Karnataka Times
Trending Stories, Viral News, Gossips & Everything in Kannada

BJP Guarantee: ಫ್ರೀ ಫ್ರೀ ಫ್ರೀ! ನರೇಂದ್ರ ಮೋದಿಯವರು ಮತ್ತೆ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಸೇವೆಗಳು ಸಂಪೂರ್ಣ ಫ್ರೀ!

advertisement

BJP Guarantee: ದೇಶದ ಹಲವಡೆ ಅದಾಗಲೇ ಲೋಕಸಭಾ ಚುನಾವಣೆಯ ಕಾವು ಜೋರಾಗಿಯೇ ಇದೆ. ಪ್ರತಿ ಪಕ್ಷದವರು, ರಸ್ತೆಗಿಳಿದು ಭರ್ಜರಿ ಪ್ರಚಾರ ನಡೆಸುವುದರ ಜೊತೆಗೆ ಮನೆ ಮನೆಗೂ ತೆರಳಿ ಮತ ನೀಡಿ ತಮ್ಮನ್ನು ಗೆಲ್ಲಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಅದರಂತೆ ಈಗಾಗಲೇ ಎರಡೆರಡು ಬಾರಿ ಅಧಿಕಾರವನ್ನು ಸ್ವೀಕರಿಸಿ ಭಾರತದಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿರುವಂತಹ ನರೇಂದ್ರ ಮೋದಿ(Narendra Modi)ಯವರು ಮತ್ತೆ ಅಧಿಕಾರಕ್ಕೆ ಬಂದರೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುವುದರ ಜೊತೆಗೆ ಜನರಿಗೆ ಅನಿವಾರ್ಯ ಸೇವೆಯನ್ನು ಉಚಿತವಾಗಿ ನೀಡುವಂತೆ ಭರವಸೆಯನ್ನು ನೀಡಿದ್ದಾರೆ ಹಾಗಾದ್ರೆ ಮತ್ತೆ ಮೋದಿ ಅಧಿಕಾರಕ್ಕೆ ಬಂದರೆ ಯಾವೆಲ್ಲ ಉಚಿತ ಸೇವೆಯನ್ನು ಪಡೆಯಬಹುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ಕಚೇರಿ(BJP Office)ಯಲ್ಲಿ 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷವು ತನ್ನ ನಿರ್ಣಯ ಪತ್ರವನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ನಮೂದಿಸಿರುವ ಮಾಹಿತಿಯ ಪ್ರಕಾರ ನರೇಂದ್ರ ಮೋದಿಯವರು ಪ್ರಧಾನಿ ಮಂತ್ರಿ ಆದರೆ ಅಥವಾ ಬಿಜೆಪಿ ಆಡಳಿತ ಪಕ್ಷ(BJP ruling party) ವಾಗಿಯೇ ಉಳಿದುಕೊಂಡರೆ ಯಾವೆಲ್ಲ ಬದಲಾವಣೆಗಳನ್ನು ಉಂಟುಮಾಡುತ್ತಾರೆ ಹಾಗೂ ಅವರ ಮುಂದಿನ ಐದು ವರ್ಷಗಳ ಕೆಲಸವೇನು? ಇದರಿಂದ ಜನರಿಗೆ ಏನೆಲ್ಲ ಪ್ರಯೋಜನಗಳು ದೊರಕುತ್ತದೆ? ಎಂಬ ಎಲ್ಲ ಸಂಪೂರ್ಣ ವಿವರವನ್ನು ತಿಳಿಸಿದ್ದಾರೆ.

