Karnataka Times
Trending Stories, Viral News, Gossips & Everything in Kannada

Ravindra Jadeja: ಧೋನಿ ಎದುರೇ ಪತ್ನಿ ಸಾಕ್ಷಿಯ ಬಗ್ಗೆಯ ವಿಶೇಷ ಜೋಕ್ ಹೇಳಿದ ಜಡೇಜಾ! ನಕ್ಕ ಮಾಹಿ

advertisement

ಚೆನ್ನೈ ಸೂಪರ್ ಕಿಂಗ್ಸ್ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಇತ್ತೀಚೆಗೆ ಎಂಎಸ್ ಧೋನಿ (MS Dhoni) ಕೈ ಹಿಡಿದು ನಡೆಸಿದ ಕೆಲವೇ ಜನರಲ್ಲಿ ತಾವು ಕೂಡ ಒಬ್ಬರು ಎಂಬ ವಿಶಿಷ್ಟತೆಯನ್ನು ಬಹಿರಂಗಪಡಿಸಿದ್ದಾರೆ. ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ನಡುವೆ ಸಿ ಎಸ್ ಕೆ ಫ್ರಾಂಚೈಸ್ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ ಜಡೇಜಾ ಹಾಸ್ಯವಾಗಿ ಈ ಮಾತನ್ನು ಆಡಿದ್ದಾರೆ. ಈ ಸಮಾರಂಭದಲ್ಲಿ ಸಿಎಸ್ ಕೆ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಸಹ ಆಟಗಾರರಾದ ಶಿವಂ ದುಬೆ ಮತ್ತು ಜಡೇಜಾ ಭಾಗವಹಿಸಿದ್ದರು. ಜಡೇಜಾ ಹಾಸ್ಯವಾಗಿ ಧೋನಿ ಅವರ ಕುರಿತು ಏನೆಲ್ಲ ಹೇಳಿದ್ದಾರೆ ನೋಡೋಣ.

ಜಡೇಜಾ (Ravindra Jadeja) ಹೇಳಿದ್ದೇನು?

 

Image Source: NDTV Sports

 

ಸಾಕ್ಷಿ (Sakshi Dhoni) ಅತ್ತಿಗೆ ನಂತರ ಮಹಿ ಕೈ ಹಿಡಿದು ನಡೆಸಿದ್ದು ನನ್ನ ಮಾತ್ರ ಎಂದು ಜಡೇಜಾ ಹಿಂದಿಯಲ್ಲಿ ಸಂದರ್ಶನ ಒಂದರಲ್ಲಿ ನುಡಿದಿದ್ದಾರೆ. ಐಪಿಎಲ್ 2023 ರ ಫೈನಲ್ ಪಂದ್ಯದ ನಂತರದ ಸಂಭ್ರಮಾಚರಣೆಯನ್ನು ಉಲ್ಲೇಖಿಸಿದ ಜಡೇಜಾ (Ravindra Jadeja) ಅವರು CSK ಗೆ ದಾಖಲೆಯ 5 ನೇ ಪ್ರಶಸ್ತಿಯನ್ನು ಎತ್ತಿ ಹಿಡಿಯಲು ಸಹಾಯ ಮಾಡಲು ಪಂದ್ಯ ಕಳೆದ ವರ್ಷ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್ ನಲ್ಲಿ ಜಡೇಜಾ 6 ಎಸೆತಗಳಲ್ಲಿ ಔಟಾಗದೆ 15 ಹೊಡೆದು ಸಿಎಸ್ ಕೆ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಿತು.

advertisement

ಧೋನಿ ಜಡೇಜಾಗೆ ಕೈ ಹಿಡಿದು ಎತ್ತಿದ್ದೇಕೆ ?

 

Image Source: Cricket Addictor

 

ಸಾಮಾನ್ಯವಾಗಿ ಹೆಚ್ಚಾಗಿ ಯಾರೊಂದಿಗೆ ಬೆರೆಯದ ಸ್ವಭಾವತಃ ಶಾಂತ ರೀತಿಯಲ್ಲಿ ಕಾಣುವ ಧೋನಿ ಕೂಡ ಅಂದು ಮ್ಯಾಚ್ ದಿನ ತನ್ನನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಮತ್ತು ಪಂದ್ಯದ ನಂತರ ಸಂತೋಷದಿಂದ ಜಡೇಜಾ (Ravindra Jadeja) ಅವರನ್ನು ಎತ್ತಿದರು ಮತ್ತು ಕ್ಷಣವನ್ನು ಮೈದಾನದ ಸುತ್ತಲೂ ಟಿವಿ ಕ್ಯಾಮೆರಾಗಳು ಸೆರೆಹಿಡಿಯಲಾಯಿತು. ಈ ಗೆಲುವಿನೊಂದಿಗೆ ನಾಯಕನಾಗಿ ಅತಿ ಹೆಚ್ಚು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ರೋಹಿತ್ ಶರ್ಮಾ (Rohit Sharma) ಅವರ ದಾಖಲೆಯನ್ನು ಧೋನಿ ಸರಿಗಟ್ಟಿದರು. ಅಲ್ಲಿಂದ ಜಡೇಜಾ ಆಟದಲ್ಲಿ ತಪ್ಪನ್ನು ತಿದ್ದಿ ಕೈ ಹಿಡಿದು ನಡೆಸುತ್ತಿದ್ದಾರೆ ಮಹೇಂದ್ರ ಸಿಂಗ್ ಧೋನಿ.

 

advertisement

Leave A Reply

Your email address will not be published.