Karnataka Times
Trending Stories, Viral News, Gossips & Everything in Kannada

SUV Car: ಒಂದೇ ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಖರೀದಿ ಮಾಡಿದ್ದಾರೆ ಈ ಕಾರನ್ನು! ಅತೀ ಕಡಿಮೆ ಬೆಲೆ ಬೆಂಕಿ ಮೈಲೇಜ್

advertisement

ಬಹುತೇಕ ಕಾರು, ಬೈಕ್ ವಾಹನಗಳು ಮಾರುಕಟ್ಟೆಯಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಜನರ ಆಸೆ ಮನೋಭಾವಕ್ಕೆ ತಕ್ಕಂತೆ ನೂತನ ಕಾರುಗಳನ್ನು ಕಂಪೆನಿ ಬಿಡುಗಡೆ ಮಾಡುತ್ತಲೇ ಇರುತ್ತಿದ್ದು ಎಲ್ಲವೂ ಒಂದಕ್ಕಿಂತ ಒಂದು ಭಿನ್ನ ಎಂಬುದೇ ಪದೇ ಪದೇ ಸಾಬೀತು ಆಗುತಲಿರುತ್ತದೆ. ಈ ನಿಟ್ಟಿನಲ್ಲಿ ಮಾರುತಿ ಕಂಪೆನಿಯೂ ಸಾಧನೆ ಮಾಡಿದೆ. ದೇಶದ ಅತೀ ದೊಡ್ಡ ವಾಹನ ತಯಾರಕ ಕಂಪೆನಿಯಾದ ಮಾರುತಿ ಕಂಪೆನಿಯು ಫ್ರಾಂಕ್ಸ್ SUV Car ಮಾರಾಟದಲ್ಲಿ ಹೊಚ್ಚ ಹೊಸ ದಾಖಲೆಯನ್ನೇ ನಿರ್ಮಿಸುತ್ತಿದೆ ಎಂದು ಹೇಳಬಹುದು.

2023ರಲ್ಲಿ ಆಗಮನ

ಫ್ರಾಂಕ್ಸ್ SUV ಕಾರನ್ನು(SUV Car) ದೇಶಿಯ ಮಾರುಕಟ್ಟೆಗೆ 2023ರಲ್ಲಿಯೇ ಪರಿಚಯಿಸಲಾಗಿದೆ. ದೇಶಿಯ ಮಾರುಕಟ್ಟೆಗೆ ಇದು ಪ್ರವೇಶಿಸಿ 1ವರ್ಷ ಕಳೆದಿದೆ ಎಂದೇ ಹೇಳಬಹುದು. ಕಳೆದ 2023ರಲ್ಲಿ ದೆಹಲಿಯ ಆಟೋ ಎಕ್ಸ್ ಪೋ ದಲ್ಲಿ ಪರಿಚಯಿಸಲಾಗಿದ್ದು ಇದರ ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯದಿಂದಾಗಿ ಮಾರಾಟ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಜನವರಿಯಲ್ಲಿ 1ಲಕ್ಷ ಯುನಿಟ್ ಫ್ರಾಂಕ್ಸ್ ಕಾರುಗಳು ಮತ್ತು ಮಾರ್ಚ್ 2024ರ ಒಳಗಾಗಿ 1,34,735 ಫ್ರಾಂಕ್ಸ್ SUVಮಾರಾಟ ಆಗಿದೆ.

