Karnataka Times
Trending Stories, Viral News, Gossips & Everything in Kannada

Kia: 7 ಸೀಟರ್ SUV ಲಾಂಚ್ ಮಾಡಲು ಮುಂದಾದ ಕಿಯಾ, ಒಮ್ಮೆ ಚಾರ್ಜ್ ಮಾಡಿದ್ರೆ 600Km ರೇಂಜ್! ಬೆಲೆ ಇಲ್ಲಿದೆ

advertisement

ಸ್ನೇಹಿತರೆ ಸೌತ್ ಕೊರಿಯಾ ಮೂಲದ ಕಿಯಾ ಕಂಪನಿಯು (Kia Company) ತನ್ನ ಐಷಾರಾಮಿ ಹಾಗೂ ಸ್ಟೈಲಿಶ್ ಕಾರುಗಳ ತಯಾರಿಕೆಯ ಮೂಲಕ ಭಾರತದಲ್ಲಿ ಬಹಳ ಹೆಸರುವಾಸಿಯಾಗಿದ್ದು, ಇದೀಗ ಇವಿ ಸೆಗ್ಮೆಂಟ್ನಲ್ಲಿಯೂ (EV Segment) ವಿಶೇಷ ಆವಿಷ್ಕಾರಗಳನ್ನು ಮಾಡಲು ಮುಂದಾಗಿದೆ. ಹೌದು ಸ್ನೇಹಿತರೆ EV 6 ಕಾರುಗಳ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ಕಿಯಾ ಕಂಪನಿ ಇದೀಗ EV5 ಕಾರುಗಳನ್ನು ಲಾಂಚ್ ಮಾಡಲು ಮುಂದಾಗಿದೆ. SUV ಸೆಗ್ಮೆಂಟ್ನಲ್ಲಿ ಬಿಡುಗಡೆಗೊಳ್ಳಲಿರುವ ಈ ವಾಹನವೂ ಔಟ್ ಡೋರ್ ಅಡ್ವೆಂಚರ್ಗಳಿಗೆ ಸೀಮಿತವಾಗಿದೆ.

Kia EV5 Design and Features:

Kia EV5 ವಾಹನವು ಹೊಸ ಹಾಗೂ ಭವಿಷ್ಯದ ವಿನ್ಯಾಸದಲ್ಲಿ ತಯಾರಾಗಿದ್ದು ಮುಂಭಾಗದಲ್ಲಿ ಡಿಜಿಟಲ್ ಟೈಗರ್ ನೋಸ್ (Digital Tiger Nose) ಗ್ರಿಲನ್ನು ಅಳವಡಿಸಿದ್ದಾರೆ. ಅದರ ಜೊತೆಗೆ LED DRL ಎಲೆಕ್ಟ್ರಿಕ್ ಪವರ್ ಟ್ರೈನ್ ಸಿಸ್ಟಮ್ ಇವೆ. ಕಾರಿನ ಮಧ್ಯಭಾಗದಲ್ಲಿ ವಾಹನದ ಕಾರ್ಯಗಳನ್ನು ನಿಯಂತ್ರಣ ಮಾಡಲು ಬೃಹತಾದ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಪೆಲ್‌ ಮತ್ತು ಆಂಡ್ರಾಯ್ಡ್ ಆಟೋ ಕಾರ್ ಪ್ಲೇ, ಡಿಜಿಟಲ್ ಕ್ಲಸ್ಟರ್ (Digital Cluster) ಹಾಗೂ 360° ಕ್ಯಾಮೆರಾಗಳಿವೆ.

