Karnataka Times
Trending Stories, Viral News, Gossips & Everything in Kannada

Bajaj NS 400: ಯುವಕರಿಗೆ ಬಂಪರ್ ಆಫರ್ ಬಜಾಜ್ NS400 ಆರಂಭಿಕ ಬೆಲೆ ಎಷ್ಟಿರಲಿದೆ ಗೊತ್ತಾ! ಬೆಂಕಿ ಡಿಸೈನ್

advertisement

ಸ್ನೇಹಿತರೆ, ನಮ್ಮ ಭಾರತದಲ್ಲಿ ಬಜಾಜ್ ಪಲ್ಸರ್ ಬೈಕ್ ಗಳನ್ನು ಇಷ್ಟ ಪಡದೆ ಇರುವವರು ತೀರಾ ಕಡಿಮೆ ಮಾರುಕಟ್ಟೆಗೆ ಕಾಲಿಟ್ಟು ವರ್ಷಕ್ಕೆ ಉರುಳಿದರು ಇಂದಿಗೂ ಕೂಡ ಯುವಕರ ರಕ್ತದಲ್ಲಿ ಬೆರೆತು ಹೋಗಿರುವಂತಹ ಬಜಾಜ್ ಪಲ್ಸರ್ ಬೈಕ್ ಗಳು ತನ್ನ ಕ್ರೇಜನ್ನು ಹಾಗೆ ಉಳಿಸಿಕೊಂಡು ಬಂದಿದೆ. ಹೀಗಿರುವಾಗ ಕೆಲ ದಿನಗಳಲ್ಲೇ ಬಜಾಜ್ ಕಂಪನಿ ಪಲ್ಸರ್ ಬ್ರಾಂಡ್ ನ್ಯೂ NS400(Bajaj Pulsar Brand New Ns400) ಬೈಕನ್ನು ಬಿಡುಗಡೆ ಮಾಡಲು ಸಕಲ ಸಿದ್ಧತೆಯನ್ನು ನಡೆಸುತ್ತಿದ್ದು ಇದರ ಬೆಲೆಯ ಕುರಿತು ಮಾಹಿತಿ ತಿಳಿದ ಯುವಕರು ಖುಷಿಯಿಂದ ಕುಣಿಯಲು ಶುರು ಮಾಡಿದ್ದಾರೆ. ಹಾಗಾದ್ರೆ ನೂತನ ವೈಶಿಷ್ಟ್ಯತೆಗಳೊಂದಿಗೆ(features) ತಯಾರಾಗಿರುವ ಬಜಾಜ್ ಪಲ್ಸರ್ NS400ನ ಬೆಲೆ ವಿನ್ಯಾಸ ಹಾಗೂ ವೈಶಿಷ್ಟ್ಯತೆ ಹೇಗಿದೆ ಎಂಬುದನ್ನು ತಿಳಿಯಿರಿ.

ಕೇವಲ ಎರಡು ಲಕ್ಷಕ್ಕೆ NS400 ಲಭ್ಯ

NS 200 ಮೂಲಕ ತನ್ನ ಕ್ರೇಜ್ ಸೃಷ್ಟಿಸಿಕೊಂಡಿದ್ದ ಬಜಾಜ್ ಪಲ್ಸರ್, ಇದೀಗ ಮತ್ತೊಮ್ಮೆ NS400 ಮೂಲಕ ಮತ್ತೆ ಅಬ್ಬರಿಸಲು ತಯಾರಾಗುತ್ತಿದ್ದು ಡಾಮಿನಾರ್ 400 ನಂತರದ ಸ್ಥಾನದಲ್ಲಿ ಇದನ್ನು ಬಿಡುಗಡೆ ಮಾಡಲು ಕಂಪನಿ ನಿರ್ಧರಿಸಿದೆ. ಇತರೆ ಬೈಕುಗಳಿಗೆ ನೇರವಾದ ಸ್ಪರ್ಧೆ ನೀಡುವ ಸಾಮರ್ಥ್ಯವನ್ನು ಹೊಂದಿರುವ ಬಜಾಜ್ ಪಲ್ಸರ್ NS400 ಅನ್ನು ಕೇವಲ ಎರಡು ಲಕ್ಷದ ಆಸುಪಾಸಿನ ಎಕ್ಸ್ ಶೋರೂಮ್ ಬೆಲೆಯಲ್ಲಿ ಗ್ರಾಹಕರಿಗೆ ನೀಡಲು ನಿರ್ಧರಿಸಿದ್ದರಂತೆ.

