Karnataka Times
Trending Stories, Viral News, Gossips & Everything in Kannada

Ration Card: ಈ ರೇಷನ್ ಕಾರ್ಡ್ ಹೊಂದಿರುವವರಿಗೆ ಬೆಳ್ಳಂಬೆಳಿಗ್ಗೆ ಆಹಾರ ಇಲಾಖೆಯಿಂದ ಆದೇಶ

advertisement

RATION CARD SCAM: ನಮ್ಮಲ್ಲಿ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಎಂಬ ಮೂರು ವಿಭಿನ್ನ ರೇಷನ್ ಕಾರ್ಡ್ ಗಳಿದ್ದು, ಈ ಎಲ್ಲಾ ಪಡಿತರ ಚೀಟಿದಾರರು (Ration Card Holders) ಈವರೆಗೂ ಉಚಿತವಾಗಿ ಪಡಿತರ ಧಾನ್ಯಗಳನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಒಂದನೇ ತಾರೀಕಿನಿಂದ ಆಹಾರ ಇಲಾಖೆ (Food Department)ಯು, ಪ್ರತಿ ತಿಂಗಳು ಪಡಿತರ ನೀಡುವ ಕ್ರಮದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದು ಇದನ್ನು ಪ್ರತಿಯೊಬ್ಬರು ಕಟ್ಟು ನೀಟಾಗಿ ಪಾಲಿಸಬೇಕೆಂಬ ಆದೇಶವನ್ನು ಹೊರಡಿಸಿದ್ದಾರೆ. ಹಾಗಾದ್ರೆ ಯಾರಿಗೆಲ್ಲ ಈ ಹೊಸ ರೂಲ್ಸ್ (New Rules) ಅನ್ವಯವಾಗುತ್ತದೆ? ಆರೋಗ್ಯ ಇಲಾಖೆಯಿಂದ ಜಾರಿ ಆಗಲಿರುವ ಹೊಸ ನಿಯಮಗಳೇನು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಯಿರಿ.

ಅಕ್ರಮ ರೇಷನ್ ಕಾರ್ಡ್ ಹೊಂದಿರುವವರ ಕುರಿತು ಆಹಾರ ಇಲಾಖೆ ತನಿಖೆ

ಇತ್ತೀಚಿನ ದಿನಗಳಲ್ಲಿ ಹಲವರು ಅಕ್ರಮವಾಗಿ ರೇಷನ್ ಕಾರ್ಡ್(Ration Card) ಗಳನ್ನು ಮಾಡಿಸಿಕೊಂಡು ಸರ್ಕಾರದಿಂದ ದೊರಕುತ್ತಿರುವ ಉಚಿತ ಪಡಿತರ ಧಾನ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಸರ್ಕಾರಿ ಉದ್ಯೋಗದಲ್ಲಿ(Government Job) ಇರುವಂತಹ ವ್ಯಕ್ತಿಗಳು ಕೂಡ ರೇಷನ್ ಕಾರ್ಡ್ ಗಳನ್ನು ಮಾಡಿಸಿಕೊಂಡಿದ್ದು ಅಂತವರ ಮೇಲೆ ಕಠಿಣ ಕ್ರಮ ಕೈ ತೆಗೆದುಕೊಳ್ಳುವ ನಿಟ್ಟಿನಲ್ಲಿ ಆಹಾರ ಇಲಾಖೆ ಈ ಹೊಸ ನಿಯಮಗಳನ್ನು ಜಾರಿಗೆ ತರಲಿದೆ.