Kia EV5 Performance:

 

Image Source: Top Gear

 

advertisement

ಎರಡು ಶಕ್ತಿಯುತ ಬ್ಯಾಟರಿ ಪ್ಯಾಕ್ (Battery Pack) ಅಳವಡಿಕೆಯಲ್ಲಿ ತಯಾರು ಮಾಡಲಾಗಿರುವ Kia EV5 ನಲ್ಲಿ 58 kWh ಸ್ಟ್ಯಾಂಡರ್ಡ್ ಯೂನಿಟ್ ಮತ್ತು 77.4kWh ಬೃಹತಾದ ಬ್ಯಾಟರಿ ಯೂನಿಟ್ಗಳಿವೆ. ಸ್ಟ್ಯಾಂಡರ್ಡ್ Kia EV5 217 PS ಶಕ್ತಿ ಹಾಗೂ 310 Nm ಟಾರ್ಕನ್ನು ಉತ್ಪಾದಿಸುವ ಸಾಮರ್ಥ್ಯವಿದೆ.

ಶಕ್ತಿಯುತ ಬ್ಯಾಟರಿ ಪ್ಯಾಕ್ನಲ್ಲಿ ತಯಾರಾಗಿರುವ ಈ ವಾಹನವನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಬರೋಬರಿ 510 ಕಿ.ಮೀ ನಷ್ಟು ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿದಿನ ದೂರ ದೂರಗಳಿಗೆ ಪ್ರಯಾಣಿಸುವವರಿಗೆ ಅಥವಾ ವಾರಾಂತ್ಯದಲ್ಲಿ ಪ್ರವಾಸಕ್ಕೆ ತೆರಳುವವರಿಗೆ ಈ ವಾಹನ ಅತ್ಯುತ್ತಮ ಆಯ್ಕೆ.

ಅದರಂತೆ 77.4kWh ದೊಡ್ಡದಾದ ಬ್ಯಾಟರಿ ಪ್ಯಾಕ್ (Larger Battery Pack) ಅಳವಡಿಕೆಯಲ್ಲಿ ತಯಾರಾಗಿರುವ ಕಿಯಾ ಎಲೆಕ್ಟ್ರಿಕ್ ವಾಹನವನ್ನು ಒಮ್ಮೆ ಚಾರ್ಜ್ ಮಾಡಿದರೆ 510ಕ್ಕಿಂತಲೂ ಹೆಚ್ಚಿನ ರೇಂಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ, ಜೊತೆಗೆ 217PS ಶಕ್ತಿಯನ್ನು ಉತ್ಪಾದಿಸುತ್ತದೆ. AWD ರೂಪಾಂತರದ ಕಿಯಾ ವಾಹನವು 306Ps ಶಕ್ತಿ ಹಾಗೂ 608Nm ಟಾರ್ಕ್ ಉತ್ಪಾದಿಸುತ್ತದೆ.

Kia EV5 Price:

 

Image Source: Autoblog

 

ಪ್ರೀಮಿಯಂ ಎಲೆಕ್ಟ್ರಿಕ್ ವಾಹನಗಳ ಸೆಗ್ಮೆಂಟ್ ನಲ್ಲಿ ಅಗ್ರಸ್ಥಾನವನ್ನು ಗಿಟ್ಟಿಸಿಕೊಂಡಿರುವ Kia EV5 ಬಿಡುಗಡೆಗೂ ಮುನ್ನವೇ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದು, ಕಂಪನಿಯು ಅಧಿಕೃತ ಬೆಲೆಯನ್ನು ಎಲ್ಲಿಯೂ ಬಹಿರಂಗಗೊಳಿಸಿಲ್ಲ. ಆದರೆ ಮೂಲಗಳ ಮಾಹಿತಿಯ ಪ್ರಕಾರ ನಮ್ಮ ಭಾರತದಲ್ಲಿ ವಾಹನ ಬಿಡುಗಡೆಯಾದರೆ 45 ಲಕ್ಷದಿಂದ 55 ಲಕ್ಷದ ಎಕ್ಸ್ ಶೋರೂಮ್ ಬೆಲೆಯಲ್ಲಿ ಲಭ್ಯವಿರಲಿದೆ.

advertisement

Leave A Reply

Your email address will not be published.