Karnataka Times
Trending Stories, Viral News, Gossips & Everything in Kannada

Pakistan: 1GB ಇಂಟರ್ನೆಟ್ ಡೇಟಾ ಪ್ಯಾಕೆಜ್ ಬೆಲೆ ಪಾಕಿಸ್ತಾನದಲ್ಲಿ ಎಷ್ಟು ಗೊತ್ತಾ?

advertisement

ಜಾಗತಿಕ ಆರ್ಥಿಕತೆಯನ್ನು ನೋಡಿದರೆ ನಮ್ಮ ನೆರೆಯ ದೇಶ ಆಗಿರುವಂತಹ ಪಾಕಿಸ್ತಾನ ಯಾವ ಮಟ್ಟಕ್ಕೆ ಕೆಳಕ್ಕೆ ಹೋಗಿದೆ ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ಪಾಕಿಸ್ತಾನ (Pakistan) ಪ್ರತಿ ಭಾರಿ ಕೂಡ ತನ್ನ ಸೇನಾ ಬಜೆಟ್ ಮೇಲೆ ಹೆಚ್ಚಾಗಿ ಹಣ ಖರ್ಚು ಮಾಡುತ್ತದೆಯೇ ವಿನಹ ತನ್ನ ದೇಶದಲ್ಲಿ ಉದ್ಯೋಗವನ್ನು ಹೆಚ್ಚಿಸುವುದಕ್ಕೆ ಅಥವಾ ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಕ್ಕೆ ಯಾವತ್ತೂ ಕೂಡ ಯೋಚಿಸುವುದಿಲ್ಲ ಅನ್ನೋದು ಕಳೆದು ಸಾಕಷ್ಟು ವರ್ಷಗಳಿಂದಲೂ ಕೂಡ ಸಾಬೀತು ಮಾಡಿಕೊಂಡು ಬಂದಿದೆ.

ಪಾಕಿಸ್ತಾನ (Pakistan) ದೇಶದಲ್ಲಿ ಕೆಲವು ಸಮಯಗಳ ಹಿಂದೆ ಹೋದರೆ ಗೋಧಿ ಹಿಟ್ಟಿಗೂ ಕೂಡ ಜನರ ನಡುವೆ ನೂಕು ನುಗ್ಗಲು ನಡೆಯುತ್ತಿದ್ದಿದ್ದು ಕಂಡುಬಂದಿತ್ತು. ಅಷ್ಟರಮಟ್ಟಿಗೆ ಆಹಾರದ ಕೊರತೆ ಕೂಡ ಪಾಕಿಸ್ತಾನ ದೇಶದಲ್ಲಿ ಇದೆ ಎಂಬುದು ತಿಳಿದು ಬರುತ್ತದೆ.

ಇನ್ನು ರಾಜಕೀಯ ಅಸ್ಥಿರತೆ ಬಗ್ಗೆ ಮಾತನಾಡುವುದಾದರೆ ಸ್ವಾತಂತ್ರ್ಯ ನಂತರದಿಂದಲೂ ಕೂಡ ಇದು ನಡೆದುಕೊಂಡು ಬಂದಿದೆ. ಇದುವರೆಗೂ ಪಾಕಿಸ್ತಾನ ದೇಶದಲ್ಲಿ ಯಾವುದೇ ರೀತಿಯಲ್ಲೂ ಕೂಡ ಒಬ್ಬ ಪ್ರಧಾನಿ ತನ್ನ ಐದು ವರ್ಷಗಳ ಅಧಿಕಾರ ಅವಧಿಯನ್ನು ಪೂರೈಸಿಲ್ಲ ಅನ್ನೋದು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಪಾಕಿಸ್ತಾನ ಭಾರತ ದೇಶದಿಂದ ಬೇರೆ ಆಗಿರಬಹುದು ಆದರೆ ಬೆಳವಣಿಗೆ ವಿಚಾರಕ್ಕೆ ಬಂದರೆ ಇನ್ನೂ ಕೂಡ ಬಡ ದೇಶಗಳ ಸಾಲಿನಲ್ಲಿಯೇ ಇದುವರೆಗೂ ಕೂಡ ಕಾಣಿಸಿಕೊಳ್ಳುತ್ತಿದೆ.

ಪಾಕಿಸ್ತಾನ ದೇಶದಲ್ಲಿ 1GB ಇಂಟರ್ನೆಟ್ ಬೆಲೆ ಎಷ್ಟು ಗೊತ್ತಾ?

 

advertisement

Image Source: Bed and Chai

 

ಬೇರೆ ವಸ್ತುಗಳ ರೀತಿಯಲ್ಲಿ ಪಾಕಿಸ್ತಾನ (Pakistan) ದೇಶದಲ್ಲಿ ಇಂಟರ್ನೆಟ್ ಬೆಲೆ (Internet Price) ಯ ಮೇಲೆ ಕೂಡ ಸಾಕಷ್ಟು ವೇರಿಯೇಶನ್ ಗಳನ್ನು ನಾವು ನೋಡಬಹುದಾಗಿದೆ. ಯಾಕೆಂದ್ರೆ ಕೆಲವೊಂದು ಕಡೆಗಳಲ್ಲಿ ಅತ್ಯಂತ ಚೀಪಾಗಿರುವಂತಹ ಒಂದು ಜೀವಿ ಇಂಟರ್ನೆಟ್ ಡೇಟಾ ಬೆಲೆ ಪಾಕಿಸ್ತಾನದಲ್ಲಿ 29.72 ಪಾಕಿಸ್ತಾನ ರೂಪಾಯಿ ಆಗಿದೆ.

ಇದು ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಇಂಟರ್ನೆಟ್ ಬೆಲೆಯನ್ನು ಹೊಂದಿರುವಂತಹ ದೇಶಗಳಲ್ಲಿ 7ನೇ ಸ್ಥಾನವನ್ನು ಹೊಂದಿದೆ. ಇನ್ನು ಆವರೇಜ್ ರೂಪದಲ್ಲಿ ನೋಡುವುದಾದರೆ ಒಂದು ಜಿಬಿ ಇಂಟರ್ನೆಟ್ ಪಾಕಿಸ್ತಾನದಲ್ಲಿ 250ಗಳ ಆಸುಪಾಸಿನಲ್ಲಿ ಕೂಡ ಕಂಡುಬರುತ್ತದೆ ಎಂಬುದಾಗಿ ಗೂಗಲ್ ಮಾಹಿತಿಯನ್ನು ನೀಡುತ್ತದೆ.

ಭಾರತ ದೇಶದಲ್ಲಿ ಒಂದು ಜಿಬಿ ಇಂಟರ್ನೆಟ್ ಬೆಲೆಯ ಬಗ್ಗೆ ಮಾತನಾಡುವುದಾದರೆ 13.98 ರೂಪಾಯಿ ಆಗಿದೆ. ಇದು ಇಡೀ ವಿಶ್ವದಲ್ಲೇ ಅತ್ಯಂತ ಕಡಿಮೆ ಇಂಟರ್ನೆಟ್ ಬೆಲೆಯನ್ನು ಹೊಂದಿರುವಂತಹ ಆದೇಶಗಳಲ್ಲಿ ಐದನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಬೇರೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ದೇಶದಲ್ಲಿರುವಂತಹ ಜನಸಂಖ್ಯೆಗೆ ಹೋಲಿಕೆ ಮಾಡಿ ನೋಡುವುದಾದರೆ ನಿಜಕ್ಕೂ ಕೂಡ ಇದು ಸಮಾಧಾನಕರ ವಿಚಾರವಾಗಿದೆ.

advertisement

Leave A Reply

Your email address will not be published.