Image Source: Team Car Delight

ವೈಶಿಷ್ಟ್ಯ ಹೇಗಿದೆ?

advertisement

  • ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧಿಯಾದ ಮಾರುತಿ ಕಂಪೆನಿಯ ನೆಕ್ಸಾ ಡೀಲರ್ ಶಿಪ್ ಮೂಲಕ ಫ್ರಾಂಕ್ಸ್ SUV ಯನ್ನು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಸ್ವಾಧೀನತೆ ಹೆಚ್ಚು ಮಾಡಿದೆ. ಅದರ ಮಾರಾಟ ಹೆಚ್ಚಾಗಲು ಅದರ ವೈಶಿಷ್ಟ್ಯತೆಯೇ ಮುಖ್ಯ ಕಾರಣವಾಗಿದೆ.
  • ಈ ಒಂದು ಫ್ರಾಂಕ್ಸ್ ಕಾರು ಪೆಟ್ರೋಲ್ ಮತ್ತು CNG ಪವರ್ ಟ್ರೇನ್ ಅನ್ನು ಹೊಂದಿದೆ.
  • 5ಸ್ಪೀಡೋ ಮೀಟರ್ ಮ್ಯಾನುವಲ್ ಹಾಗೂ ಆಟೋ ಮ್ಯಾಟಿಕ್ ವ್ಯವಸ್ಥೆ ಹೊಂದಿದೆ.
  • 6ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಕೂಡ ಹೊಂದಿದೆ.

ಅನೇಕ ರೂಪಾಂತರ

ಈ ಒಂದು ಕಾರಿನಲ್ಲಿ ಅನೇಕ ರೂಪಾಂತರದ ಆಯ್ಕೆ ನಿಮಗೆ ಸಿಗಲಿದೆ. ಸಿಗ್ಮಾ ಡೆಲ್ಟಾ , ಡೆಲ್ಟಾ ಪ್ಲಸ್, ಜಿಟಾ ಸೇರಿದಂತೆ ವಿವಿಧ ರೂಪಾಂತರದಲ್ಲಿ ಈ ಕಾರು ಲಭ್ಯ ಇದೆ. ನೆಕ್ಸಾ ಬ್ಲೂ, ಅರ್ಥನ್ ಬ್ರೌನ್, ಆ್ಯರ್ಕ್ಟಿಕ್ ವೈಟ್, , ಒಪ್ಯುಲೆಂಟ್ ರೆಡ್ ಒಳಗೊಂಡಂತೆ ಆಕರ್ಷಕ ಬಣ್ಣದ ಆಯ್ಕೆ ಇದರಲ್ಲಿ ಇರಲಿದೆ. ಇನ್ನು ಮೈಲೇಜ್ ವಿಚಾರದಲ್ಲಿ ಈ ಕಾರು ಬಹಳ ಉತ್ತಮವಾಗಿ ಇದೆ ಎಂದು ಹೇಳಬಹುದು. ಪೆಟ್ರೋಲ್ ಮಾದರಿಯಲ್ಲಿ 20.1 ರಿಂದ 29.89 kmpl ಹಾಗೂ CNG ಮಾದರಿಯಲ್ಲಿ 28.51 km/kg ಮೈಲೇಜ್ ನೀಡಲಿದೆ.

ಬೆಲೆ ಎಷ್ಟು?

ಹೊಚ್ಚ ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ SUV ಕಾರಿನ (SUV Car)ಬೆಲೆ ಬಗ್ಗೆ ನಿಮಗೂ ಕುತೂಹಲ ಇದ್ದೇ ಇರಬಹುದು. ಈ ಒಂದು SUV ಕಾರು 7.51ಲಕ್ಷದಿಂದ 13.4ಲಕ್ಷದ ವರೆಗೆ ಎಕ್ಸ್ ಶೋ ರೂಂ ನಲ್ಲಿ ಮಾರಾಟವಾಗುತ್ತಿದೆ. ಇದರ ಗುಣ ವೈಶಿಷ್ಟ್ಯ, ಕಲರ್ ಆಯ್ಕೆ ಮತ್ತು ಮೈಲೇಜ್ ನಿಂದಾಗಿ ಅನೇಕ ಗ್ರಾಹಕರು ಇದನ್ನು ಕೊಳ್ಳಲು ಮನಸ್ಸು ಮಾಡುತ್ತಿದ್ದಾರೆ ಎಂದು ಹೇಳಬಹುದು.

advertisement

Leave A Reply

Your email address will not be published.