Karnataka Times
Trending Stories, Viral News, Gossips & Everything in Kannada

Rajiv Gandhi Housing Yojana: ಬಡವರಿಗೆ ಹೊಸ ಮನೆ ಕಟ್ಟಿಕೊಳ್ಳಲು ಸರ್ಕಾರದ ಈ ಯೋಜನೆಯಲ್ಲಿ ಸಿಗುತ್ತಿದೆ ಹಣ, ತಕ್ಷಣವೇ ಅರ್ಜಿ ಸಲ್ಲಿಸಿ

advertisement

ಮನೆ ಕಟ್ಟುವುದು , ಒಂದು ವಾಸ್ತವ್ಯ ಕಂಡುಕೊಳ್ಳುವುದು ಪ್ರತಿಯೊಬ್ಬರ ಜೀವನದ ಒಂದು ಅತ್ಯಮೂಲ್ಯ ಕನಸ್ಸು ಎನ್ನಬಹುದು ಆದರೆ ಹಣ ಇದ್ದವರಿಗೆ ಈ ಕನಸ್ಸು ಈಡೇರಲು ಹೆಚ್ಚು ಕಾಲ ಬೇಕಾಗಲಾರದು ಅದರ ಬದಲಿಗೆ ಹಣ ಇದ್ದಂತೆ ಎರಡು ಮೂರು ಅಂತಸ್ತಿನ ಮನೆ ಕೂಡ ಶೀಘ್ರವೇ ಕಟ್ಟಿಕೊಂಡು ಬಿಡುತ್ತಾರೆ ಈ ನಿಟ್ಟಿನಲ್ಲಿ ಬಡವರ್ಗದವರಿಗೆ ಮನೆ ಕಟ್ಟುವುದು ಒಂದು ದೊಡ್ಡ ಹೊರೆ ಎಂದು ಹೇಳಬಹುದು.ಮನೆ ಕಟ್ಟಬೇಕು ಎಂದಿದ್ದರೆ ಅದಕ್ಕೆ ಲಕ್ಷಾಂತರ ರೂಪಾಯಿ ಬೇಕು ಸರಕಾರ ಏನಾದರು ನೆರವು ನೀಡಬಹುದೇ ಎಂದು ಕಾಯುವವರಿಗೆ ಇಲ್ಲಿದೆ ಶುಭ ಸುದ್ದಿ‌.

ಬಡವರ್ಗಕ್ಕೆ ನೆರವು:

ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನತೆಗೆ ವಸತಿ ಕೂಡ ಮೂಲಭೂತ ಸೌಕರ್ಯದಲ್ಲಿ ಒಂದು ಎಂದು ಮನಗಂಡು ಈ ಮನೆ ಕಟ್ಟಬೇಕು ಎಂದು ಅಂದು ಕೊಂಡವರಿಗೆ ಹಣಕಾಸಿನ ನೆರವು ನೀಡುವ ಮೂಲಕ ನೆರವಾಗುತ್ತಿದೆ. ಹಾಗಾಗಿ ನೀವು ಕೂಡ ಬಡವರ್ಗದ ಸಮುದಾಯಕ್ಕೆ ಸೇರಿದ್ದು ಮನೆ ಕಟ್ಟಲು ಸರಕಾರದ ಸೌಲಭ್ಯ ಸಿಗಬೇಕು ಎಂಬ ನಿರೀಕ್ಷೆ ಯಲ್ಲಿ ಇದ್ದರೆ ಈ ಮಾಹಿತಿ ಪೂರ್ತಿ ಓದಿ ಕೂಡಲೇ ಅರ್ಜಿ ಸಲ್ಲಿಸಿ ಆಗ ನಿಮಗೆ ಅನೇಕ ಪ್ರಯೋಜನೆ ಸಿಗುತ್ತದೆ.

