Karnataka Times
Trending Stories, Viral News, Gossips & Everything in Kannada

Arecanut Cultivation: 2024 ರಲ್ಲಿ ಅಡಿಕೆ ಕೃಷಿ ಮಾಡಬೇಕು ಅಂದುಕೊಂಡವರಿಗೆ ಮಹತ್ವದ ಸೂಚನೆ

advertisement

ಅಡಿಕೆ ಕೃಷಿ ಇಂದು ಲಾಭದಾಯಕ ಕ್ಷೇತ್ರವಾಗಿದ್ದು ಅನೇಕ ರೈತರು ಈ ಕೃಷಿಯಲ್ಲಿ ಲಕ್ಷಾಂತರ ರೂಪಾಯಿ ಲಾಭ ಪಡೆಯುತ್ತಿದ್ದಾರೆ. ಅಡಿಕೆ ಕೃಷಿ (Arecanut Cultivation) ಮಾಡುವ ಮುನ್ನ ಅವುಗಳಲ್ಲಿ ಯಾವ ಯಾವ ಕ್ರಮ ಅನುಸರಿಸಿದರೆ ನಿಮಗೆ ಅಧಿಕ ಲಾಭ ಸಿಗಲಿದೆ. ಅಡಿಕೆ ಸಸಿ ಹೇಗೆ ನಾಟಿ ಮಾಡಿದರೆ ಉತ್ತಮ, ಇತರ ಅಗತ್ಯ ಪೋಷಕಾಂಶಗಳು ಯಾವುದು ಎಂಬ ಇತ್ಯಾದಿ ಮಾಹಿತಿಗಳ ಬಗ್ಗೆ ನಾವು ಇಂದು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.

ಸಸಿಗಳ ಆಯ್ಕೆ ಬಹಳ ಮುಖ್ಯ:

ಅಡಿಕೆ ಕೃಷಿ (Arecanut Cultivation) ಮಾಡುವ ಮುನ್ನ ಸಸಿಗಳ ನಾಟಿ ಮಾಡುವುದು ಬಹಳ ಮುಖ್ಯ. ಅದನ್ನು ನೀವು ಖರೀದಿ ಮಾಡಿರಬಹುದು ಅಥವಾ ಸಸಿಯನ್ನು ಕೂಡ ನೀವೇ ನಾಟಿ ಮಾಡಿದರೂ ಅವುಗಳ ಆಯ್ಕೆ ಮಾಡುವ ಕ್ರಮದ ಅರಿವು ಅಗತ್ಯ. ಯಾವತರದ ಸಸಿಯನ್ನು ಎಲ್ಲಿ ನಾಟಿ ಮಾಡುತ್ತಿದ್ದೀರಿ ಎಂಬುದು ಬಹಳ‌ ಮುಖ್ಯವಾಗಲಿದೆ. ಅಡಿಕೆ ಸಸಿಯನ್ನು ನೀವೆ ಮಾಡಿಕೊಳ್ಳುವುದಾದರೆ ಬಿಸಿಲು ನೆರಳು, ಬೆಳಕು ಎಲ್ಲವೂ ಚೆನ್ನಾಗಿ ಸಿಗುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಮೇಲ್ಗಡೆ ಹಸಿರು ಹಾಸನ್ನು ಹಾಕಬೇಕು.

ಅಂತರ ಇರಲಿ:

 

Image Source: PepperHub

 

advertisement

ಅಡಿಕೆ (Arecanut) ಸಸಿಯನ್ನು ನೀವು ಪೋಷಣೆ ಮಾಡುವಾಗ ಎರಡು ಸಾಲುಗಳ ಅಂತರ ಕಾಯುವುದು ಬಹಳ ಮುಖ್ಯ. ಒತ್ತೊತ್ತಾಗಿ ನೆಟ್ಟರೆ ಅವುಗಳು ಸಮೃದ್ಧವಾಗಿ ಬೆಳೆಯಲಾರವು. ಹೆಚ್ಚಿನ ಜನರು ಸಸಿಗಳನ್ನು ಪ್ಯಾಕೆಟ್ ನಲ್ಲಿ ಬೆಳೆಸುತ್ತಾರೆ ಅದನ್ನು ಬಳಿಕ ಹಾಗೆ ತೋಟಕ್ಕೂ ಹಾಕಿ ಬಿಡುತ್ತಾರೆ ಅದು ತಪ್ಪು. ಪ್ಯಾಕೆಟ್ ನಿಂದ ಗಿಡವನ್ನು ಹೊರಗೆ ತೆಗೆದು ಬೇರುಗಳಿಗೆ ಹಾನಿಯಾಗದಂತೆ ನಾಟಿ ಮಾಡಬೇಕು.

