Karnataka Times
Trending Stories, Viral News, Gossips & Everything in Kannada

PM Vishwakarma: ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಪಡೆಯಿರಿ 3ಲಕ್ಷ ಸಾಲ ಸೌಲಭ್ಯ, ಇಂತಹವರಿಗೆ ಮಾತ್ರ ಅವಕಾಶ!

advertisement

ಇಂದು ಕೇಂದ್ರ ಮತ್ತು ರಾಜ್ಯ ಸರಕಾರ ಜನರ ಅಭಿವೃದ್ಧಿಗಾಗಿ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಲೆ ಇದೆ. ಅದೇ ರೀತಿ ಕೇಂದ್ರ ಸರಕಾರ ಪಿಎಂ-ವಿಶ್ವಕರ್ಮ (PM Vishwakarma) ಯೋಜನೆ ಜಾರಿಗೆ ತಂದಿದ್ದು ಈ ಯೋಜನೆಯಡಿ ವಿವಿಧ ಸೌಲಭ್ಯಗಳಿಗಾಗಿ ಒಟ್ಟು 18 ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವರ್ಗದವರಿಗೆ ಸಹಾಯಧನ ಕಲ್ಪಿಸುತ್ತಿದೆ. ಈ ಸೌಲಭ್ಯ ಮೂಲಕ ಕೌಶಲ್ಯಾಭಿವೃದ್ಧಿ, ವಿವಿಧ ಉಪಕರಣಗಳಿಗೆ ಪ್ರೋತ್ಸಾಹ, ಕ್ರೇಡಿಟ್ ಸೌಲಭ್ಯ, ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ಇತ್ಯಾದಿ ಬೆಂಬಲ ನೀಡಲಾಗುತ್ತದೆ.

ಆರ್ಥಿಕ ನೆರವು

ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರ ಬಡವರ್ಗದ ಜನತೆಗೆ ಆರ್ಥಿಕ ನೆರವು, ಸಹಾಯಧನವನ್ನು ನೀಡುತ್ತಿದೆ. ಅದೇ ರೀತಿ ಕಡಿಮೆ ಬಡ್ಡಿಯಲ್ಲಿ ಸಾಲ ಕೂಡ ನೀಡುತ್ತಿದ್ದು, ಈ ಮೂಲಕ ಒಟ್ಟು 18 ರೀತಿಯವೃತ್ತಿಯ ವರ್ಗದ ಜನರು ಪ್ರಯೋಜನ ಪಡೆಯಬಹುದಾಗಿದೆ.

ತರಭೇತಿ ನೀಡಲಾಗುವುದು

ಸ್ವ ಉದ್ಯೋಗ ಕೈಗೊಳ್ಳುವಲ್ಲಿ ಮತ್ತು ಉದ್ಯಮ ಶೀಲತೆಗಾಗಿ ಕುಶಲಕರ್ಮಿಗಳಿಗೆ ತರಬೇತಿ ನೀಡಿ ತದನಂತರ ಸಾಲದ ನೆರವು ಕೂಡ ನೀಡಲಾಗುತ್ತದೆ. ಈ ಮೂಲಕ ವಿಶ್ವಕರ್ಮ ಪ್ರಮಾಣಪತ್ರದೊಂದಿಗೆ ಗುರುತಿನ ಚೀಟಿ, ತರಬೇತಿ ಸಮಯದಲ್ಲಿ 500 ರೂಪಾಯಿ ಸ್ಟೈಫಂಡ್ ಆಗಿ, 15,000 ರೂಪಾಯಿ ಆರ್ಥಿಕ ನೆರವು, ಮತ್ತು ನಂತರ 5 ಪ್ರತಿಶತ ಬಡ್ಡಿಯಲ್ಲಿ ಮೂರು ಲಕ್ಷ ಸಾಲ ಸೌಲಭ್ಯ ಸಹ ನೀಡಲಾಗುತ್ತದೆ.

advertisement

ಈ ವರ್ಗದ ಜನತೆ ಅರ್ಹರು

ಈ ಯೋಜನೆಗೆ ಅಕ್ಕಸಾಲಿಗರು, ಚಮ್ಮಾರರು, ಜಾನಪದ ಗೊಂಬೆ ತಯಾರಕರು, ಕ್ಷೌರಿಕರು, ಟೈಲರ್‌ಗಳು, ಬಡಗಿಗಳು, ದೋಣಿ ತಯಾರಕರು, ಆಯುಧ ತಯಾರಕರು, ಕಬ್ಬಿಣದ ಉಪಕರಣ ತಯಾರಕರು, ಕಮ್ಮಾರರು, ಬೀಗ ಹಾಕುವವರು, ಇತ್ಯಾದಿ ಕೆಲವು ವರ್ಗದ ಜನರು ವಿಶ್ವಕರ್ಮ ಯೋಜನೆಗೆ ಅರ್ಹರು.

ಮೂರು ಲಕ್ಷ ಸಾಲ ಸೌಲಭ್ಯ!

ಈ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಸಾಲ ಪಡೆದರೆ ಅರ್ಧಕ್ಕಿಂತ ಹೆಚ್ಚು ಅಂದರೆ ಶೇ.8ರಷ್ಟು ಬಡ್ಡಿಯನ್ನು ಕೇಂದ್ರ ಸರಕಾರ ನೀಡಲಿದೆ. ಇನ್ನು ಡಿಜಿಟಲ್ ವಹಿವಾಟುಗಳನ್ನು ನಿರ್ವಹಿಸಲು ಸುಧಾರಿತ ಕೌಶಲ್ಯ ತರಬೇತಿ ಪಡೆದವರಿಗೆ ಮೊದಲ ಬಾರಿಗೆ ಒಂದು ಲಕ್ಷ, ಎರಡನೇ ಬಾರಿ 2 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ. ಅದೇ ರೀತಿ ಕುಶಲಕರ್ಮಿಗಳ ಉತ್ಪನ್ನ, ಮಾರುಕಟ್ಟೆ ಬೆಂಬಲ ಇತ್ಯಾದಿ ನೀಡಲಾಗುತ್ತದೆ‌.

advertisement

Leave A Reply

Your email address will not be published.