Karnataka Times
Trending Stories, Viral News, Gossips & Everything in Kannada

iPhone: ಈ 3 ಸೆಟ್ಟಿಂಗ್ಸ್ ಮಾಡಿದ್ರೆ ನಿಮ್ಮ ಐಪೋನ್ ಬ್ಯಾಟರಿ ಬೇಗ ಖಾಲಿಯಾಗೋಲ್ಲ!

advertisement

iPhone Battery: ಇಂದಿನ ದಿನಗಳಲ್ಲಿ ತಮ್ಮ ಬಳಿ iPhone ಇದ್ರೆ ಸಾಕು ಅದನ್ನ ಪ್ರತಿಷ್ಠೆಯ ವಿಚಾರ ಎನ್ನುವುದಾಗಿ ಪ್ರತಿಯೊಬ್ಬರು ಕೂಡ ಭಾವಿಸುತ್ತಾರೆ. ಇನ್ನು ಸಾಮಾನ್ಯವಾಗಿ ನೋಡಿದ್ರೆ ಆಂಡ್ರಾಯ್ಡ್ ಫೋನ್ ಗಳಿಗೆ ಹೋಲಿಕೆ ಮಾಡಿದರೆ ಐಫೋನ್ ಗಳು ಸಾಕಷ್ಟು ದುಬಾರಿ ಬೆಲೆಯದ್ದಾಗಿರುತ್ತವೆ. ಆದರೆ ಸಾಕಷ್ಟು ಜನರಿಗೆ ಐಫೋನ್ನಲ್ಲಿ ಇರುವಂತಹ ತೊಂದರೆ ಅಂದ್ರೆ ಅದರ ಚಾರ್ಜ್ ಬೇಗ ಖಾಲಿಯಾಗುತ್ತದೆ ಅನ್ನೋದಾಗಿ. ಇದಕ್ಕೆ ಇರುವಂತಹ ಪರಿಹಾರ ಏನು ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಇರುವಂತಹ ದೊಡ್ಡ ಸಮಸ್ಯೆಯಾಗಿದ್ದು ಇವತ್ತಿನ ಈ ಲೇಖನದ ಮೂಲಕ ಐಫೋನ್ನಲ್ ಇರುವಂತಹ ಚಾರ್ಜಿಂಗ್ ಸಮಸ್ಯೆಗಳನ್ನು ಹೋಗಲಾಡಿಸಿ ದೀರ್ಘಕಾಲದವರೆಗೆ ನಿಮ್ಮ ಚಾರ್ಜ್ ಉಳಿದುಕೊಳ್ಳಬೇಕು ಎಂದರೆ ಈ ಕೆಳಗೆ ಹೇಳುವಂತಹ ಕೆಲವೊಂದು ಉಪಾಯಗಳನ್ನು ಹಿಂಬಾಲಿಸಿ.

