Karnataka Times
Trending Stories, Viral News, Gossips & Everything in Kannada

High Court: ರಾಜ್ಯದಲ್ಲಿ ಜಾರಿಯಲ್ಲಿರುವ 5 ಗ್ಯಾರಂಟಿಗಳ ಬಗ್ಗೆ ಹೈ ಕೋರ್ಟ್ ಹೊಸ ಸುತ್ತೋಲೆ! ಇಲ್ಲಿದೆ ಟ್ವಿಸ್ಟ್

advertisement

ಚುನಾವಣೆ ನಡೆಯುವ ಮುನ್ನ ಪ್ರತಿ ಪಕ್ಷಗಳು ತಮ್ಮ ಮುಂದಿನ ಯೋಜನೆ ಬಗ್ಗೆ ಜನರಿಗೆ ತಿಳಿಸಿ ಜನರ ಮತ ಓಲೈಕೆ ಮಾಡಲು ಪ್ರಯತ್ನ ಮಾಡಲಾಗುತ್ತಲೇ ಇರುತ್ತದೆ ಅದೇ ರೀತಿ ಕಳೆದ ವಿಧಾನ ಸಭೆಯ ಅವಧಿಯಲ್ಲಿ ಕರ್ನಾಟಕದಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷವು ಪಂಚ ಗ್ಯಾರೆಂಟಿ ಯೋಜನೆ ಬಗ್ಗೆ ಜನರಿಗೆ ತಿಳಿಸಿ ಅವೆಲ್ಲ ವಾಸ್ತವಿಕವಾಗಿ ಸಾಧ್ಯವೇ ಎಂಬುದು ಅನುಮಾನವಾಗಿತ್ತು. ಆದರೆ ನುಡಿದಂತೆ ಕಾಂಗ್ರೆಸ್ ಸರಕಾರ ನಡೆಯುತಲಿದೆ. ಸದ್ಯ ಇದೆ ಪಂಚಗ್ಯಾರೆಂಟಿ ಅಂಶಗಳು ಕೋರ್ಟ್ (High Court) ಮೆಟ್ಟಿಲೇರಿದ್ದು ಹೈಕೋರ್ಟ್ ಈ ಬಗ್ಗೆ ಸ್ಪಷ್ಟನೆ ನೀಡಿದೆ.

ಪಂಚಗ್ಯಾರೆಂಟಿ:

 

Image Source: Zee News

 

ಕಳೆದ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ಉಚಿತ ಸರಕಾರಿ ಬಸ್ ಪ್ರಯಾಣ ನೀಡುವ ಶಕ್ತಿ ಯೋಜನೆ, ಉಚಿತ ವಿದ್ಯುತ್ ಪೂರೈಕೆ ಮಾಡುವ ಗೃಹಜ್ಯೋತಿ (Gruha Jyothi), ಮಹಿಳೆಯರಿಗೆ ಗೃಹಲಕ್ಷ್ಮೀ (Gruha Lakshmi), ಅನ್ನ ಭಾಗ್ಯ ಯೋಜನೆ (Anna Bhagya Yojana) ಅಡಿಯಲ್ಲಿ 10 kg ಅಕ್ಕಿ ಎಂದು ಹೇಳಿ ಬಳಿಕ ಅಕ್ಕಿ ಅಲಭ್ಯ ಹಿನ್ನೆಲೆಯಲ್ಲಿ ಅಕ್ಕಿ ಬದಲಿಗೆ ಹಣ ನೀಡುವ ಹಾಗೂ ನಿರುದ್ಯೋಗ ಯುವಕ ಯುವತಿಯರಿಗೆ ಯುವ ನಿಧಿ ಯೋಜನೆ (Yuva Nidhi Yojana) ಪರಿಚಯಿಸಿದ್ದು ಈಗ ಎಲ್ಲವೂ ಚಾಲ್ತಿಯಲ್ಲಿ ಇದೆ.