Interest-Free Loan! Check Eligibility, Required Documents
Image Source: informalnewz

2047ಕ್ಕೆ ಭಾರತ ಸಂಪೂರ್ಣ ಅಭಿವೃದ್ಧಿ ಹೊಂದಲಿದೆ- ಮೋದಿ

ಬಿಜೆಪಿ ಪಕ್ಷವು ರಾಜ್ಯದಾದ್ಯಂತ ಭರ್ಜರಿ ಪ್ರಚಾರದ ಕೆಲಸವನ್ನು ನಡೆಸುತ್ತಿದ್ದು ಇದರ ನಡುವೆ ನಿರ್ಣಯ ಪತ್ರವನ್ನು ಬಿಡುಗಡೆ ಮಾಡುವ ಮೂಲಕ ಮುಂದಿನ ಐದು ವರ್ಷಗಳ ಕಾಲ ಬಿಜೆಪಿ ಪಕ್ಷ ಆಡಳಿತದಲ್ಲಿದ್ದರೆ, ಅದರಿಂದ ಜನಕ್ಕೆ ಉಂಟಾಗುವಂತಹ ಉಪಯೋಗಗಳು ಏನೇನು ಎಂಬುದನ್ನು ಅದರಲ್ಲಿ ನಮೂದಿಸಿದ್ದಾರೆ. ಈ ನಿರ್ಣಯ ಪತ್ರದಲ್ಲಿ ಯುವಕರು, ಮಹಿಳೆಯರು, ರೈತರು ಹಾಗೂ ಬಡವರು ಎಂಬ ನಾಲ್ಕು ವಿಭಿನ್ನ ವರ್ಗಗಳನ್ನು ವಿಂಗಡಿಸಿ ಅವರ ಅಭಿವೃದ್ಧಿಗೆ ಹೆಚ್ಚಿನ ಮನ್ನಣೆ ನೀಡಲಾಗಿದೆ. ಜೊತೆಗೆ 2047ರ ವೇಳೆಗೆ ಭಾರತವು ಸಂಪೂರ್ಣ ಅಭಿವೃದ್ಧಿ ಹೊಂದಿರುವಂತಹ ದೇಶವಾಗಲಿದೆ ಎಂಬ ಭರವಸೆಯನ್ನು ನರೇಂದ್ರ ಮೋದಿಯವರು ನೀಡಿದ್ದು ಅದರ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ.

ಉಚಿತ ಆಹಾರ, ಉಚಿತ ಪಡಿತರ!

ದೇಶದ ಪ್ರತಿ ನಾಗರಿಕರಿಗೂ ಉಚಿತ ಆಹಾರ ಯೋಜನೆ (free food scheme) ಅಡಿ ನರೇಂದ್ರ ಮೋದಿ ಅವರು ಬಹುದೊಡ್ಡ ಘೋಷಣೆಯನ್ನು ಮಾಡಿದ್ದು ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸಾರ್ವಜನಿಕ ನಾಗರಿಕರಿಗೆ ಹೆಚ್ಚಿನ ಉಚಿತ ಸೌಲಭ್ಯ ಸಿಗಲಿದೆ ಎಂದಿದ್ದಾರೆ. ಬಡ ಕುಟುಂಬಗಳಿಗೆ ಉಚಿತ ಪಡಿತರವನ್ನು ವಿತರಿಸಲಾಗುವುದು ಈ ಯೋಜನೆ 2020 ರಲ್ಲಿ ಜಾರಿಗೆ ಬಂದಿದ್ದು ಈಗಾಗಲೇ 80 ಕೋಟಿಗೂ ಅಧಿಕ ಕುಟುಂಬಗಳು ಭಾರತದಲ್ಲಿ ಉಚಿತ ಪಡಿತರದ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿ ಬಡವರ ತಟ್ಟೆಯನ್ನು ಸುರಕ್ಷಿತವಾಗಿ ಇಡಿಸುತ್ತೇವೆ ಎಂಬ ಭರವಸೆಯನ್ನು ನರೇಂದ್ರ ಮೋದಿ ನೀಡಿದ್ದಾರೆ.

advertisement

Ration Card
Image Source: DNA India

ನಾಲ್ಕು ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಶಾಶ್ವತ ಮನೆ

ಮತ್ತೆ ಮೂರನೇ ಬಾರಿಗೆ ನರೇಂದ್ರ ಮೋದಿಯವರು ಅಧಿಕಾರವನ್ನು ಸ್ವೀಕರಿಸಿದರೆ ಪ್ರಧಾನಮಂತ್ರಿ ಆವಾಸ್ ಯೋಜನೆಯ(Pradhan Mantri Awas Yojana) ಅಡಿಯಲ್ಲಿ 4 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಶಾಶ್ವತ ಮನೆಯನ್ನು ಕಟ್ಟಿಸಿ ಕೊಡುವಂತಹ ಭರವಸೆಯನ್ನು ಬಿಜೆಪಿ ಸರ್ಕಾರ ನೀಡಿದೆ.

