Karnataka Times
Trending Stories, Viral News, Gossips & Everything in Kannada

Arecanut Cultivation: 10 ವರ್ಷದಿಂದ ಗೊಬ್ಬರವೇ ಬಳಸದ ಅಡಿಕೆ ತೋಟ! ಒಂದೊಂದು ಅಡಿಕೆ ಗೊನೆ 10ಕೆಜಿ, ಇಲ್ಲಿದೆ ಸೀಕ್ರೆಟ್ಸ್

advertisement

ದೇಶದಲ್ಲಿ ಸಾಕಷ್ಟು ಬೇರೆಬೇರೆ ರೀತಿಯ ಕೃಷಿ ಚಟುವಟಿಕೆಗಳ ಮೇಲೆ ರೈತರು ಅವಲಂಬಿಸಿರುತ್ತಾರೆ. ಕೆಲವೊಂದಿಷ್ಟು ಅತ್ಯಂತ ಉತ್ತಮ ಲಾಭ ತಂದು ಕೊಡುವ ಕೃಷಿಗಳಾಗಿದ್ದರೆ ಇನ್ನೂ ಕೆಲವು ಸಾಧಾರಣ ಕೃಷಿ ಎನ್ನಬಹುದು. ಆದರೆ ನಿಮಗೆ ಗೊತ್ತಿದ್ಯಾ? ಇಂದು ವಿದೇಶಕ್ಕೂ ರಫ್ತಾಗುವಂತಹ ಅಡಿಕೆ ಕೃಷಿ (Arecanut Cultivation) ದಿನದಿಂದ ದಿನಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣ ಕೆಲವು ರೈತರು ಲಕ್ಷಾಂತರ ರೂಪಾಯಿಗಳನ್ನು ಕೇವಲ ಅಡಿಕೆ ಕೃಷಿಯಿಂದ ಇಂದು ಸಂಪಾದನೆ ಮಾಡುತ್ತಿರುವುದು.

ಗೊಬ್ಬರ ಬಳಕೆ ಇಲ್ಲದೆ ರೈತರಿಗೆ ಅಧಿಕ ಲಾಭ:

ಕೆಲವೊಂದಿಷ್ಟು ರೈತರ ಮಾತುಗಳನ್ನು ಕೇಳಿದರೆ ನಿಜಕ್ಕೂ ಕೃಷಿ ಮಾಡುವುದು ಹೇಗೆ ಎನ್ನುವ ಬಗ್ಗೆ ನಿಮಗೆ ಒಂದು ಐಡಿಯಾ ಸಿಗುತ್ತೆ. ಇತ್ತೀಚಿಗೆ ತುಮಕೂರಿನ ಮಧುಗಿರಿ ತಾಲೂಕಿನ ನಿವಾಸಿ ವಿಶ್ವನಾಥ್ ಅವರು ತಮ್ಮ ತೋಟದಲ್ಲಿ ಅಡಿಕೆ ಇಳುವರಿ (Arecanut Yield) ಎಷ್ಟು ಅದ್ಭುತವಾಗಿದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ರೈತ ಮಿತ್ರ ವಿಶ್ವನಾಥ್ ಅವರು ಹೇಳುವ ಪ್ರಕಾರ, ಕಳೆದ ಹತ್ತು ವರ್ಷಗಳಿಂದ ಅವರು ಅಡಿಕೆ ತೋಟಕ್ಕೆ (Arecanut Cultivation) ಯಾವುದೇ ರೀತಿಯ ಉಳುಮೆ ಮಾಡಿಲ್ಲ, ಕುರಿ ಕೋಳಿ ಅಥವಾ ಯಾವುದೇ ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡಿಲ್ಲ. ಆದರೆ ಅವರು ಪಡೆಯುತ್ತಿರುವ ಇಳುವರಿ ಹೇಗಿದೆ ಗೊತ್ತಾ? ಪ್ರತಿ ಅಡಿಕೆ ಕೊನೆಯಲ್ಲಿ ಕನಿಷ್ಠ 10 ಕೆಜಿ ಹಸಿ ಅಡಿಕೆ ಪಡೆಯುವಷ್ಟು ಉತ್ತಮ ಇಳುವರಿ ಸಿಗುತ್ತಿದೆ. ಒಂದು ವರ್ಷದಲ್ಲಿ 10 ಕ್ವಿಂಟಲ್ ಅಡಿಕೆಯನ್ನು ಕೇವಲ 400 ಅಡಿಕೆ ಗಿಡದಿಂದ ಪಡೆಯಲು ಸಾಧ್ಯವಾಗಿದೆ ಇದಕ್ಕೆ ಕಾರಣ ಏನು ಗೊತ್ತಾ?