ಹೈಕೋರ್ಟ್ ಗೆ ಅರ್ಜಿ:

advertisement

ಕಾಂಗ್ರೆಸ್ ರಾಜಕಾರಣಿ ಜಮೀರ್ ಅಹಮ್ಮದ್ ಅವರ ಆಯ್ಕೆಯನ್ನು ಪ್ರಶ್ನಿಸಿ ಸ್ಥಳೀಯ ಮತದಾರರಾದ ಶಶಾಂಕ್ ಜೆ. ಶ್ರೀಧರ್ ಎಂಬುವವರು ಚುನಾವಣೆ ಆಯ್ಕೆ ಪ್ರಶ್ನೆ ಮಾಡಿ ಅದರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು ಕಾಂಗ್ರೆಸ್ ಪ್ರಣಾಳಿಕೆಯೂ ಭ್ರಷ್ಟಾಚಾರಕ್ಕೆ ಸಮವಾಗಿದ್ದು ಅವುಗಳನ್ನು ನಿರಂತರವಾಗಿ ನೀಡುವುದು ದೇಶದ ಆರ್ಥಿಕತೆಗೆ ಹೊಡೆತವಾಗಲಿದೆ ಹಾಗಾಗಿ ಪ್ರಣಾಳಿಕೆಯಿಂದ ಪಕ್ಷ ಗೆಲುವು ಸಾಧಿಸುವ ಜಮೀರ್ ಅಹಮ್ಮದ್ ಆಯ್ಕೆ ಸಮಂಜಸವೇ ಎಂದು ಅವರು ಉಲ್ಲೇಖಿಸಿದ್ದಾರೆ.

ಹೈಕೋರ್ಟ್ ಸ್ಪಷ್ಟನೆ:

 

Image Source: IndiaToday

 

ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ಐ. ಅರುಣ್ ಅವರ ಏಕಸದಸ್ಯ ಪೀಠವು ತನ್ನ ಸ್ಪಷ್ಟ ನಿಲುವು ತಿಳಿಸಿದೆ. ಪ್ರತಿ ಪಕ್ಷದ ಪ್ರಣಾಳಿಕೆಯ ಮುಖ್ಯ ಉದ್ದೇಶ ಸಮಾಜ ಕಲ್ಯಾಣವಾಗಿದೆ. ಆರ್ಥಿಕವಾಗಿ ಅದು ಹೊರೆ ಆಗುತ್ತಾ ಇಲ್ಲವೇ ಎನ್ನುವುದು ನಂತರದ ವಿಚಾರ, ಇದು ದುರಾಡಳಿತ ಅಥವಾ ರಾಜ್ಯದಬೊಕ್ಕಸ ಹೇಗೆ ಬರಿದಾಗುತ್ತೆ ಅಥವಾ ಇಲ್ಲ ಎಂಬುದು ಆಯಾ ಪಕ್ಷದವರ ನಿಲುವಿಗೆ ಬಿಟ್ಟ ವಿಚಾರ. ಇದು ದುರಾಡಳಿತವಾಗುತ್ತೆ ಎನ್ನುವುದಾದರೆ ಅದನ್ನು ಹೇಗೆ ಎಂಬುದನ್ನು ಇತರ ಪಕ್ಷಗಳು ಸ್ಪಷ್ಟವಾಗಿ ತೋರಿಸಿಕೊಡಬೇಕು ಎಂದಿದೆ.

ಅಭ್ಯರ್ಥಿಯು ತನ್ನ ಪಕ್ಷ ಅಧಿಕಾರಕ್ಕೆ ಬಂದರೆ ಮುಂದೆ ಏನೆಲ್ಲ ಕೆಲಸ ಮಾಡುತ್ತೇನೆ ಎಂದು ಜನರಿಗೆ ತಿಳಿಸುವ ಪ್ರಣಾಳಿಕೆ ಭ್ರಷ್ಟಾಚಾರ ಆಗಲಾರದು. ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123ರ ಅಡಿಯಲ್ಲಿ ಈ ಘೋಷಣೆ ಭ್ರಷ್ಟಾಚಾರ ಕೃತ್ಯವಲ್ಲ. ಹಾಗಾಗಿ ಜಮೀರ್ ಅಹಮ್ಮದ್ ಆಯ್ಕೆ ಪ್ರಶ್ನಿಸುವ ಅಗತ್ಯ ಇಲ್ಲ ಎಂದು ತಿಳಿಸಿ ಆ ಮೂಲಕ ಶಶಾಂಕ್ ಜೆ. ಶ್ರೀಧರ್ ಅವರ ಅರ್ಜಿ ವಜಾಗೊಳಿಸಲಾಗಿದೆ.

advertisement

Leave A Reply

Your email address will not be published.