Karnataka Times
Trending Stories, Viral News, Gossips & Everything in Kannada

Widow Pension Scheme: ಮಹಿಳೆಯರಿಗೆ ತಿಂಗಳಿಗೆ 800 ರೂ ಸಿಗುವ ಈ ಯೋಜನೆ ಮತ್ತೆ ಆರಂಭ! ಸಮಯ ಮೀರುವ ಮುನ್ನ ಅರ್ಜಿ ಹಾಕಿ

advertisement

ಮಹಿಳೆಯರು ಇಂದು ಆರ್ಥಿಕವಾಗಿ ಅಭಿವೃದ್ಧಿ ಯಾಗಬೇಕು, ಅವರು ದುಡಿಯುವಂತೆ ಆಗಬೇಕು, ಪುರುಷರಂತೆ ಅವರು ಸಮಾನರು ಎಂದು ರಾಜ್ಯ ಮತ್ತು ಕೇಂದ್ರ ಸರಕಾರ ಹಲವು ರೀತಿಯ ಅಭಿವೃದ್ಧಿ ಧೋರಣೆ ಗಳನ್ನು ಮಹಿಳೆಯರಿಗಾಗಿ ಮೀಸಲಿಟ್ಟಿದೆ. ಉದ್ಯೋಗ ಕ್ಷೇತ್ರದಲ್ಲೂ ಇಂತಿಷ್ಟು ಮಹಿಳೆಯರಿಗೆ ಮೀಸಲು. ಅದೇ ರೀತಿ ಎಲ್ಲ ವಿಭಾಗಗಳಲ್ಲಿಯೂ ಮಹಿಳಾ ಮೀಸಲಾತಿ ಇದೆ. ಹೆಣ್ಣು ಮಕ್ಕಳಿಗೆ, ಮಹಿಳೆಯರಿಗೆ, ವಿಧವೆಯರಿಗೆ, ಹಿರಿಯ ಮಹಿಳೆಯರಿಗೆ ಹೀಗೆ ವಿಭಾಗೀಯವಾಗಿ ಸರಕಾರ ಸೌಲಭ್ಯ ಗಳನ್ನು ನೀಡುತ್ತಿದೆ. ಅದೇ ರೀತಿ ವಿಧವೆ ಮಹಿಳೆಯರಿಗೆ ಸಾಮಾಜಿಕ ಭದ್ರತೆ ನೀಡುವ ನಿಟ್ಟಿನಲ್ಲಿ ವಿಧವಾ ವೇತನ ಯೋಜನೆ (Widow Wage Scheme) ಯನ್ನು ಕೂಡ ಸರಕಾರ ಜಾರಿಗೆ ತಂದಿದೆ. ಈ ಯೋಜನೆಯಡಿ ಪ್ರತಿ ತಿಂಗಳು ವಿಧವೆಯರಿಗೆ ವೇತನ ಕೂಡ ನೀಡಲಾಗುತ್ತಿದೆ.

ಎಷ್ಟು ವೇತನ?

 

Image Source: The Economic Times

 

ವಿಧವಾ ವೇತನ ಯೋಜನೆ (Widow Wage Scheme) ಯು ವಿಧವಾ ಮಹಿಳೆಯರಿಗೆ ಆರ್ಥಿಕ ವಾಗಿ ಬೆಂಬಲ ನೀಡುವ ಯೋಜನೆ ಇದಾಗಿದ್ದು ಇದರ ಅಡಿಯಲ್ಲಿ ವಿಧವೆಯರಿಗೆ ಪ್ರತಿ ತಿಂಗಳು 800 ರೂ ವೇತನ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಬಡತನ ರೇಖೆಗಿಂತ ಕಳೆಗಿರುವ 18 ರಿಂದ 64 ವರ್ಷದೊಳಗಿನ ವಿಧವೆ ಮಹಿಳೆಯರಿಗೆ ಈ ವಿಧವಾ ವೇತನವನ್ನು ನೀಡಲಾಗುತ್ತದೆ.

ನಿಯಮ ವೇನು?

advertisement

  • ವಿಧವೆ ಅಂದರೆ ಪತಿ ಇಲ್ಲದವರಿಗೆ ವಿಧವಾ ವೇತನ ದೊರೆಯುತ್ತದೆ
  • ಈ ಸೌಲಭ್ಯ ಪಡೆಯಲು ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ ರೂ.12,000 ಇರಬೇಕು. ಹಾಗೂ ನಗರ ಪ್ರದೇಶಗಳಲ್ಲಿ ರೂ.17,000 ಕ್ಕಿಂತ ಕಡಿಮೆ ಇದ್ದರೆ ಅರ್ಜಿ ಹಾಕಬಹುದು.
  • ಬೇರೆ ಪಿಂಚಣಿ ಪಡೆಯುತ್ತಿರುವವರು ವಿಧವಾ ವೇತನಕ್ಕೆ ಅರ್ಹರಾಗುವುದಿಲ್ಲ
  • ಅದೇ ರೀತಿ ವಿಧವೆಯಾಗಿ ಮತ್ತೆ ಎರಡನೆ ಮದುವೆಯಾದರೆ ಈ ಯೋಜನೆ ಅನ್ವಯ ಇಲ್ಲ.

ಈ ಯೋಜನೆಗೆ ಅರ್ಜಿ ಹಾಕಲು ಈ ದಾಖಲೆ ಬೇಕು:

  • ಪತಿಯ ಮರಣ ಪ್ರಮಾಣ ಪತ್ರ
  • ವಿಳಾಸ ದೃಢೀಕರಣ ಪತ್ರ
  • ಆದಾಯ ಪ್ರಮಾಣ ಪತ್ರ
  • ವಯಸ್ಸಿನ ದೃಡೀಕರಣ ಪತ್ರ
  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್ ಇತ್ಯಾದಿ

ಅರ್ಜಿ ಸಲ್ಲಿಕೆ ಹೇಗೆ

ಮಹಿಳೆಯ ವ್ಯಾಪ್ತಿಗೆ ಬರುವ ನಾಡ ಕಚೇರಿ, ತಾಲೂಕು ತಹಶೀಲ್ದಾರ್‌ ಕಚೇರಿಗಳಲ್ಲಿ ಅರ್ಜಿ ಪಡೆದು ಆ ಅರ್ಜಿ ಗೆ ಬೇಕಾದ ಮಾಹಿತಿ ಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಇಲ್ಲದಿದ್ದಲ್ಲಿ www.nadakacheri.karnataka.gov.in ಇಲ್ಲಿ ಬೇಕಾದ ದಾಖಲೆ ನಮೂದಿಸಿ ಅರ್ಜಿ ಸಲ್ಲಿಸಬಹುದು.

advertisement

Leave A Reply

Your email address will not be published.