70 ವರ್ಷ ಮೇಲ್ಪಟ್ಟವರಿಗೆ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ!

ನರೇಂದ್ರ ಮೋದಿಯವರು ಜಾರಿಗೊಳಿಸಿದಂತಹ ಆಯುಷ್ಮಾನ್ ಭಾರತ್ ಯೋಜನೆಯ(Aayushman Bharat Yojana) ಅಡಿ ಈಗಾಗಲೇ 5 ಲಕ್ಷಕ್ಕೂ ಅಧಿಕ ಬಡ ಕುಟುಂಬಗಳಿಗೆ ಉಚಿತ ಚಿಕಿತ್ಸೆ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಮುಂದಿನ ದಿನಗಳಲ್ಲಿಯೂ ಈ ಯೋಜನೆಯನ್ನು ಮುಂದುವಡುವುದರ ಜೊತೆಗೆ 70 ವರ್ಷ ಮೇಲ್ಪಟ್ಟಂತಹ ವೃದ್ಧರಿಗೆ ಎಲ್ಲಾ ಆಸ್ಪತ್ರೆ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ಹಾಗೂ ಔಷಧಿ ಕೇಂದ್ರಗಳಲ್ಲಿ ಬರೋಬ್ಬರಿ 80% ನಷ್ಟು ರಿಯಾಯಿತಿಯೊಂದಿಗೆ ಔಷಧಿಗಳನ್ನು ನೀಡಲಾಗುವುದು.

ಪೈಪ್ ಲೈನ್ LPG ಸೌಲಭ್ಯ ಹಾಗೂ ಉಚಿತ ವಿದ್ಯುತ್

ಬಡ ಕುಟುಂಬಗಳಿಗೆ ಗ್ಯಾಸ್ ಸೌಲಭ್ಯವನ್ನು ರೂಪಿಸುವ ಸಲುವಾಗಿ ಉಜ್ವಲ ಯೋಜನೆಯನ್ನು(Ujjwala Scheme) ಜಾರಿಗೊಳಿಸಲಾಗಿತ್ತು. ಈ ಯೋಜನೆಯನ್ನು ವಿಸ್ತರಿಸಿ ಪ್ರತಿ ಮನೆಗಳಿಗೂ ಪೈಪ್ಲೈನ್ ಮೂಲಕ ಅಗ್ಗದ ಬೆಲೆಯಲ್ಲಿ ಅಡುಗೆ ಮಾಡಲು ಬೇಕಾಗುವ LPG ಗ್ಯಾಸ್ ಅನ್ನು ತಲುಪಿಸಲಾಗುತ್ತಾರೆ.

ಪ್ರಧಾನಮಂತ್ರಿ ಸೂರ್ಯ ಗರ್ ಉಚಿತ ವಿದ್ಯುತ್ ಯೋಜನೆ ಅಡಿಯಲ್ಲಿ ಇನ್ಮುಂದೆ ದೇಶದ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸಿಕೊಡಲಾಗುತ್ತದೆ. ಅಲ್ಲದೆ ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸುವಂತಹ ಜನರು ಅದರಿಂದ ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಲಾಭವನ್ನು ಪಡೆಯಬಹುದು. ಜೊತೆಗೆ ನರೇಂದ್ರ ಮೋದಿ ಅವರು ಜಾರಿಗೊಳಿಸಿರುವ ಮುದ್ರಾ ಯೋಜನೆಯ ಅಡಿಯಲ್ಲಿ ಸೋಲಾರ್ ನಿಂದ ವಿದ್ಯುತ್ ಶಕ್ತಿಯನ್ನು ಉತ್ಪಾದನೆ ಮಾಡುವವರಿಗೆ ಮಿತಿಯನ್ನು 10 ರಿಂದ 20 ಲಕ್ಷಕ್ಕೆ ಹೆಚ್ಚಿಸಲಾಗುತ್ತದೆ.

advertisement

Leave A Reply

Your email address will not be published.