Karnataka Times
Trending Stories, Viral News, Gossips & Everything in Kannada

Gruhalakshmi Yojana: ಗೃಹಲಕ್ಷ್ಮಿ ಯೋಜನೆಯ ಇದುವರೆಗಿನ ಬಿಗ್ ಅಪ್ಡೇಟ್! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ಹಣ ಸಿಗುತ್ತೆ

advertisement

Gruhalaxmi Scheme Update: ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುವ ಮುನ್ನ ಐದು ಗ್ಯಾರೆಂಟಿಗಳನ್ನು(5 guarantee) ಜಾರಿಗೆ ತರುವುದಾಗಿ ಆಶ್ವಾಸನೆ ನೀಡಿದ್ದರು. ಅದರಂತೆ ಸಿದ್ದರಾಮಯ್ಯನವರು ಸಿಎಂ ಕುರ್ಚಿಯನ್ನೇರಿದ ನಂತರ ಎಲ್ಲ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದುಕೊಂಡಿದ್ದಾರೆ. ಹೀಗೆ ಐದು ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಯರ ಖಾತೆಗೆ 2,000 ಹಣ ಪ್ರತಿ ತಿಂಗಳು ಜಮೆಯಾಗುತ್ತಲಿದೆ. ಆದರೆ ಇನ್ನು ಮುಂದಿನ ದಿನಗಳಲ್ಲಿ ಈ ಪಟ್ಟಿಯಲ್ಲಿ ಹೆಸರಿರುವ ಯಜಮಾನರಿಗೆ ಗೃಹಲಕ್ಷ್ಮಿ ಯೋಜನೆ(Gruhalakshmi Yojana)ಹಣ ದೊರಕುತ್ತದೆ ಎನ್ನುವ ಗ್ಯಾರಂಟಿ ಇಲ್ಲ.

ಬರೋಬ್ಬರಿ 80,000 ಅರ್ಜಿ ತಿರಸ್ಕಾರ

ಗೃಹಲಕ್ಷ್ಮಿ ಯೋಜನೆಯಡಿ ಯಾರೆಲ್ಲರಿಗೆ ಹಣ ಜಮೆಯಾಗುತ್ತಿದೆ ಅವರು ಸೌಲಭ್ಯ ಪಡೆಯಲು ಅರ್ಹರಾಗಿದ್ದಾರಾ? ಎಂಬುದನ್ನು ಸರ್ಕಾರ ಪರಿಶೀಲಿಸಿ, ಆನಂತರ 80 ಸಾವಿರ ಮಹಿಳೆಯರ ಅರ್ಜಿಯನ್ನು(Applications) ರದ್ದುಗೊಳಿಸಿದ್ದಾರೆ. ಇದರಿಂದಾಗಿ ಆ ಮಹಿಳೆಯರಿಗೆ ಮುಂದಿನ ತಿಂಗಳಿನಿಂದ 2000 ಹಣ ದೊರಕುವುದಿಲ್ಲ. ಆದಾಯ ತೆರಿಗೆ ಪಾವತಿದಾರರಾಗಿದ್ದರು(Income Tax Payers) ಕೂಡ ಕೆಲ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ಅದರ ಫಲವನ್ನು ಪಡೆದುಕೊಳ್ಳುತ್ತಿದ್ದರು. ಹೀಗಾಗಿ ಸರ್ಕಾರ ಅಂಥವರ ಅರ್ಜಿಯನ್ನು ರದ್ದುಗೊಳಿಸಿದೆ.

ಎಲ್ಲ ದಾಖಲೆಗಳು ಸರಿಯಾಗಿದ್ದರೆ ಮಾತ್ರ 2,000 ಸಿಗುತ್ತೆ

advertisement

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಹಿಳೆಯರ ಎಲ್ಲ ದಾಖಲೆಗಳನ್ನು ಸರ್ಕಾರ ನೇಮಿಸಿರುವ ಸಿಬ್ಬಂದಿಗಳು ಸೂಕ್ಷ್ಮವಾಗಿ ಪರಿಶೀಲಿಸಿತ್ತಿದ್ದು, ಅದರಲ್ಲಿ 80 ಸಾವಿರ ಮಹಿಳೆಯರು ಆದಾಯ ತೆರಿಗೆ(Income Tax) ಯನ್ನು ಪಾವತಿಸುತ್ತಿದ್ದರೂ ಯೋಜನೆಗೆ ಅರ್ಜಿ ಸಲ್ಲಿಸಿ, ಅದರ ಫಲವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಇನ್ನು ಮುಂದೆ ಗ್ಯಾರಂಟಿ ಪೂರೈಸುವಿಕೆಯಲ್ಲಿ ಕಟ್ಟುನಿಟ್ಟಾದ ಕ್ರಮವನ್ನು ವಹಿಸಲಿದ್ದು, ಇನ್ಮುಂದೆ ಎಲ್ಲ ದಾಖಲಾತಿಗಳು ಸರಿಯಾಗಿದ್ದರೆ ಮಾತ್ರ ಮಹಿಳೆಯರಿಗೆ ಯಾವುದೇ ಸಮಸ್ಯೆ ಇಲ್ಲದೆ ಹಣ ದೊರಕುತ್ತದೆ.

Image Source: News9Live

ಒಂದು ತಿಂಗಳು ಗೃಹಲಕ್ಷ್ಮಿ ಯೋಜನೆ ಹಣ ಬರದೆ ಇರುವವರು ಹೀಗೆ ಮಾಡಿ

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರು ಅದರ ಹಣ ನಿಮ್ಮ ಖಾತೆಗೆ ಇಷ್ಟು ತಿಂಗಳಾದರೂ ಬರದೆ ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಿರುವ ಫಲಾನುಭವಿಗಳು ಕೂಡಲೇ ಬ್ಯಾಂಕ್ ಶಾಖೆಗೆ(Bank Branch) ಭೇಟಿ ನೀಡಿ ನಿಮ್ಮ ಸಮಸ್ಯೆಯ ಕುರಿತು ಸಿಬ್ಬಂದಿಗಳಿಗೆ ತಿಳಿಸುವುದು ಒಳ್ಳೆಯದು ಅಥವಾ ನಿಮ್ಮ ಹತ್ತಿರದ ಅಂಗನವಾಡಿ ಸಹಾಯಕರು / ಆಶಾ ಕಾರ್ಯಕರ್ತೆಯರ ಸಂಪರ್ಕ ಮಾಡಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.

advertisement

Leave A Reply

Your email address will not be published.