iPhone Battery
India Today

advertisement

ಐಫೋನ್ನಲ್ಲಿ ಚಾರ್ಜ್ ಹೆಚ್ಚಾಗಿ ಬಾಳಿಕೆ ಬರಲು ಈ ಪ್ರಕ್ರಿಯೆಗಳನ್ನು ಫಾಲೋ ಮಾಡಿ

  1. ನಿಮ್ಮ ಐ ಫೋನ್ನಲ್ಲಿ ಚಾರ್ಜ್ ಹೆಚ್ಚಾಗಿ ಬಾಳಿಕೆ ಬರಲು ಮೊದಲನೇದಾಗಿ ನೀವು ಮಾಡಬೇಕಾದ ಕೆಲಸ ನಿಮ್ಮ ಫೋನಿನ ಸೆಟ್ಟಿಂಗ್ ಗೆ ಹೋಗಿ. ಅಲ್ಲಿ ಜನರಲ್ ಆಪ್ಶನ್ ಅನ್ನು ಆಯ್ಕೆ ಮಾಡಿ. ಅದಾದ ನಂತರ background app refresh ಆಪ್ಷನ್ ಅನ್ನು ಕ್ಲಿಕ್ ಮಾಡಬೇಕಾಗಿರುತ್ತದೆ. ಇದರಲ್ಲಿ ನೀವು ಬಳಕೆ ಮಾಡದೇ ಇರುವಂತಹ ಅಪ್ಲಿಕೇಶನ್ಗಳನ್ನು ನಿಮ್ಮ ಫೋನಿನ ಬ್ಯಾಗ್ರೌಂಡ್ ನಲ್ಲಿ ರನ್ ಆಗದೆ ಇರುವ ರೀತಿಯಲ್ಲಿ ಆಫ್ ಕೂಡ ಮಾಡಬಹುದಾಗಿದೆ. ಇದರಿಂದಾಗಿ ನಿಮ್ಮ ಐ ಫೋನ್ನಲ್ಲಿ ಬ್ಯಾಟರಿ ಬಳಕೆ ಹೆಚ್ಚಾಗಿ ಚಾರ್ಜ್ ಅನ್ನು ಬಳಸಿಕೊಳ್ಳುವುದಿಲ್ಲ. ಇದು ಕೂಡ ನಿಮ್ಮ ಐ ಫೋನ್ನಲ್ಲಿ ಚಾರ್ಜ್ ಉಳಿತಾಯ ಮಾಡುವುದಕ್ಕೆ ಒಂದು ಪ್ರಮುಖ ಪ್ರಕ್ರಿಯೆಯಾಗಿದೆ.
  2. ಎರಡನೇದಾಗಿ ಯಾವತ್ತೂ ಕೂಡ ನೀವು ನಿಮ್ಮ ಐಫೋನ್ ಅನ್ನು ಚಾರ್ಜ್ ಮಾಡುವಾಗ 100% ಚಾರ್ಜ್ ಮಾಡೋದಕ್ಕೆ ಯಾವತ್ತು ಹೋಗಬೇಡಿ. ಇದರಿಂದಾಗಿ ನಿಮ್ಮ ಐಫೋನಿನ ಬ್ಯಾಟರಿಯ ಆರೋಗ್ಯ ಅಂದರೆ ಹೆಲ್ತ್ ಎನ್ನುವುದು ಸಮಯದಿಂದ ಸಮಯಕ್ಕೆ ಕುಂಠಿತಗೊಳ್ಳುತ್ತದೆ. ಯುಗಾದಿ ಯಾವತ್ತೂ ಐಫೋನ್ ಚಾರ್ಜ್ ಮಾಡುವಾಗ ಕೇವಲ 80 ಪ್ರತಿಶತದ ಆಸು ಪಾಸಿನಲ್ಲಿ ಮಾತ್ರ ಚಾರ್ಜ್ ಮಾಡಿಡಿ. ಇನ್ನು ಸಾಕಷ್ಟು ಜನರಿಗೆ ಮೊಬೈಲನ್ನು ಚಾರ್ಜ್ ಮಾಡಬೇಕೆಂದಾಗ ರಾತ್ರಿ ಮಲಗುವ ಸಂದರ್ಭದಲ್ಲಿ ಚಾರ್ಜ್ ಇಟ್ಟು ಬೆಳಗ್ಗೆ ಎದ್ದು ಅದನ್ನು unplug ಮಾಡುತ್ತಾರೆ. ಯಾವತ್ತೂ ಕೂಡ ಈ ರೀತಿ ಮಾಡೋದಕ್ಕೆ ಹೋಗಬೇಡಿ ನಿಮ್ಮ ಮೊಬೈಲ್ ಬೇಗನೆ ಹಾಳಾಗುತ್ತೆ ಅನ್ನೋದನ್ನ ಈ ವಿಚಾರದಲ್ಲಿ ನೀವು ನೆನಪು ಇಟ್ಟುಕೊಳ್ಳಬೇಕಾಗುತ್ತದೆ.
  3. ಮೂರನೇದಾಗಿ ಹಾಗೂ ಕೊನೆಯದಾಗಿ ನೀವು ನಿಮ್ಮ ಮೊಬೈಲ್ ಫೋನಿನ ಸೆಟ್ಟಿಂಗ್ ಗೆ ಹೋಗಿ ಅಲ್ಲಿ ಪ್ರೈವಸಿ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಸೆಕ್ಯೂರಿಟಿಗೆ ಹೋದರೆ ಅಲ್ಲಿ ನಿಮಗೆ location service ಎನ್ನುವಂತಹ ಆಪ್ಷನ್ ಕಾಣುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಬೇಕಾಗಿರುತ್ತದೆ. ಇದರಲ್ಲಿ ಬಹುತೇಕ ನಿಮ್ಮ ಎಲ್ಲಾ ಅಪ್ಲಿಕೇಶನ್ ಗಳಲ್ಲಿ ಕೂಡ ಲೊಕೇಶನ್ ರನ್ ಆಗುತ್ತಿರುತ್ತದೆ. ಅದರಲ್ಲಿ ಬೇಕಾಗಿರುವಂತಹ ಅಪ್ಲಿಕೇಶನ್ಗಳಿಗೆ ಬಿಟ್ಟು ಉಳಿದೆಲ್ಲ ಅಪ್ಲಿಕೇಶನ್ಗಳ ಲೊಕೇಶನ್ ಅನ್ನು ಆಫ್ ಮಾಡಿ. ಇವಿಷ್ಟು ಟಿಪ್ಸ್ ಗಳನ್ನು ನೀವು ಫಾಲೋ ಮಾಡುವ ಮೂಲಕ ಐಫೋನ್ನಲ್ಲಿ ಚಾರ್ಜ್ ಅನ್ನು ಉಳಿತಾಯ ಮಾಡಬಹುದಾಗಿದೆ.

advertisement

Leave A Reply

Your email address will not be published.