Karnataka Times
Trending Stories, Viral News, Gossips & Everything in Kannada

BSNL: ದೇಶದ ಜನತೆಗೆ ಉಚಿತ ಆಫರ್ ಕೊಟ್ಟ BSNL! ಜಿಯೋಗೆ ಹೊಡೆತ

advertisement

BSNL ಸಂಸ್ಥೆ ಭಾರತದ ಸರ್ಕಾರಿ ಟೆಲಿಕಾಂ ಸಂಸ್ಥೆಯಾಗಿದ್ದು ಇದು ತನ್ನ ಗ್ರಾಹಕರಿಗೆ ಇತ್ತೀಚಿಗಷ್ಟೇ ಒಂದು ವಿಶೇಷ ಅನೌನ್ಸ್ಮೆಂಟ್ ಮಾಡಿದೆ. ಇನ್ನು ಈಗ ಮಾಡಿರುವಂತಹ ಈ ಅನೌನ್ಸ್ಮೆಂಟ್ ಎನ್ನುವುದು ಮುಂದಿನ ವರ್ಷ ಅಂದರೆ 2025 ರವರೆಗೂ ಕೂಡ ವ್ಯಾಲಿಡ್ ಆಗಿರುತ್ತದೆ ಎಂಬುದನ್ನು ಕೂಡ ಸ್ಪಷ್ಟಪಡಿಸಿದೆ. ಹೌದು ಗೆಳೆಯರೇ ಬಿಎಸ್ಎನ್ಎಲ್ ಸಂಸ್ಥೆ ಯಾರೆಲ್ಲಾ ತನ್ನ ಸಂಸ್ಥೆಯ ಇಂಟರ್ನೆಟ್ ಸರ್ವಿಸ್ ಅನ್ನು ಅಂದರೆ ಬ್ರಾಡ್ ಬ್ಯಾಂಡ್ ಅನ್ನು ಅಳವಡಿಸಿಕೊಳ್ಳುವಂತಹ ಇಚ್ಛೆಯನ್ನು ಹೊಂದಿದ್ದಾರೋ ಅವರಿಗೆ ಉಚಿತವಾದ ಸೇವೆಯನ್ನು ನೀಡುವಂತಹ ಅನೌನ್ಸ್ಮೆಂಟ್ ಅನ್ನು ಮಾಡಿದೆ. ಜಿಯೋ ಹಾಗೂ ಏರ್ಟೆಲ್ ಗಳಂತ ಖಾಸಗಿ ಸಂಸ್ಥೆಗಳು ಈಗಾಗಲೇ ಅತ್ಯಂತ ಕಡಿಮೆ ಬೆಲೆಯಲ್ಲಿ ಪ್ರೇಕ್ಷಕರಿಗೆ ಇಂಟರ್ನೆಟ್ ಸೇವೆಯನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ BSNL ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂಬುದಾಗಿ ತಿಳಿದು ಬಂದಿದೆ.

ಬ್ರಾಡ್ ಬ್ಯಾಂಡ್ ಕನ್ನೆಕ್ಷನ್ ಮೇಲೆ ಯಾವುದೇ ಚಾರ್ಜ್ ಇಲ್ಲ

ಬಿಎಸ್ಎನ್ಎಲ್ ಸಂಸ್ಥೆ ತನ್ನ ಇಂಟರ್ನೆಟ್ ಸೇವೆಯನ್ನು ಇನ್ನಷ್ಟು ಹೆಚ್ಚಿನ ಗ್ರಾಹಕರು ಪಡೆದುಕೊಳ್ಳಲಿ ಎನ್ನುವ ನಿಟ್ಟಿನಲ್ಲಿ ಬ್ರಾಡ್ ಬ್ಯಾಂಡ್ ಇನ್ಸ್ಟಾಲೇಶನ್ ಮೇಲೆ ಯಾವುದೇ ರೀತಿಯ ಚಾರ್ಜ್ ವಿಧಿಸದೆ ಉಚಿತವಾಗಿ ಮಾಡಿಕೊಡಲಿದೆ. ಈ ಆಫರ್ ಅನ್ನು ಮಾರ್ಚ್ 31 2025 ಕೂಡ ಬಿಎಸ್ಎನ್ಎಲ್ ಸಂಸ್ಥೆ ಮುಂದುವರಿಸಿಕೊಂಡು ಹೋಗಲಿದೆ ಎನ್ನುವುದಾಗಿ ಕೂಡ ಸ್ಪಷ್ಟಪಡಿಸಿದೆ. ಇದನ್ನು ಈ ವರ್ಷದ ಮಾರ್ಚ್ 31ರವರೆಗೆ ಮೊದಲ ಬಾರಿಗೆ ಬಿಎಸ್ಎನ್ಎಲ್ ಸಂಸ್ಥೆ ನಿಗದಿಪಡಿಸಿತು ಆದರೆ ಈಗ ಇದನ್ನು ಒಂದು ವರ್ಷ ಅಂದರೆ ಮುಂದಿನ ವರ್ಷದ ಮಾರ್ಚ್ ತಿಂಗಳ ಕೊನೆಯ ದಿನಾಂಕದವರೆಗೂ ಕೂಡ ಮುಂದುವರಿಸಿದೆ.