ಯಾವುದು ಈ ಯೋಜನೆ:

 

Image Source: Kannada Mahiti

 

advertisement

ರಾಜೀವ್ ಗಾಂಧಿ ವಸತಿ ನಿಗಮದಿಂದ (Rajiv Gandhi Housing Yojana) ಹೊಸದಾಗಿ ಮನೆ ನಿರ್ಮಾಣ ಮಾಡಬೇಕು ಎಂದು ಇದ್ದವರಿಗೆ ವಿಶೇಷ ಸೌಲಭ್ಯ ನೀಡಲು ಸರಕಾರ ಮುಂದಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ಈಗಾಗಲೇ ಹೊಸದಾಗಿ ಅರ್ಜಿ ಆಹ್ವಾನಿಸಲು ಅವಕಾಶ ನೀಡಲಾಗಿದೆ. ಈ ಸೌಲಭ್ಯ ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರಿಗೆ ಮಾತ್ರ ಇರಲಿದೆ.

ಯೋಜನೆ ಅಡಿಯಲ್ಲಿ 7.50 ಲಕ್ಷ ರೂಪಾಯಿ ಯನ್ನು ನೀಡಲಾಗುತ್ತದೆ. ಇದರಲ್ಲಿ 3.50 ಲಕ್ಷ ಕೇಂದ್ರದ ನೆರವಾಗಿದ್ದು ಉಳಿದ 3ಲಕ್ಷ ರಾಜ್ಯದಿಂದ ಅನುದಾನ ಸಿಗುತ್ತದೆ. ಉಳಿದ ಒಂದು ಲಕ್ಷ ಫಲಾನುಭವಿಗಳು ಭರಿಸಬೇಕು.

ಈ ದಾಖಲೆ ಅಗತ್ಯ:

ಈ ಒಂದು ಯೋಜನೆಗೆ ನೀವು ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಬಳಿ ಕೆಲವು ಅರ್ಹ ದಾಖಲೆಗಳು ಹೊಂದಿರಬೇಕಿದೆ‌‌. ಆಧಾರ್ ಕಾರ್ಡ್, ರೇಶನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್, ಮೃತರ ಪ್ರಮಾಣ ಪತ್ರ ಇತರ ದಾಖಲೆಯನ್ನು ನೀವು ಕಡ್ಡಾಯವಾಗಿ ಸಲ್ಲಿಕೆ ಮಾಡಬೇಕು. ಹೀಗೆ ಮಾಡುವುದರಿಂದ ನಿರಾಶ್ರಿತರಿಗೆ ಮನೆ ನಿರ್ಮಾಣ ಮಾಡಲು ಅರ್ಜಿ ಸಲ್ಲಿಕೆ ಮಾಡಿದವರಿಗೆ ಹಣ ಕೂಡಲೇ ಮಂಜೂರಾಗಲಿದ್ದು ಕೂಡಲೇ ಬೆಚ್ಚಗಿನ ಆಶ್ರಯ ನೀಡುವ ಪುಟ್ಟ ಮನೆ ನಿರ್ಮಾಣ ಮಾಡಬಹುದು.

ಈ ವೆಬ್ಸೈಟ್ ಬಳಸಿ:

ನೀವು ಕೂಡ ಮನೆ ನಿರ್ಮಾಣ ಮಾಡಬೇಕು ಎಂದು ಕೊಂಡಿದ್ದು ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು https://ashraya.Karnataka.gov.in.nanamane/index.aspect ಎಂಬ ವೆಬ್ಸೈಟ್ ಗೆ ಭೇಟಿ ನೀಡಿ. ಇದರ ಒಳ ಪ್ರವೇಶ ಪಡೆದ ಬಳಿಕ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಆಯ್ಕೆ ಮಾಡಿರಿ. ಬಳಿಕ ನಿವಾಸಿ ಪ್ರಮಾಣ ಪತ್ರದ RD ಸಂಖ್ಯೆ ಹಾಗೂ ಅರ್ಜಿ ದಾರರ ಇತರ ವೈಯಕ್ತಿಕ ಹಾಗೂ ಕುಟುಂಬ ದಾಖಲಾತಿ ಕೇಳಲಾಗುವುದು. ಹೀಗೆ ಮಾಡಿದರೆ ನೀವು ಅರ್ಜಿ ಸಲ್ಲಿಸಿದ್ದಕ್ಕೆ ಕನ್ಫರ್ಮೇಶನ್ ಬರಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೂಡ ನೀವು ವಿಚಾರಣೆ ಮಾಡಬಹುದು.

advertisement

Leave A Reply

Your email address will not be published.