Karnataka Times
Trending Stories, Viral News, Gossips & Everything in Kannada

Arecanut Cultivation: ಈ ವಿಧಾನ ಅಡಿಕೆ ತೋಟದಲ್ಲಿ ಅನುಕರಣೆ ಮಾಡಿದ್ರೆ 1 ಗಿಡದಲ್ಲಿ ಮಿನಿಮಮ್ 20kg ಅಡಿಕೆ ಗ್ಯಾರಂಟಿ

advertisement

ಕೃಷಿ ಅಂತ ಬಂದಾಗ ರೈತರು ಹೆಚ್ಚಿನ ಒತ್ತು ನೀಡುತ್ತಾರೆ. ಹಿಂದಿನ ಕಾಲದಿಂದಲೂ ಕೃಷಿ ಚಟುವಟಿಕೆಗಳಿಗೆ ಸರಕಾರ ಹೆಚ್ಚಿನ ಪ್ರಾಶಸ್ತ್ಯ ನೀಡ್ತಾ ಇದೆ. ಇಂದು ಕೂಡ ಕೃಷಿಯಲ್ಲಿ ಉತ್ತೇಜನ ಕಾಣಲು ಕೃಷಿ ಬೀಜ ವಿತರಣೆ, ಕೃಷಿ ಯಂತ್ರಗಳ ಖರೀದಿ ಮಾಡಲು ಸಬ್ಸಿಡಿ ವಿತರಣೆ ಕೂಡ ಮಾಡುತ್ತಿದೆ.ಅದೇ ರೀತಿ ಇಂದು ಅಡಿಕೆ ಬೆಳೆಯುವ ರೈತರ ಸಂಖ್ಯೆಯು ಹೆಚ್ಚಾಗಿದ್ದು ಕೆಲವು ರೈತರು ಹೆಚ್ಚಿನ ಆದಾಯ ಗಳಿಕೆ ಮಾಡುತ್ತಿದ್ದಾರೆ. ಅಡಿಕೆ ಕೃಷಿ (Arecanut Cultivation) ಯಲ್ಲಿ ಉತ್ತಮ ಇಳುವರಿ ಕಾಣ ಬೇಕಾದ್ರೆ ಅದಕ್ಕೆ ಕೆಲವೊಂದು ನಿಯಮ ಗಳನ್ನು ಅನುಸರಿಸಬೇಕು. ಅಡಿಕೆ ಗಿಡಗಳು ತೋಟದ ಮಣ್ಣಿಗೆ ಹೊಂದಿಕೊಳ್ಳುವಂತೆ ರೈತರು ಗಿಡ ನೆಡಬೇಕು. ಹಾಗಿದ್ದಲ್ಲಿ ಅಡಿಕೆ ತೋಟದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಹೇಗೆ ಸಾಧ್ಯ ಎಂಬ ಮಾಹಿತಿ ಈ ಲೇಖನದಲ್ಲಿ ಇದೆ.

ರಾಸಾಯನಿಕ ಗೊಬ್ಬರ ಬಳಕೆ ಮಾಡಬಾರದು:

ರೈತರು ತಾವು ನೆಟ್ಟಂತಹ ಗಿಡಗಳು ಬಹು ಬೇಗನೆ ಫಸಲು ಕೊಡಬೇಕು ಎಂದು ರಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುತ್ತಾರೆ. ಅದ್ರೆ ಇದರಿಂದ ತೋಟ ಬೆಳೆಯುದು ಬಿಟ್ಟರೆ ಅಡಿಕೆ ಫಸಲನ್ನು ನೀಡಲಾರದು, ಅದೇ ರೀತಿ ತೋಟದಲ್ಲಿ ರೋಗ ಭಾದಕ ಸಮಸ್ಯೆ ಕಂಡು ಬರುತ್ತದೆ. ಹೀಗಾಗಿ ರೈತರು ರಾಸಾಯನಿಕ ಗೊಬ್ಬರ ಬಳಕೆ ಮಾಡುವುದನ್ನು ಮೊದಲು ತಪ್ಪಿಸಬೇಕು.