ಸಾವಯವ ಕೃಷಿ ಪದ್ಧತಿ ಅಳವಡಿಕೆ:

ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿ ಪದ್ಧತಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಎಷ್ಟು ವರ್ಷಗಳ ಕಾಲ ಅಧಿಕ ಇಳುವರಿಗಾಗಿ ರಾಸಾಯನಿಕ ಗೊಬ್ಬರಗಳನ್ನ ಭೂಮಿಗೆ ಹಾಕಿ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಇಂದು ಅದೆಷ್ಟೋ ಜಮೀನುಗಳಲ್ಲಿ ಎಷ್ಟೇ ಪ್ರಯತ್ನ ಪಟ್ಟರು ಕೂಡ ಒಂದು ಹಂತಕ್ಕಿಂತ ಹೆಚ್ಚಿನ ಇಳುವರಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಯಾಕಂದ್ರೆ ಭೂಮಿ ಫಲವತ್ತಾಗಿಲ್ಲ ಮಳೆಯ ನೀರಿನ ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದೆ. ಅಂತರ್ಜಲದ ಮೊಟ್ಟವು ಕುಸಿದಿದೆ ಈ ಎಲ್ಲಾ ಕಾರಣಗಳಿಂದಾಗಿ ಕೆಲವರು ಉತ್ತಮ ಅಡಿಕೆ ಇಳುವರಿ (Arecanut Yield) ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

 

Image Source: Amazon

 

advertisement

ಆದರೆ ವಿಶ್ವನಾಥ್ ಎನ್ನುವ ರೈತರು ಸಾವಯವ ಕೃಷಿಯನ್ನು ಮೆಚ್ಚಿಕೊಂಡು ಬಂದಿದ್ದಾರೆ. ಇವರು ಹೇಳುವ ಪ್ರಕಾರ ತೋಟಗಳಲ್ಲಿ ಇರುವ ಒಂದೇ ಒಂದು ಕಸ ಕಡ್ಡಿಗಳನ್ನು ಕೂಡ ಕಿತ್ತು ಆಚೆಗೆ ಬಿಸಾಡಬಾರದು ಅದನ್ನ ಮತ್ತೆ ನಮ್ಮ ಅಡಿಕೆ ಗಿಡದ ಬುಡಕ್ಕೆ ಗೊಬ್ಬರವಾಗಿ ಬಳಕೆ ಮಾಡಿಕೊಂಡರೆ ಸಾಕು ಬೇರೆ ಯಾವುದೇ ರೀತಿಯ ಗೊಬ್ಬರ ಹಾಕುವ ಅವಶ್ಯಕತೆ ಇಲ್ಲ.

ಅಡಿಕೆ ಕೃಷಿಗೆ ಜೀವ ತುಂಬುವ ಜೀವಾಮೃತ ಬಳಕೆ:

ಇನ್ನು ಸಾವಯವ ಕೃಷಿ ಬಗ್ಗೆ ಮಾತನಾಡುವುದಾದರೆ, ತೋಟಕ್ಕೆ ಜೀವಾಮೃತ ಮೊಳಕೆ ಮಾಡುವುದು ಹಾಗೂ ಡಾಕ್ಟರ್ ಸಾಯಿಲ್ ಹಾಗೂ ಡಾಕ್ಟರ್ ಸಾಯಿಲ್ ಜೀವಾಮೃತ ಬಳಕೆ ಮಾಡುವುದರಿಂದ, ಮಣ್ಣಿನಲ್ಲಿ ಎರೆಹುಳುಗಳು ಸಮೃದ್ಧವಾಗಿ ಬೆಳೆಯುತ್ತವೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಉದಾಹರಣೆಗೆ ಎರೆಹುಳುಗಳು ಜಾಸ್ತಿ ಇರುವ ಮಣ್ಣಿನಲ್ಲಿ ಫಸಲು ಚೆನ್ನಾಗಿ ಬೆಳೆಯಲು ಮತ್ತೊಂದು ಮುಖ್ಯ ಕಾರಣ ಅಂದ್ರೆ, ಎಷ್ಟೇ ಮಳೆ ಬಂದರೂ ಭೂಮಿಯ ಒಳಗೆ ನೀರು ಇಂಗುವಂತಹ ಸಾಮರ್ಥ್ಯ ಮಣ್ಣಿನಲ್ಲಿ ಉತ್ಪಾದನೆಯಾಗುತ್ತದೆ. ಇದರಿಂದಾಗಿ ಮಳೆಯ ನೀರು, ಮೇಲಿಂದ ಮೇಲೆ ಹರಿದು ಹೋಗುವುದಿಲ್ಲ ಬದಲಿಗೆ ಮಣ್ಣಿನಲ್ಲಿ ಉಳಿದುಕೊಂಡು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ.

 

Image Source: Krishi Jagran

 

ಕೇವಲ ಡಾಕ್ಟರ್ ಸಾಯಿಲ್ ಪ್ರಾಡಕ್ಟ್ ಬಳಕೆ ಮಾಡುವುದರ ಮೂಲಕ ಸಾವಯವ ಕೃಷಿಯಿಂದ ವಿಶ್ವನಾಥ್ ಎನ್ನುವ ರೈತ ಇಂದು ವರ್ಷಕ್ಕೆ ಕೇವಲ ಅಡಿಕೆ ಕೃಷಿಯಿಂದ ಲಕ್ಷಾಂತರ ರೂಪಾಯಿಗಳನ್ನು ಗಳಿಸಿಕೊಳ್ಳುತ್ತಿದ್ದಾರೆ. ಹತ್ತು ವರ್ಷಗಳಿಂದ ಇಲ್ಲಿಯವರೆಗೆ ನಮ್ಮ ತೋಟದಲ್ಲಿ ಎಂದಿಗೂ ಹಸಿರು ಹೀಗೆ ಇದೆ, ಮಣ್ಣಿನ ಫಲವತ್ತತೆ ಎಲ್ಲಾ ಆಗಲಿ ಅಥವಾ ಇಳುವರಿಯಲ್ಲಾಗಲಿ ಯಾವುದೇ ತೊಂದರೆ ಕಂಡು ಬಂದಿಲ್ಲ. ಸಾವಿರ ಕೃಷಿಯನ್ನು ಪ್ರತಿಯೊಬ್ಬ ರೈತರು ಮಾಡಿಕೊಂಡು ಬಂದರೆ ವರ್ಷದಿಂದ ವರ್ಷಕ್ಕೆ ಡಬ್ಬಲ್ ಇಳುವರಿ ಪಡೆದುಕೊಳ್ಳಬಹುದು ಎನ್ನುವುದು ವಿಶ್ವನಾಥ್ ಎನ್ನುವ ರೈತರ ಸ್ವಂತ ಅನುಭವ ಮತ್ತು ಸಲಹೆ.

ಒಟ್ಟಿನಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಉತ್ತಮ ಫಸಲು ಪಡೆಯುವುದರ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಗಳಿಸಬೇಕು ಎಂದುಕೊಂಡರೆ ಸಾವಯವ ಕೃಷಿಯನ್ನು ನಿಮ್ಮ ಅಡಿಕೆ ಕೃಷಿಯಲ್ಲಿ ಅಳವಡಿಸಿಕೊಳ್ಳುವುದು ಉತ್ತಮ.

 

advertisement

Leave A Reply

Your email address will not be published.