Karnataka Times
Trending Stories, Viral News, Gossips & Everything in Kannada

iPhone: ಐಫೋನ್ ಅನ್ನು ಬ್ಯಾನ್ ಮಾಡ್ತಾ ಇದೆ ಸೌತ್ ಕೊರಿಯಾ! ಅಸಲಿ ಕಾರಣ ವೈರಲ್

advertisement

ಐಫೋನ್ (iPhone) ಯಾವ ರೀತಿಯಲ್ಲಿ ಇಡೀ ವಿಶ್ವದಲ್ಲೇ ತನ್ನ ಪ್ರತಿಷ್ಠಿತ ಬ್ರಾಂಡ್ ವ್ಯಾಲ್ಯೂ ಹೊಂದಿದೆ ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ನಮ್ಮ ಬಳಿ ಐಫೋನ್ ಇದ್ರೆ ಅದು ಪ್ರತಿಷ್ಠೆಯ ಸಂಕೇತ ಅಥವಾ ಹಣ ಇದೆ ಎಂಬುದಾಗಿ ಅರ್ಥ ಆಗಿರುತ್ತದೆ ಎಂಬುದಾಗಿ ಇಂದಿನ ದಿನಗಳಲ್ಲಿ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಈಗ ಸೌತ್ ಕೊರಿಯಾ (South Korea) ದ ಮಿಲಿಟರಿ ಇಂತಹ ಐಫೋನನ್ನೇ ಬ್ಯಾನ್ ಮಾಡಿದ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಸೌತ್ ಕೊರಿಯಾ ಮಿಲಿಟರಿಯಲ್ಲಿ iPhone ಬ್ಯಾನ್!

 

Image Source: The Defense Post

 

ಸೇನೆಗೆ ಸಂಬಂಧಪಟ್ಟಂತಹ ಕಟ್ಟಡದ ಒಳಗೆ ಐಫೋನ್ (iPhone) ಗಳನ್ನು ಬಳಸುವ ಹಾಗೆ ಇಲ್ಲ ಎಂಬುದಾಗಿ ಸೌತ್ ಕೊರಿಯಾ (South Korea) ದ ಆರ್ಮಿ ನೇವಿ ಹಾಗೂ ಏರ್ ಫೋರ್ಸ್ ಮಿಲಿಟರಿ (Air Force Military) ನಡೆಸಿದಂತಹ ಮೀಟಿಂಗ್ನಲ್ಲಿ ನಿರ್ಧಾರ ಮಾಡಲಾಗಿದೆ. ವಾಯ್ಸ್ ರೆಕಾರ್ಡ್ ಗೆ ಸಂಬಂಧಪಟ್ಟಂತಹ ಕೆಲವೊಂದು ಇನ್ಫಾರ್ಮಶನ್ ಗಳನ್ನು ಐಫೋನ್ ಡಿವೈಸ್ ನಲ್ಲಿ ಲೀಕ್ ಆಗಿರುವ ಬಗ್ಗೆ ಸೌತ್ ಕೊರಿಯನ್ ಆರ್ಮಿ ಪತ್ತೆ ಹಚ್ಚಿದ್ದು ಇದೇ ಕಾರಣಕ್ಕಾಗಿ ಬ್ಯಾನ್ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಸಂದರ್ಭದಲ್ಲಿ ವಿದೇಶಿ ವಸ್ತುಗಳಿಗಿಂತ ಹೆಚ್ಚಾಗಿ ದೇಶದಲ್ಲೇ ತಯಾರಿ ಮಾಡಲಾಗಿರುವಂತಹ ಪ್ರಾಡಕ್ಟ್ ಗಳನ್ನು ಹೆಚ್ಚಾಗಿ ಬಳಸುವ ಬಗ್ಗೆ ಕೂಡ ಒಲವು ತೋರಿಸಲಾಗಿದೆ.

