Karnataka Times
Trending Stories, Viral News, Gossips & Everything in Kannada

Arecanut Cultivation: ಅಡಿಕೆ ತೋಟಕ್ಕೆ ಕುರಿ ಗೊಬ್ಬರ ಬಳಸಬಹುದೇ? ತಜ್ಞರ ಉತ್ತರ

advertisement

ಅಡಿಕೆ ತೋಟದ ಕೃಷಿಯನ್ನು (Arecanut Cultivation) ಆಯ್ಕೆ ಮಾಡುವ ಅನೇಕ ರೈತರು ಕಾಲ ಕ್ರಮೇಣ ಕೃಷಿ ವಿಧಾನದಲ್ಲಿ ಸರಿಯಾದ ಕ್ರಮ ಅನುಸರಿಸದೇ ತೊಂದರೆಗೆ ಒಳಪಡುತ್ತಾರೆ. ಹೀಗಾಗಿ ಅಡಿಕೆ ಕೃಷಿ ಹೇಗೆ ಮಾಡಬೇಕು ಹಾಗೂ ಯಾವ ರೀತಿಯಾಗಿ ಮಾಡಬಾರದು ಎಂಬ ಸರಿಯಾದ ಪ್ರಜ್ಞೆ ಕೃಷಿಕರಿಗೆ ಇರಲೇ ಬೇಕಾಗಲಿದೆ. ಅಡಿಕೆ ಕೃಷಿಯಲ್ಲಿ ಕುರಿ ಗೊಬ್ಬರ ಬಳಸಬಹುದೇ? ಸಾವಯವ ಗೊಬ್ಬರ ಬಳಕೆಯಲ್ಲಿ ಸರಿಯಾದ ಕ್ರಮ ಯಾವುದು? ಎಂಬ ಇತ್ಯಾದಿ ಮಾಹಿತಿಗಳ ಬಗ್ಗೆ ನಾವಿಂದು ನಿಮಗೆ ಪೂರ್ಣ ಮಾಹಿತಿ ನೀಡಲಿದ್ದೇವೆ.

ಕೃಷಿ ಒಂದು ಲಾಭದಾಯಕ ಕ್ಷೇತ್ರವಾಗಿದ್ದರೂ ಅಲ್ಲಿ ತೆಗೆದುಕೊಳ್ಳುವ ನಿರ್ಣಯಗಳಿಂದಲೇ ಲಾಭ, ನಷ್ಟದ ಲೆಕ್ಕಾಚಾರ ಸಾಗಲಿದೆ. ಅದರಲ್ಲೂ ತೋಟಗಾರಿಕೆಯಾದ ಅಡಿಕೆ, ತೆಂಗು, ಕಾಫಿ ಇತ್ಯಾದಿ ಬೆಳೆ ತೆಗೆಯಲು ಬಯಸಿದರೆ ಮೊದಲೇ ಪರಿಶೀಲನೆ ಮಾಡಿಕೊಳ್ಳಬೇಕು.

ಈ ನಿಟ್ಟಿನಲ್ಲಿ ಗೊಬ್ಬರದ ನಿರ್ವಹಣೆ ಬಹಳ ಮುಖ್ಯ ಪಾತ್ರವನ್ನೇ ವಹಿಸಲಿದೆ. ಸಾಮಾನ್ಯವಾಗಿ ತೋಟಗಳಿಗೆ ಹಸಿರೆಲೆ ಗೊಬ್ಬರ, ಸಾವಯವ, ಸಗಣಿ ಗೊಬ್ಬರ, ಕುರಿ ಗೊಬ್ಬರ ಇತರ ರಾಸಾಯನಿಕ ಮತ್ತು ರಸಗೊಬ್ಬರ ಕೂಡ ಬಳಸುತ್ತಾರೆ. ಇದರ ಬಳಕೆಗೆ ಸರಿಯಾದ ಕ್ರಮ ಕೂಡ ತಿಳಿದು ಮಾಡಿದರೆ ಅಧಿಕ ಇಳುವರಿಯ ಜೊತೆಗೆ ಲಾಭ ಕೂಡ ಸಿಗಲಿದೆ.

