Karnataka Times
Trending Stories, Viral News, Gossips & Everything in Kannada

High Court: ನಿಮ್ಮ ವಿರುದ್ಧ ತೀರ್ಪು ಬಂದರೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಇರುವ ಕಾಲಾವಕಾಶ ಎಷ್ಟು ಗೊತ್ತಾ? ಹೊಸ ರೂಲ್ಸ್

advertisement

ಇತ್ತೀಚಿನ ದಿನದಲ್ಲಿ ಸಣ್ಣ ಪುಟ್ಟ ಕಾರಣಕ್ಕೂ ಕೋರ್ಟ್ ಮೆಟ್ಟಿಲು ಏರುತ್ತಿದ್ದೇವೆ. ಕೌಟುಂಬಿಕ ಸಮಸ್ಯೆ, ಆಸ್ತಿ ಸಮಸ್ಯೆ, ವೈಯಕ್ತಿಕ ಸಮಸ್ಯೆ ಹೀಗೆ ಅನೇಕ ಕಾರಣದಿಂದ ಕೋರ್ಟಿನ ಮೊರೆ ಹೊಗಲಾಗುತ್ತಿದೆ. ಕೋರ್ಟಿನಲ್ಲಿ ಕೂಡ ಅನೇಕ ಸಂಗತಿಗಳು ಪೂರ್ತಿ ಹಂತದ ತೀರ್ಮಾನ ಸಿಗಲಾರದು. ಹಾಗಾಗಿ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಅಲ್ಲಿಯೂ ನ್ಯಾಯ ತೀರ್ಮಾನ ಆಗದಿದ್ದರೆ ರಾಜ್ಯ ಮಟ್ಟದಲ್ಲಿ ಹೈಕೋರ್ಟ್ (High Court) ಗೆ ಅಲೆಯಬೇಕಾಗುತ್ತದೆ.

ಸ್ವರೂಪ ಹೇಗೆ?

ಆಸ್ತಿ, ಕೌಟುಂಬಿಕ, ವ್ಯಾಜ್ಯ ಇನ್ನಿತರ ಸಮಸ್ಯೆಗಳಿಗೆ ಮೊದಲು ಲಾಯರ್ ಮೂಲಕ ಕೇಸ್ ದಾಖಲು ಮಾಡಲಾಗುತ್ತದೆ. ಆ ಬಳಿಕ ಅದನ್ನು ತಾಲೂಕು ಮಟ್ಟದಲ್ಲಿ  ಬಗೆಹರಿಸಲು ತಾಲೂಕು ಕೋರ್ಟ್ ಗಳು ಇರಲಿವೆ. ಅಲ್ಲಿ ಸಮಸ್ಯೆ ಬಗೆಹರಿಯದೆ ಇದ್ದರೆ ಇದಕ್ಕೆ ಮಿಗಿಲಾಗಿ ಜಿಲ್ಲಾ ಕೋರ್ಟ್ ಇರಲಿದೆ ಅಲ್ಲಿ ಕೇಸನ್ನು ಪರಿಶೀಲಿಸಿ ತೀರ್ಪು ನೀಡಲಾಗುತ್ತದೆ. ಆ ತೀರ್ಪು ಅಥವಾ ನ್ಯಾಯ ವ್ಯವಸ್ಥೆ ತೃಪ್ತಿ ಕಾಣದಿದ್ದರೆ ರಾಜ್ಯ ಮಟ್ಟದಲ್ಲಿ ಹೈಕೋರ್ಟ್ ಗೆ ಹೋಗಬೇಕು. ಅಲ್ಲಿಯೂ ಸೇವೆ ಸಿಗದಿದ್ದರೆ ಸುಪ್ರೀಂ ಕೋರ್ಟ್ (Supreme Court)ಮೊರೆ ಹೊಗುತ್ತಾರೆ. ಹೈಕೋರ್ಟ್ ಗೆ ಎಷ್ಟು ದಿನದ ಒಳಗೆ ಅಪೀಲ್ (Appeal) ಹಾಕಬೇಕು ಎಂಬ ಇತರ ಮಾಹಿತಿ ಇಲ್ಲಿದೆ.