Image Source: Team-BHP

advertisement

ಡಾಮಿನಾರ್ ಜೊತೆಗೆ ನೇರವಾದ ಸ್ಪರ್ಧೆಗಿಳಿಯಲಿದೆ NS400

ಕಳೆದೆರಡು ದಶಕಗಳಿಂದ ತನ್ನ ಅಗ್ರಸಿವ್ ಲುಕ್ ಹಾಗೂ ಡಿಸೈನ್ ನಿಂದಾಗಿ ಗ್ರಾಹಕರ ಮನಸ್ಸನ್ನು ಗೆದ್ದಿರುವಂತಹ ಬಜಾಜ್ ಪಲ್ಸರ್ ಕಂಪನಿಯು ಇದೀಗ ತನ್ನ ನೂತನ ಆವಿಷ್ಕಾರವಾದ ಬಜಾಜ್ ಪಲ್ಸರ್ ಬ್ರಾಂಡ್ ನ್ಯೂ NS400(Bajaj Pulsar Brand New Ns400) ನಿಂದಾಗಿ ಮತ್ತಷ್ಟು ಸದ್ದು ಮಾಡಲು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಎಲ್ಲಾ ವಿಚಾರದಲ್ಲಿಯೂ ಡಾಮಿನಾರ್ ಬೈಕ್ಗೆ(Dominar Bike) ಸೆಡ್ಡು ಹೊಡೆಯುವಂತ ವಿನ್ಯಾಸವನ್ನು ಒಳಗೊಂಡಿರುವ NS400 ಬೆಲೆಯಲ್ಲಿ ಮಾತ್ರವಲ್ಲದೆ ತೂಕದಲ್ಲಿಯೂ ಡಾಮಿನಾರಿಗೆ ನೇರವಾದ ಸ್ಪರ್ಧೆನೀಡುತ್ತಿದೆ. ಹೌದು ಸ್ನೇಹಿತರೆ ಕೇವಲ 193ಕೆಜಿ ಇರುವ NS400 ಡಾಮಿನಾರ್ಗಿಂತಲೂ ಕಡಿಮೆ ತೂಕವನ್ನು ಹೊಂದಿದೆ.

ಮೇ 3ಕ್ಕೆ NS400 ಮಾರುಕಟ್ಟೆಯಲ್ಲಿ ಲಭ್ಯ

ಬೈಕಿನ ವೈಶಿಷ್ಟತೆಗಳ ಕುರಿತಾಗಿ ಕಂಪನಿ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ ಆದರೆ ಇತ್ತೀಚಿಗಷ್ಟೇ ಬಜಾಜ್ ಕಂಪನಿಯ ಪಲ್ಸರ್ NS400ನ ಅಧಿಕೃತ ಟೀಸರ್ ಒಂದನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಕಂಡುಬಂದ ಹಾಗೆ ಪಲ್ಸರ್ NS400ಗೆ ವಿಶೇಷ ಅಲಾಯ್ ವೀಲ್ಗಳನ್ನು(Alloy Wheels) ಅಳವಡಿಸಲಾಗಿದೆ ಹಾಗೂ ಹಿಂಭಾಗದಲ್ಲಿ ಯೂನಿಟ್ ಅಳವಡಿಕೆ ಮಾಡುವ ಬದಲು ಅಂಡರ್ ಬೆಲ್ಲಿ ಎಕ್ಸಾಸ್ಟೋನ್ ರೀತಿ ಬರುವ ಸಾಧ್ಯತೆಗಳಿದೆ. ಟೀಸರ್ನಲ್ಲಿಯೇ ಬಜಾಜ್ ಕಂಪನಿ NS400 ಬೈಕಿನ ಬಿಡುಗಡೆ ದಿನಾಂಕವನ್ನು ಬಹಿರಂಗಗೊಳಿಸಿದ್ದು, ಇದೆ ಮೇ ಮೂರನೇ ತಾರೀಕು ಶೋರೂಮ್ ಗಳಲ್ಲಿ NS400 ಲಭ್ಯವಿರಲಿದೆ.

advertisement

Leave A Reply

Your email address will not be published.