Karnataka Times
Trending Stories, Viral News, Gossips & Everything in Kannada

KSRTC: 18 ರಿಂದ 35 ವರ್ಷದ ಒಳಗಿನವರಿಗೆ KSRTC ಭರ್ಜರಿ ಸಿಹಿಸುದ್ದಿ!

advertisement

ಇಂದು ಪ್ರತಿಯೊಂದು ವ್ಯಕ್ತಿಗೂ ಸರಳವಾದ ಜೀವನ ನಡೆಸುದಾದ್ರೂ ಕೂಡ ಉದ್ಯೋಗ ಅನ್ನೋದು ಬಹಳ ಮುಖ್ಯವಾಗುತ್ತದೆ.ಹಾಗಾಗಿ ಪ್ರತಿಯೊಬ್ಬರು ತಾವು ಆಯ್ದು ಕೊಳ್ಳುವ ಉದ್ಯೋಗ ಸೆಕ್ಯುರ್ಡ್ ಆಗಿ ಇರಬೇಕೇಂದು ಮೊದಲೇ ಯೋಚಿಸುತ್ತಾರೆ. ಅದರಲ್ಲೂ ಇಂದು ಸರಕಾರಿ ಕೆಲಸ ಪಡೆಯಬೇಕು‌‌ ಎನ್ನುವ ಹಂಬಲ ಹೆಚ್ಚಿನ ಜನರಿಗೆ ಇರಲಿದ್ದು ಇದೀಗ KSRTC ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಆರಂಭ ವಾಗಿದ್ದು ನೀವು ಅರ್ಜಿ ಹಾಕಬಹುದಾಗಿದೆ.

ಚಾಲಕರ ಹುದ್ದೆಗೆ ನೇಮಕಾತಿ:

 

Image Source: The Hindu

 

ಕೆ ಎಸ್ ಆರ್ ಟಿ ಸಿ (KSRTC) ಖಾಸಗಿ ಏಜೆನ್ಸಿಯಲ್ಲಿ ಚಾಲಕರ ಹುದ್ದೆಗಳು ಖಾಲಿ ಇರಲಿದ್ದು ಹದಿನೈದು ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನೇಮಕಾತಿ ಮಾಡಲಾಗುತ್ತದೆ, ಹಾಗೆಯೇ ಇತರ ಸಿಬ್ಬಂದಿಗಳ ಕೊರತೆ ಕೂಡ ಇರುವುದರಿಂದ ಅದಕ್ಕೂ ಕೂಡ ನೇಮಕಾತಿ ಮಾಡಲಾಗುತ್ತದೆ.

advertisement

ಅರ್ಹತೆ ಏನು?

  • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಡಳಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಶಿಕ್ಷಣ ‌ ಅರ್ಹತೆಯು 10ನೇ ತರಗತಿ ಪಾಸ್ ಆಗಿರುವುದು ಕಡ್ಡಾಯ ಆಗಿದೆ
  • ಕನ್ನಡ ಬರೆಯಲು ಮತ್ತು ಓದಲು ಬರಬೇಕಾಗಿರುತ್ತದೆ.
  • ಕನಿಷ್ಠ 18 ವರ್ಷ ತುಂಬಿರಬೇಕು, ವ್ಯಕ್ತಿಯ ಗರಿಷ್ಠ ವಯೋಮಿತಿಯು 35 ವರ್ಷ ಆಗಿದೆ
  • ಅದೇ ರೀತಿ ಚಾಲ್ತಿಯಲ್ಲಿರುವ ಸರಕು ಸಾಗಾಣಿಕೆ ವಾಹನ (HTV) ಚಾಲನಾ ಪರವಾನಿಗೆ ಹೊಂದಿ ಕನಿಷ್ಠ 2 ವರ್ಷಗಳಾಗಿರಬೇಕು.

ಆಯ್ಕೆ ಹೇಗೆ?

ಇಲ್ಲಿ ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿ ಡ್ರೈವಿಂಗ್ ಪರೀಕ್ಷೆಗಳು ಮತ್ತು ತರಬೇತಿಯ ಮೂಲಕ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ‌‌.ಅದೇ ರೀತಿ ಎರಡು ತಿಂಗಳ ಸಮಯದವರೆಗೆ ತರಬೇತಿಯನ್ನ ಕೂಡ ನಿಮಗೆ ನೀಡಲಾಗುತ್ತದೆ. ಇಲ್ಲಿ ಮೂಲ ದಾಖಲಾತಿಗಳ ಪರಿಶೀಲನೆ, ದೈಹಿಕ ಅರ್ಹತೆಯ ಪರಿಶೀಲನೆ, ಡ್ರೈವಿಂಗ್ ‌ಕೌಶಲ್ಯ ನೋಡಿ ಆಯ್ಕೆ ಮಾಡಲಾಗುತ್ತದೆ.ಆಯ್ಕೆ ಆದ ಸಿಬ್ಬಂದಿ ಗೆ ಪ್ರತಿ ತಿಂಗಳಿಗೆ 20,000 ಅಂತೆಯೇ ಸಂಬಳ ನೀಡಲಾಗುತ್ತದೆ.

ಈ ಬಗ್ಗೆ ತಿಳಿಯಲು ನಿಗಮದ ಅಧಿಕೃತ ವೆಬ್‌ಸೈಟ್‌ ksrtc.karnataka.gov.in ಇಲ್ಲಿ ಅರ್ಜಿ ಡೌನ್‌ಲೋಡ್‌ ಮಾಡಿಕೊಂಡು ಎಲ್ಲಾ ಮೂಲ ದಾಖಲಾತಿಗಳನ್ನು ಸಲ್ಲಿಕೆ ಮಾಡುವ ಮೂಲಕ ಅರ್ಜಿ ಹಾಕಬಹುದು.

advertisement

Leave A Reply

Your email address will not be published.