ತೋಟದಲ್ಲಿನ ತ್ಯಾಜ್ಯ ಬಳಕೆ ಮಾಡಿ:

 

advertisement

Image Source: Caritas India

 

ಹೆಚ್ಚಿನ‌ ರೈತರು ತೋಟದಲ್ಲಿ ‌ಇದ್ದ ಗಿಡಗಳ ಎಲೆ, ಕಡ್ಡಿಕಸ, ಅಡಿಕೆ (Arecanut) ಯ ಒಣಗಿದ ಸಿಪ್ಪೆ ‌ಇತ್ಯಾದಿಗಳನ್ನು ಒಟ್ಟು‌ ಸೇರಿಸಿ ಬದಿಗೆ ಹಾಕುತ್ತಾರೆ.‌ ಅದ್ರೆ ಇದು ತಪ್ಪು ಈ ತ್ಯಾಜ್ಯ ಗಳನ್ನು ಒಟ್ಟು ಸೇರಿಸಿ ತೋಟದ ಬುಡಕ್ಕೆ ಹಾಕಿದ್ರೆ ಬಹಳಷ್ಟು ಉತ್ತಮ.‌ ತೋಟದಲ್ಲಿ ಸೂಕ್ಷ್ಮ ಪೋಷಕಾಂಶಗಳು ಇದರಿಂದ ದೊರೆಯುತ್ತದೆ. ಇನ್ನು ರೈತರು ಡಾ. ಸಾಯಿಲ್ (Dr. Soil) ಬಳಕೆ ಮಾಡುವುದರಿಂದ ತೋಟದಲ್ಲಿ ಎರೆಹುಳು ಗಳ ಸಂಖ್ಯೆ ಹೆಚ್ಚಾಗಿ ತೋಟದಲ್ಲಿ ಇಳುವರಿ ಹೆಚ್ಚಾಗುತ್ತದೆ.

20ಕ್ಕಿಂತ ಹೆಚ್ಚು ಕೆ.ಜಿ ಇಳುವರಿ:

 

Image Source: Deccan Herald

 

ನೀವು ತೋಟದಲ್ಲಿ ಹೆಚ್ಚಾಗಿ ನೀರು ಸಹ ಬಿಡಬಾರದು. ಹೆಚ್ಚಿನ ರೈತರಿಗೆ ನೀರು ಹೆಚ್ಚಾಗಿ ಬಿಟ್ಟರೆ ಫಸಲು ಉತ್ತಮ ಕೊಡಲಿದೆ‌ ಎನ್ನುವ ಮನೋಭಾವ ಇದೆ. ಆದ್ರೆ ಅಡಿಕೆ ‌ತೋಟಕ್ಕೆ (Arecanut Cultivation) ನೀರು ಕಡಿಮೆ ಮಾಡಬೇಕು.‌ ವಾರಕೊಮ್ಮೆ ನೀರು ಬಿಟ್ಟರೆ ಸಾಕು. ಇನ್ನು ಮನೆಯಲ್ಲಿರುವ ಸಗಣಿಗೊಬ್ಬರ, ಎಲೆ ಗೊಬ್ಬರ ಇತ್ಯಾದಿ ಗಳನ್ನು ತೋಟಕ್ಕೆ ಹಾಕಿದ್ರೆ ಸಾಕು.‌ ಈ ವಿಧಾನ ಅನುಸರಿಸುವ ಮೂಲಕ ರೈತರೊಬ್ಬರು ‌ತೋಟದಲ್ಲಿ 20 ಕೆ.ಜಿ ಕ್ಕಿಂತ ಹೆಚ್ಚಿನ ಇಳುವರಿಯನ್ನು ಪಡೆದಿದ್ದಾರೆ. ಅದೇ ರೀತಿ ರೈತರು ಮಣ್ಣಿನ ಪರೀಕ್ಷೆ ಮಾಡಿಸಿಕೊಂಡು ಮಣ್ಣಿಗೆ ಹೊಂದಿಕೊಳ್ಳುವಂತೆ ಅಡಿಕೆ ಮರಗಳ ಪೋಷಣೆ ಮಾಡಿ, ಸರಿಯಾದ ಕ್ರಮ ಅಡಿಕೆ ತೋಟದಲ್ಲಿ ಅನುಸರಿಸಿದರೆ ನೂರು‌ ಕ್ವಿಂಟಾಲ್ ಅಡಿಕೆ ಪಡೆಯಬಹುದು.

advertisement

Leave A Reply

Your email address will not be published.