Karnataka Times
Trending Stories, Viral News, Gossips & Everything in Kannada

High Court: ಇಂತಹವರ ಮನೆ ಬಾಗಿಲಿಗೆ ಬರಲಿದೆ ನೋಟಿಸ್! ಹೈಕೋರ್ಟ್ ನಿಂದ ಸೂಚನೆ

advertisement

ಇತ್ತೀಚಿನ ದಿನದಲ್ಲಿ ಪ್ರತಿಯೊಂದು ದಾಖಲಾತಿಗಳು ನಕಲಿ ಮಾಡುವ ಪ್ರಮಾಣ ಅಧಿಕವಾಗಿದೆ. ಆಧಾರ್ ಕಾರ್ಡ್ (Aadhaar Card) , ಅಂಕಪಟ್ಟಿ, ಜಾತಿ ಆದಾಯ ಪ್ರಮಾಣ ಪತ್ರ (Income & Cast Certificate), ಜನನ ಪ್ರಮಾಣ ಪತ್ರ ಹೀಗೆ ಸರಕಾರಿ ಹಾಗೂ ಖಾಸಗಿ ಎರಡು ಮಾಹಿತಿ ಕೂಡ ನಕಲಿ ನೀಡಲಾಗುತ್ತಿದೆ. ನಕಲಿ ಜಾತಿ ಪ್ರಮಾಣ ಪತ್ರ ಬಳಕೆ ಮಾಡುವವರಿಗೆ ರಾಜ್ಯ ಸರಕಾರದಿಂದ ಇದೀಗ ಮಹತ್ವದ ಆದೇಶ ಒಂದು ತಿಳಿದು ಬಂದಿದೆ.

ಇತ್ತೀಚಿನ ದಿನಗಳಲ್ಲಿ ಕೆಲವೊಂದು ಜಾತಿಗಾಗಿ ಮೀಸಲಾಗಿರುವ ಜಾತಿ ಪ್ರಮಾಣ ಪತ್ರವನ್ನು ಮೋಸ ಮಾಡಿ ಅಕ್ರಮವಾಗಿ ಬೇರೆ ಪಂಗಡದವರು ಬಳಕೆ ಮಾಡುತ್ತಿರುವುದು ತಿಳಿದು ಬಂದಿದೆ. ಇತ್ತೀಚೆಗೆ ಒಂದು ಪ್ರಕರಣದ ಮೂಲಕ ಜಾತಿ ಪ್ರಮಾಣ ಪತ್ರದ ನಕಲಿ ಜಾಲದ ಬಗ್ಗೆ ಹೈಕೋರ್ಟ್ (High Court) ಗೆ ಮಾಹಿತಿ ದೊರೆತಿದ್ದು, ಹೈ ಕೋರ್ಟ್ ಮೂಲಕ ರಾಜ್ಯ ಸರಕಾರಕ್ಕೆ ನಕಲಿ ಜಾತಿ ಪ್ರಮಾಣ ಪತ್ರ ಪಡೆದವರಿಗೆ ನೋಟಿಸ್ ನೀಡಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.

ಯಾವುದು ಈ ಪ್ರಕರಣ

ಸಹಕಾರಿ ಬ್ಯಾಂಕಿನ ವೇತನ ಕಡಿತ ನೀತಿ ಬಗ್ಗೆ ಹೈಕೋರ್ಟ್ ನಲ್ಲಿ ಚರ್ಚೆ ನಡೆದಿದ್ದು ಅದರ ತನಿಖೆ ಮಾಡುವಾಗಲೇ ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ಮಾಡುವುದು ತಿಳಿದು ಬಂದಿದೆ. ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸಂಬಂಧಿಸಿದಂತೆ ನಾಯಕ ಜನಾಂಗದ ಪರಿವಾರ ಮತ್ತು ತಳವಾರ ಉಪಪಂಗಡದವರಿಗೆ ಮಾತ್ರ ST ವರ್ಗಕ್ಕೆ ಸೇರಿಸಲಾಗಿದೆ. ಅವರಿಗೆ ನಕಲಿ ಪರಿಶಿಷ್ಟ ವರ್ಗದ ನಕಲಿ ಜಾತಿ ಪ್ರಮಾಣ ಪತ್ರ ವಿತರಿಸಲಾಗುತ್ತಿರುವುದು ತಿಳಿದು ಬಂದಿದೆ. ಹಾಗಾಗಿ ಸಾರ್ವಜನಿಕ ಹಿತಾಸಕ್ತಿ ಆಧಾರದ ಮೇಲೆ ಈ ವಿಚಾರ ತನಿಖೆ ಮಾಡಲಾಗುತ್ತಿದೆ.

advertisement

Image Source: Bangalore Mirror

High Court ಮಾರ್ಗದರ್ಶನ:

ನಕಲಿ ಜಾತಿ ಪ್ರಮಾಣಪತ್ರವನ್ನು ಅನರ್ಹರಿಗೆ ನೀಡಿರುವುದು ತಿಳಿದು ಬಂದಿದೆ. ಹಾಗಾಗಿ ಹೈಕೋರ್ಟ್ (High Court) ನಿಂದ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಬೇಕು. ಮಾರ್ಚ್ 27ರ ಒಳಗಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಲಾಗಿದೆ. ಪ್ರಕರಣ ಇನ್ನೂ ಕೂಡ ಕೋರ್ಟ್ ನಲ್ಲೇ ಇದ್ದು ಮುಂದಿನ ಆದೇಶದ ವರೆಗೆ ಕಾಯಬೇಕಿದೆ. ಸರಕಾರಕ್ಕೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿಕೆ ವಿರುದ್ಧ ಕ್ರಮ ಜರಗಿಸಬೇಕು ಎಂದು ಸೂಕ್ತ ಮಾರ್ಗದರ್ಶನದ ಸೂಚನೆಯನ್ನು ಹೈಕೋರ್ಟ್ ನೀಡಿದೆ.

ಮಹತ್ವದ ಆದೇಶ

ರಾಜ್ಯದ SC, ST ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ಮಾಡುತ್ತಿದೆ. ಹೈ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ ಎನ್. ವಿ. ಅಂಜಾರಿಯಾ ಹಾಗೂ ಕೃಷ್ಣ ಎಸ್. ದೀಕ್ಷಿತ್ ಅವರ ವಿಭಾಗೀಯ ಪೀಠ ವಿಚಾರಣೆ ಮಾಡುತ್ತಿದೆ. ನಕಲಿ ಪ್ರಮಾಣ ಪತ್ರ ಪಡೆದವರ ವಿರುದ್ದ ಸರಕಾರ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಹೈಕೋರ್ಟ್ ನಿಂದ ನಿರ್ದೇಶನ ನೀಡಲಾಗಿದೆ. ಹಾಗಾಗಿ ಸರಕಾರ ಈ ಬಗ್ಗೆ ಮಹತ್ವದ ಆದೇಶ ಹೊರಡಿಸಲಿದೆ.

advertisement

Leave A Reply

Your email address will not be published.