ಸಾವಯವ ವಿಜ್ಞಾನ:

 

Image Source: Shutterstock

 

advertisement

ಸಾವಯವ ಕೃಷಿ ಎನ್ನುವುದು ವಿಜ್ಞಾನದ ಭಾಗವೇ ಆಗಿದೆ. ವಿಜ್ಞಾನದಲ್ಲಿ ಇರುವಂತೆ ಅನೇಕ ಸಂಗತಿ ಇದರಲ್ಲಿ ತಿಳಿಸಲಾಗಿದ್ದು ಸರಿಯಾದ ಗೊಬ್ಬರ ನಿರ್ವಹಣೆ ಹೇಗೆ ಎಂಬುದು ತಿಳಿಸಲಾಗಿದೆ. ಮಣ್ಣಿನ ಆಳಕ್ಕೆ ಕೆಲ ಗೊಬ್ಬರ ಸೇರ ಬೇಕು ಅಂತವುಗಳಲ್ಲಿ ಸಾವಯವ ಹಸಿರೆಲೆ ಗೊಬ್ಬರ ಕಾಣಬಹುದು. ಕೆಲವೊಂದು ಬುಡಕ್ಕೆ ಪೋಷಣೆ ಮಾಡಲು ಬಳಸುತ್ತಾರೆ ಹೆಚ್ಚಾಗಿ ಹುಳು ಕಾಟ ಕಂಡು ಬಂದಾಗ ಬೇರಿಗೆ ರಾಸಾಯನಿಕ ಸಿಂಪಡಣೆ ಮಾಡುತ್ತಾರೆ‌. ಗೊಬ್ಬರವನ್ನು ಅಡಿಕೆ (Arecanut) ಸಸಿಯ ಬೇರು ಕಾಣದಂತೆ ಮುಚ್ಚಿ ಬಿಟ್ಟರೆ ಪ್ರಯೋಜನ ಇರಲಾರದು ಬದಲಾಗಿ ಅಡಿಕೆ ಮರದ ಸುತ್ತ ಮುತ್ತ ತಳಿದು ಹಾಕಬೇಕು ಆಗ ಅದರಲ್ಲಿ ಇರುವ ಸೂಕ್ಷ್ಮ ಜೀವಿಗಳು ಮಣ್ಣನ್ನು ಫಲವತ್ತಾಗಿಸಲಿವೆ.

ಕುರಿ ಗೊಬ್ಬರ ಬೇಕಾಗುತ್ತಾ?

 

Image Source: Fertilizer Machinery

 

ಸಾವಯವ ಕೃಷಿಯ ಒಂದು ಕ್ರಮವಾದ ಕುರಿ ಗೊಬ್ಬರವನ್ನು (Sheep Manure) ನೀವು ಅಡಿಕೆ ಪೋಷಣೆ ಮಾಡಲು ಬಳಸಬಹುದು ಆದರೆ ಅದನ್ನು ಯಾವ ಕ್ರಮದಿಂದ ಬಳಸಿದ್ದೀರಿ ಎಂಬುದು ಮುಖ್ಯ. ಕುರಿ ಗೊಬ್ಬರದಲ್ಲಿ ಮಣ್ಣಿನ ಫಲವತ್ತತೆ ವೃದ್ಧಿ ಮಾಡುವ ಬ್ಯಾಕ್ಟೀರಿಯಾ ಇದೆ ಹಾಗಾಗಿ ನೀವು ಅಡಿಕೆ ಬುಡಕ್ಕೆ ಇದನ್ನು ಗುಡ್ಡೆ ಮಾಡಿ ಹಾಕಿದರೆ ಅವುಗಳು ಬಿಸಿಲಿಗೆ ಸಾಯಲಿವೆ ಹಾಗಾಗಿ ಸುತ್ತ‌ಮತ್ತಲಿ‌ನ ಮಣ್ಣಿಗೆ ತಳಿದು ಹಾಕಬೇಕು ಆಗ ಮಣ್ಣು ಸಮೃದ್ಧವಾಗಲಿದೆ.

ಬೇರಿನ ರಕ್ಷಣೆ:

ಅಡಿಕೆ ಸಸಿಯನ್ನು ನೆಡುವಾಗಲೇ ಬೇರಿನ ರಕ್ಷಣೆ ಆರಂಭಿಕ ಹಂತದಲ್ಲಿ ಮಾಡಬೇಕು. ಬೇರಿನ ರಕ್ಷಣೆ ಮಾಡುವಾಗ ಅದಕ್ಕೆ ಅಗತ್ಯ ಪೋಷಕಾಂಶ ಹಾಕಬೇಕಾಗಲಿದೆ. ಬೇರು ಬಿಸಿಲಿನ ತಾಪಕ್ಕೆ ಸಿಕ್ಕು ನಲುಗಿ ಹೋಗದಂತೆ ನೋಡಿಕೊಳ್ಳಬೇಕು. ಅಡಿಕೆ ಸಸಿ ಪಕ್ಕದಲ್ಲಿ ಕಾಟುಗಿಡಗಳು ಇದ್ದು ಅವುಗಳನ್ನು ಕಟಾವು ಮಾಡುವಾಗ ಬೇರಿಗೆ ಹಾನಿ ಆಗದಂತೆ ನೋಡಿಕೊಳ್ಳಬೇಕು. ಹಾಗಾಗಿ ಬೇರಿನ ರಕ್ಷಣೆ ಬಹಳ ಮುಖ್ಯ ಎನ್ನಬಹುದು.

advertisement

Leave A Reply

Your email address will not be published.