ರೇಷನ್ ಕಾರ್ಡ್ ಪಡೆಯಲು ಅರ್ಹರಲ್ಲದ ಸರ್ಕಾರಿ ನೌಕರರು ಅಕ್ರಮವಾಗಿ ವಿತರಕರ ಸಹಾಯ ಪಡೆದು ರೇಷನ್ ಕಾರ್ಡ್ ಮಾಡಿಸಿಕೊಂಡು ಪ್ರತಿ ತಿಂಗಳು ಪಡಿತರವನ್ನು ಪಡೆದುಕೊಳ್ಳುತ್ತಿದ್ದಾರೆ ಅಂತವರಿಗೆ ಆರೋಗ್ಯ ಇಲಾಖೆ ಶಿಸ್ತದ ಕ್ರಮ ಕೈ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಹೀಗಾಗಿ ನೀವೇನಾದರೂ ಸರ್ಕಾರಿ ಉದ್ಯೋಗದಲ್ಲಿದ್ದು ರೇಷನ್ ಕಾರ್ಡ್ ಹೊಂದಿದ್ದರೆ ಕೂಡಲೇ ಅದನ್ನು ಕ್ಯಾನ್ಸಲ್ ಮಾಡಿಸಿಕೊಳ್ಳುವುದು ಉತ್ತಮ ಅಥವಾ ಮುಂದಿನ ತಿಂಗಳಿನಿಂದ ಪಡಿತರ ಪಡೆಯಬೇಡಿ.

advertisement

Image Source: Daijiworld

ಇಂಥವರಿಂದ ಬಡವರಿಗೆ ಪಡಿತರವಿಲ್ಲ!

ಹೀಗೆ ಬಡತನದ ರೇಖೆಗಿಂತ ಮೇಲಿರುವಂತಹ (Above Poverty Line) ವ್ಯಕ್ತಿಗಳು ಪ್ರತಿ ತಿಂಗಳು ಪಡಿತರವನ್ನು ಪಡೆಯುವುದರಿಂದ ತೀರ ಬಡತನದಲ್ಲಿ ಬಳಲುತ್ತಿರುವಂತ ಜನರಿಗೆ ಅಕ್ಕಿ ದೊರಕದಂತೆ ಆಗುತ್ತದೆ ಹೀಗಾಗಿ ಆಹಾರ ಇಲಾಖೆಯ ಅಕ್ರಮವಾಗಿ ರೇಷನ್ ಪಡೆಯುತ್ತಿರುವ ಜನರ ಪಟ್ಟಿಯನ್ನು ಮಾಡಿಕೊಂಡು ಅವರ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸುವ ಕಾರ್ಯವನ್ನು ಮೇ 1ರಿಂದ ಪ್ರಾರಂಭಿಸಲಿದ್ದಾರೆ.

ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ಈ ರೀತಿ ಪರಿಶೀಲಿಸಿ!

ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ (Official website) ಗೆ ಭೇಟಿ ನೀಡಿ ಅಲ್ಲಿ ರೇಷನ್ ಕಾರ್ಡ್ ಎಂದು ನಮೂದಿಸಿದರೆ ಪುಟವನ್ನು ತೆರೆಯುತ್ತದೆ. ಆ ಪುಟದಲ್ಲಿ ನಿಮ್ಮ ಜಿಲ್ಲೆ ಊರು ತಾಲೂಕು ಎಲ್ಲವನ್ನು ಸರಿಯಾದ ಕ್ರಮದಲ್ಲಿ ಆಯ್ಕೆ ಮಾಡಿ. ಇದನ್ನು ಆಯ್ಕೆ ಮಾಡಿದ ನಂತರ ನಿಮ್ಮ ತಾಲೂಕಿನಲ್ಲಿರುವ ಎಲ್ಲಾ ರೇಷನ್ ಕಾರ್ಡ್ ದಾರದ ಫೋಟೋ ಮತ್ತು ರೇಷನ್ ನಂಬರ್(Ration card number) ಪ್ರಕಟವಾಗುತ್ತದೆ. ಆ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೇ? ಎಂಬುದನ್ನು ಪರಿಶೀಲಿಸಿ, ನೀವು ಪರಿಸರ ಪಡಿತರ ಪಡೆಯಲು ಅರ್ಹರಾಗಿದ್ದರು, ನಿಮ್ಮ ಕಾರ್ಡನ್ನು ಕ್ಯಾನ್ಸಲ್ ಮಾಡಿದ್ದರೆ ಕೂಡಲೇ ಆಹಾರ ಇಲಾಖೆಗೆ ಭೇಟಿ ನೀಡಿ ಮನವಿ ಮಾಡಿಕೊಳ್ಳಿ.

advertisement

Leave A Reply

Your email address will not be published.