧ್ಯ ಇಲ್ಲ ಎಂದಿದ್ದಾರೆ. ಬಹುಶಃ ಇದೇ ಕೊನೆಯ ಗಡುವು ಆಗುವ ಸಾಧ್ಯತೆ ಇದ್ದು ಸದ್ಯ ಅವರ ಹೇಳಿಕೆ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಹೊಸದಾಗಿ ವಾಹನ ಖರೀದಿ‌ ಮಾಡುವವರಿಗೆ ರಿಲೀಫ್ ಆಗಲಿದೆ. ಹಾಗೆಯೇ ವಾಹನ ಖರೀದಿ ಮಾಡಿ ಒಂದು ವರ್ಷ ಕೂಡ ಆಗಿರದಿದ್ದರೆ ವಾಹನ ಖರೀದಿ ಮಾಡಿದ್ದವರಿಗೆ ಖರೀದಿ ಮಾಡಿದ್ದ ಶೋ ರೂಂ ನವರೆ ನಂಬರ್ ಪ್ಲೇಟ್ ಹಾಕಿಸಿಕೊಡಬೇಕು ಎಂಬ ನಿಯಮ ಕೂಡ ಇದೆ ಹಾಗಾಗಿ ವೆಬ್ಸೈಟ್ ನಲ್ಲಿ ಪರದಾಡುವ ಅಗತ್ಯವೂ ಇಲ್ಲ. ಹೊಸ ವಾಹನ ಖರೀದಿ ಮಾಡುವಾಗ HSRP ರಿಜಿಸ್ಟ್ರೇಶನ್ ಆಗಿಯೇ ನಿಮ್ಮ ಕೈ ಸೇರಲಿದೆ ಹಾಗಾಗಿ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇರಲಾರದು. ಅದೇ ರೀತಿ ಹಳೆ ವಾಹನಕ್ಕೆ ಗಡುವು ವಿಸ್ತರಣೆ ಆದ ಬಳಿಕವು ನಂಬರ್ ಪ್ಲೇಟ್ ಅಳವಡಿಸದೆ ಇದ್ದರೆ ಮೇ 31ರ ಬಳಿಕ ಅಂತಹ ವಾಹನ ಸವಾರರಿಗೆ 500-1,500 ವರೆಗೆ ದಂಡ ವಿಧಿಸಲಾಗುವುದು ಸಾಕಷ್ಟು ಸಲ ಇದೆ ತರ ನಂಬರ್ ಪ್ಲೇಟ್ ಅಳವಡಿಸದೆ ಮೂರಕ್ಕಿಂತ ಅಧಿಕ ಬಾರಿ ದಂಡ ಪಾವತಿ ಮಾಡುತ್ತಲಿದ್ದರೆ ಅಂತವರ ವಿರುದ್ಧ ಶಸ್ತಿನ ಕ್ರಮ ಕೈಗೊಳ್ಳುವ ಜೊತೆಗೆ ಅಗತ್ಯವಿದ್ದರೆ ಲೈಸೆನ್ಸ್ (ಪರವಾನಿಗೆ) ಕೂಡ ರದ್ದು ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿದೆ.

advertisement

Leave A Reply

Your email address will not be published.