advertisement

Image Source: Business League

ಇಷ್ಟರವರೆಗೆ 500 ರೂಪಾಯಿಗಳ ಇನ್ಸ್ಟಾಲೇಷನ್ ಚಾರ್ಜ್ ಅನ್ನು ಗ್ರಾಹಕರಿಂದ ಬಿಎಸ್ಎನ್ಎಲ್ ಸಂಸ್ಥೆ ಭಾರತ್ ಫೈಬರ್ ಹಾಗೂ ಏರ್ ಫೈಬರ್ ಮೇಲೆ ಪಡೆದುಕೊಳ್ಳುತ್ತಿತ್ತು. ಕನೆಕ್ಷನ್ ಅನ್ನು ಪಡೆದುಕೊಳ್ಳುವುದಕ್ಕೆ ಮಾತ್ರವಲ್ಲದೆ ಇನ್ಸ್ಟಾಲೇಶನ್ ಮೇಲೆ ಕೂಡ ರೂ.250 ಗಳ ಹೆಚ್ಚುವರಿ ಚಾರ್ಜ್ ಅನ್ನು ಪಡೆದುಕೊಳ್ಳಲಾಗುತ್ತಿತ್ತು ಆದರೆ ಇನ್ನು ಮುಂದೆ ಇದೆಲ್ಲವನ್ನು ಕೂಡ ಬಿಎಸ್ಎನ್ಎಲ್ ಸಂಸ್ಥೆಗಳನ್ನು ಗ್ರಾಹಕರಿಗೆ ಉಚಿತವಾಗಿ ನೀಡಲಿದೆ.

ಬಿಎಸ್ಎನ್ಎಲ್ (BSNL) ಬ್ರಾಡ್ ಬ್ಯಾಂಡ್ ಪ್ಲಾನ್ಸ್

ಈಗಾಗಲೇ ಬೇರೆ ಖಾಸಗಿ ಕಂಪನಿಗಳ ಸ್ಪರ್ಧಾತ್ಮಕ ವಾತಾವರಣದಲ್ಲಿ ಬಿಎಸ್ಎನ್ಎಲ್ ಸಂಸ್ಥೆ ಇನ್ನೂ ಹೆಚ್ಚುವರಿ ಉಪಯೋಗಗಳನ್ನು ತನ್ನ ಬ್ರಾಡ್ ಬ್ಯಾಂಡ್ ಪ್ಲಾನಿಂಗ್ ಗಳ ಮೂಲಕ ಗ್ರಾಹಕರಿಗೆ ನೀಡುವಂತಹ ಯೋಜನೆಯನ್ನು ಹಾಕಿಕೊಂಡಿದೆ. ಹೈ ಸ್ಪೀಡ್ ಇಂಟರ್ನೆಟ್ ಜೊತೆಗೆ ಕಾಲಿಂಗ್ ವ್ಯವಸ್ಥೆಯ ಉಪಯೋಗವನ್ನು ಕೂಡ ಗ್ರಾಹಕರಿಗೆ ನೀಡುವ ಯೋಜನೆಯನ್ನು ಹಾಕಿಕೊಂಡಿದೆ. OTT ಪ್ಲಾಟ್ ಫಾರ್ಮ್ಗಳನ್ನು ಕೂಡ ಉಚಿತವಾಗಿ ನೀಡಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಇಂಟರ್ನೆಟ್ ಸೇವೆಯನ್ನು ಇನ್ನಷ್ಟು ವೇಗವಾಗಿ ನೀಡುವುದು ಕೂಡ ಕಂಪೆನಿಯ ಉದ್ದೇಶವಾಗಿದೆ. ಎಲ್ಲಾ ಯೋಜನೆಗಳ ಜೊತೆಗೆ ಬಿಎಸ್ಎನ್ಎಲ್ ಈ ಬಾರಿ ಗ್ರಾಹಕರನ್ನು ಇನ್ನಷ್ಟು ಹೆಚ್ಚಾಗಿ ತಲುಪುವಂತಹ ಪ್ರಯತ್ನದಲ್ಲಿದೆ.

advertisement

Leave A Reply

Your email address will not be published.