Karnataka Times
Trending Stories, Viral News, Gossips & Everything in Kannada

PM Vishwakarma: ಮಹಿಳೆಯರಿಗೆ‌ ಗುಡ್ ನ್ಯೂಸ್! ಕೇಂದ್ರ ಸರ್ಕಾರ 15 ಸಾವಿರ ರೂ ಜೊತೆಗೆ ಈ ಕಿಟ್ ಉಚಿತವಾಗಿ ನೀಡಲಿದೆ

advertisement

ಸರಕಾರವು ಮಹಿಳೆಯರ ಅಭಿವೃದ್ಧಿ ಗಾಗಿ ಹಲವು‌ ರೀತಿಯ ಯೋಜನೆಗಳನ್ನು ರೂಪಿಸುತ್ತಾ‌ ಬಂದಿದೆ. ಅದರಲ್ಲಿ‌ ಗೃಹಲಕ್ಷ್ಮಿ‌, ಮಾತೃ ಯೋಜನೆ, ದೀದಿ ಯೋಜನೆ ಹೀಗೆ ಹಲವು ರೀತಿಯ ಯೋಜನೆ ಗಳಿದ್ದು ಮಹಿಳೆಯರನ್ನು‌ ಕೂಡ ಆರ್ಥಿಕವಾಗಿ ಅಭಿವೃದ್ಧಿ ‌ಮಾಡುತ್ತಿದೆ. ಮಹಿಳೆಯರು ತಾವಾಗಿಯೇ ದುಡಿದು ಸ್ವಂತ ಕಾಲಲ್ಲಿ ನಿಲ್ಲುವ ಮೂಲಕ ಸ್ವಂತ ಉದ್ಯಮ ಮಾಡಲು ಸಹ ಸರಕಾರ ಪ್ರೇರೆಪಿಸುತ್ತಿದೆ. ಅದೇ ರೀತಿ ಕೇಂದ್ರ ಸರಕಾರ ಕೂಡ ಮಹಿಳೆಯರಿಗಾಗಿ ‌ಹೊಸ ಯೋಜನೆಯನ್ನು ರೂಪಿಸಿದೆ.

ಪ್ರಧಾನ ಮಂತ್ರಿ ವಿಶ್ವಕರ್ಮ (PM Vishwakarma) ಯೋಜನೆ

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಗಾಗಿ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಬಗ್ಗೆ ಮಾಹಿತಿ ಬ್ರ್ಯಾಂಡಿಂಗ್, ಇ-ಕಾಮರ್ಸ್, ಜಾಹೀರಾತು ಇತ್ಯಾದಿ ಬಗ್ಗೆ ತರಬೇತಿ ನೀಡಲಾಗುತ್ತದೆ.

ಟೂಲ್ ಕಿಟ್ ವಿತರಣೆ

PM Vishwakarma ಯೋಜನೆಯ ಮೂಲಕ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ನೀಡಲಿದ್ದು , ಸ್ವ ಉದ್ಯಮ ವನ್ನು ಹಮ್ಮಿಕೊಳ್ಳಲು ತರಭೇತಿಯನ್ನು ನೀಡುತ್ತದೆ.‌ಅದರ ಜೊತೆ 500 ರೂಪಾಯಿಗಳ ಹಣವನ್ನು ನೀಡುವುದರ ಜೊತೆಗೆ, ಈ ಯೋಜನೆಯಲ್ಲಿ ಟೂಲ್ ಕಿಟ್ ಮತ್ತು 15,000 ಮೊತ್ತವನ್ನು ಸಹ ಪಡೆಯಬಹುದಾಗಿದೆ.‌ಈ ಹಣ ಸರ್ಕಾರ ನೇರವಾಗಿ ಕುಶಲಕರ್ಮಿಗಳ ಖಾತೆಗೆ ಜಮಾ ಮಾಡುತ್ತದೆ.

advertisement

ಸಾಲ ಸೌಲಭ್ಯ

ಈ ಯೋಜನೆಯಲ್ಲಿ 16 ಬಗೆಯ ಕುಶಲಕರ್ಮಿಗಳನ್ನು ಗುರುತಿಸುವ ಮೂಲಕ ಅವರಿಗೆ ಬೇಕಾಗುವ ತರಬೇತಿಯ ಜೊತೆಗೆ ವಿವಿಧ ಉಪಕರಣಗಳನ್ನು ಪಡೆಯಲು ಸಹಾಯ ಹಸ್ತ ನೀಡಲಿದೆ. ಅದೇ ರೀತಿ ಯಾವುದೇ ಗ್ಯಾರೆಂಟಿ ಇಲ್ಲದೆ ಕುಶಲಕರ್ಮಿಗಳಿಗೆ 3ಲಕ್ಷದವರೆಗೂ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಲಿದೆ. ಮುಖ್ಯವಾಗಿ ಮಹಿಳೆ ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಅರ್ಜಿ ಹಾಕಬಹುದು‌ ಯೋಜನೆಯ ಪ್ರಯೋಜನ ಪಡೆಯಲು ಕೇವಲ ಒಬ್ಬರಿಗೆ ಮಾತ್ರ ಅವಕಾಶ ಆಗಿದೆ.

ಟೂಲ್ ಕಿಟ್ ಪಡೆದುಕೊಳ್ಳಲು ದಾಖಲೆಗಳು

  • ಆದಾಯ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಮೊಬೈಲ್ ಸಂಖ್ಯೆ
  • ಬ್ಯಾಂಕ್ ಖಾತೆಯ ವಿವರ
  • ಗುರುತಿನ ಪುರಾವೆ ಇತ್ಯಾದಿ

ಅರ್ಜಿ ಸಲ್ಲಿಕೆ ಮಾಡಿ

ಮೊದಲು ನೀವು PM ವಿಶ್ವಕರ್ಮ ಪೋರ್ಟಲ್ ಆದ https://pmvishwakarma.gov.in . ಈ ಲಿಂಕ್ ಗೆ ತೆರಳಿ ನಂತರ ಲಾಗಿನ್ ಆಗಿ ಅರ್ಜಿ ಸಲ್ಲಿಸಿ.

advertisement

Leave A Reply

Your email address will not be published.