advertisement

ಮೊದಲಿಗೆ ಕೊರಿಯನ್ ಏರ್ ಫೋರ್ಸ್ ನಿಂದ ಏಪ್ರಿಲ್ 11ರಂದು ಐಫೋನ್ (iPhone) ಬಳಸಬಾರದು ಎನ್ನುವ ಪ್ರಕಟಣೆಯನ್ನು ಅಧಿಕೃತವಾಗಿ ಹೊರಡಿಸಲಾಗಿತ್ತು. ವಾಯ್ಸ್ ರೆಕಾರ್ಡಿಂಗ್ ಅನ್ನು ಕಳುಹಿಸುವಂತಹ ಬೇರೆ ಅಪ್ಲಿಕೇಶನ್ ಗಳ ಬಗ್ಗೆ ಕೂಡ ಇದೇ ನಿಯಮವನ್ನು ತೆಗೆದುಕೊಳ್ಳಲಾಗಿದ್ದು ಆಪಲ್ ವಾಚ್ (Apple Watch) ಗಳಲ್ಲಿ ಕೂಡ ಈ ರೀತಿಯ ಡಿಫೆಕ್ಟ್ ಇದೆ ಎಂಬುದಾಗಿ ತಿಳಿದು ಬಂದಿದ್ದು ಅವುಗಳನ್ನು ಕೂಡ ಬ್ಯಾನ್ ಮಾಡಲಾಗಿದೆ.

ಆಂಡ್ರಾಯ್ಡ್ ಫೋನ್ ಕೂಡ ಬ್ಯಾನ್ ಆಗಿದ್ಯಾ?

 

Image Source: TechStory

 

ಸೌತ್ ಕೊರಿಯಾದ ಬ್ರಾಂಡ್ ಆಗಿರುವಂತಹ ಸ್ಯಾಮ್ಸಂಗ್ (Samsung) ಹೊರತುಪಡಿಸಿ ಬೇರೆ ಆಂಡ್ರಾಯ್ಡ್ ಫೋನ್ ಗಳನ್ನು ಕೂಡ ಸೌತ್ ಕೊರಿಯನ್ ಆರ್ಮಿ, ಬಿಲ್ಡಿಂಗ್ಸ್ ಗಳಲ್ಲಿ ಬ್ಯಾನ್ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಕೆಲವೊಂದು ರಿಸ್ಟ್ರಿಕ್ಷನ್ ಗಳನ್ನು ಕೂಡ ಸೌತ್ ಕೊರಿಯನ್ ಮಿಲಿಟರಿಯಿಂದ ಹಾಕಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಆದರೆ ರಿಸ್ಟ್ರಿಕ್ಶನ್ ಗಳನ್ನು ಹಾಕುವುದಕ್ಕಿಂತ ಹೆಚ್ಚಾಗಿ ಇಲ್ಲಿ ಬ್ಯಾನ್ ಗಳನ್ನು ವಿಧಿಸಿರುವುದು ನಿಜಕ್ಕೂ ಕೂಡ ಅನಗತ್ಯ ಎಂಬುದಾಗಿ ಕೆಲವು ಕಂಪನಿಗಳು ಹೇಳಿಕೊಂಡಿವೆ.

ಇದು ಅಲ್ಲಿನ ಲೋಕಲ್ ಬ್ರಾಂಡ್ ಆಗಿರುವಂತಹ ಸ್ಯಾಮ್ಸಂಗ್ ಬೆಳೆಯುವುದಕ್ಕೆ ಇನ್ನಷ್ಟು ಸಹಾಯಕವಾಗಲಿದೆ ಎನ್ನುವಂತಹ ಮಾತುಗಳು ಕೇಳಿ ಬರುತ್ತಿವೆ. ಇದು ಸೌತ್ ಕೊರಿಯನ್ ಮಿಲಿಟರಿಯಲ್ಲಿರುವಂತಹ 5 ಲಕ್ಷಕ್ಕೂ ಹೆಚ್ಚಿನ ವ್ಯಕ್ತಿಗಳ ಮೇಲೆ ವಿಧಿಸಲಾಗಿದ್ದು ಯಾರು ಕೂಡ ಈ ನಿಯಮಗಳಿಗೆ ಮೀರಿ ಇ-ಮೇಲ್ ಹೇಳಲಾಗಿರುವಂತಹ ಫೋನ್ ಗಳನ್ನು ಬಳಸುವ ಹಾಗಿಲ್ಲ ಎಂಬುದಾಗಿ ತಿಳಿದು ಬಂದಿದೆ.

advertisement

Leave A Reply

Your email address will not be published.