ಈ ಸಲಹೆ ಅನುಸರಿಸಿ:

  • ನೀವು ಅಡಿಕೆ ಸಸಿ ನಾಟಿ ಮಾಡುವಾಗ ಡಿಗ್ಗರ್ ಮೆಷಿನ್ ನಿಂದ ಹೊಂಡ ತೋಡಿದರೆ ಮಣ್ಣಿನ ಫಲವತ್ತತೆ ನಾಶ ಆಗಲಿದೆ.
  • ಶ್ರಮಿಕರನ್ನು ಬಳಸಿ ಅಡಿಕೆ ಸಸಿಗಾಗಿ ಗುಂಡಿ ತೋಡುವುದು ಉತ್ತಮ.
  • ಒಂದು ವರ್ಷದ ಅಡಿಕೆ ಸಸಿ ನೆಡುವುದು ಉತ್ತಮ.
  • ಅಡಿಕೆ ಸಸಿ ಗುಂಡಿಗೆ ಹಾಕುವಾಗ ಕಾಲಿನಲ್ಲಿಯೇ ಮಣ್ಣಿನ ಹದ ಮಾಡಿಕೊಳ್ಳಬೇಕು.
  • 80% ರಷ್ಟು ಗುಂಡಿ ಮುಚ್ಚಿ ಬಳಿಕ ಅದಕ್ಕೆ ಕೆಲ ಸಾವಯವ ಹಾಗೂ ಸ್ವಲ್ಪ ಪ್ರಮಾಣದಲ್ಲಿ ರಾಸಾಯನಿಕ ಸಿಂಪಡಣೆ ಮಾಡಬೇಕು.
  • ಗೊಬ್ಬರ ಹಾಕಿದ್ದ ಬಳಿಕ ಪುನಃ ಅದರ ಮೇಲೆ ಮಣ್ಣು ಹಾಕಿ ಮುಚ್ಚಬೇಕು.
  • ಗಿಡಗಳಿಗೆ ಕೋಲನ್ನು ಸಪೋರ್ಟ್ ನೀಡಿ ಕಟ್ಟು ಹಾಕಿ ಬೆಳೆಸಬೇಕು.

ನೀರಿನ ವ್ಯವಸ್ಥೆ:

ಹೆಚ್ಚಾಗಿ ಅಡಿಕೆ ಸಸಿ ಪೋಷಣೆ ಮಾಡಲು ಗಿಡಗಳಿಗೆ ಅಧಿಕ ನೀರು ಬೇಕು ಎಂಬ ತಪ್ಪು ಪರಿಕಲ್ಪನೆ ಜನರಿಗೆ ಬರುವುದು ಕಾಣಬಹುದು ಆದರೆ ಗಿಡಗಳಿಗೆ ತಂಪು ಬೇಕಾಗಲಿದ್ದು ಅಧಿಕ ನೀರಿನ ಅಗತ್ಯ ಇರಲಾರದು. ಹಾಗಾಗಿ ಮಳೆಗಾಲದ ನೀರು ಬೇರಿನಲ್ಲೇ ಉಳಿದು ಮಣ್ಣು ಸಡಿಲವಾಗಿ ಅಡಿಕೆ ಸಸಿ ಹಾನಿಯಾಗದಂತೆ ಕಾಯುವ ಸಲುವಾಗಿ ಸಸಿಯ ಪಕ್ಕದಲ್ಲಿ ನೀರು ಹೋಗುವ ಮಾರ್ಗ ಕೂಡ ಮಾಡಬೇಕು.

advertisement

Leave A Reply

Your email address will not be published.