Image Source: Bangalore Mirror

ಕರ್ನಾಟಕದಲ್ಲಿ ಎಲ್ಲಿ ಇದೆ

advertisement

ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯವು ಮೂರು ಸ್ಥಳದಲ್ಲಿ ಇದೆ. ಕಲಬುರ್ಗಿ, ಧಾರವಾಡ ಹಾಗೂ ಬೆಂಗಳೂರಿನಲ್ಲಿ ಇದೆ. ನೀವು ಕೋರ್ಟಿನ ತೀರ್ಪನ್ನು ಮೇಲ್ಮನವಿ ಸಲ್ಲಿಸಲು ಇಂತಿಷ್ಟು ದಿನದವರೆಗೆ ಸಮಯ ಇರಲಿದೆ. 90ದಿನಗಳ ವರೆಗೆ ಸಮಯಾವಕಾಶ ಇರಲಿದ್ದು, ಅಷ್ಟರ ಒಳಗೆ ನೀವು ಅಪೀಲ್ ಹಾಕಬೇಕು ಆಗ ಹೈಕೋರ್ಟ್ ನಲ್ಲಿ ಈ ಬಗ್ಗೆ ವಿಚಾರಣೆ ನಡೆಯಲಿದೆ.

High Court ಅವಧಿ ಮೀರಿದರೆ ಏನಾಗುತ್ತೆ?

90ದಿನಗಳ ಒಳಗೆ ನೀವು ಮೇಲ್ಮನವಿ ಸಲ್ಲಿಸದಿದ್ದರೆ ಆಗ ನೀವು ಮೇಲ್ಮನವಿ ಸಲ್ಲಿಸಬಹುದೆ ಎಂಬ ಅನುಮಾನ ನಿಮ್ಮಲ್ಲೂ ಇರಬಹುದು. ಆಗ ಡಿಸ್ಕರ್ಶನ್ ಪವರ್ ಆಫ್ ಕೋರ್ಟ್ ಅಡಿಯಲ್ಲಿ ನಿಯಮ ಬರಲಿದೆ. ಅಂದರೆ ಈ ನಿಯಮ ಕೋರ್ಟ್ ತೆಗೆದುಕೊಳ್ಳಬಹುದು ಅಥವಾ ತೆಗೆದುಕೊಳ್ಳದಿರಬಹುದು. ಅದಕ್ಕೆ ಲಿಮಿಟೇಶನ್ ಆ್ಯಕ್ಟ್ ಅಪ್ಲೈ ಆಗಲಿದೆ. ಒಂದು ವೇಳೆ 90 ದಿನದ ಸಮಯ ಮೀರಿದರೆ ಆಗ ನಿಮಗೆ ಕೋರ್ಟ್ ಅಪೀಲ್ ಹಾಕಲು ಅವಕಾಶ ಇರಲಾರದು.

Image Source: iPleaders

ಕೋರ್ಟ್ ಗೆ ಕೂಡ ನಿರ್ದಿಷ್ಟ ನಿಯಮಗಳು ಇರಲಿವೆ. ಬೇಕಾ ಬಿಟ್ಟಿಯಾಗಿ ಕೋರ್ಟ್ ನಲ್ಲಿ ಅಪೀಲ್ ಸಲ್ಲಿಸುವಂತಿಲ್ಲ. ಸಮಸ್ಯೆ ಎಂದು ಸಣ್ಣ ಪುಟ್ಟ ಕಾರಣಕ್ಕೆ ಅಪೀಲ್ ಹಾಕಿದರೆ ಕೋರ್ಟ್ ಸಮಯ ವ್ಯರ್ಥ ಮಾಡಿದೆ ಎಂಬ ಕಾರಣಕ್ಕೆ ಕೂಡ ದಂಡ ವಿಧಿಸುವ ಸಾಧ್ಯತೆ ಇದೆ. ಹಾಗಾಗಿ ನೀವು ಕೋರ್ಟ್ ಮೊರೆ ಹೋಗುವ ಮುನ್ನ ಕಾನೂನು ನಿಯಮ ಪರಿಶೀಲನೆ ಮಾಡುವುದು ಅತ್ಯಗತ್ಯ.

advertisement

Leave A Reply

Your email address will not be published.