Karnataka Times
Trending Stories, Viral News, Gossips & Everything in Kannada

LIC: ಮಗಳ ಮದುವೆಯ ಚಿಂತೆಯಲ್ಲಿರುವ ಅನೇಕರಿಗೆ ಸಿಹಿಸುದ್ದಿ ಕೊಟ್ಟ LIC!

advertisement

ಇಂದು ಹೂಡಿಕೆ ಅನ್ನೋದು ಬಹಳ ಮುಖ್ಯ. ಇಂದು ಎಷ್ಟೆ ಕಷ್ಟ ಇದ್ದರೂ ಮುಂದಿನ ದಿನ ಹೇಗೆ, ಕಷ್ಟ ಕಾಲಕ್ಕೆ ಹಣ ಬೇಕು ಇತ್ಯಾದಿ ಎಲ್ಲವನ್ನೂ ಭವಿಷ್ಯದ ಬಗ್ಗೆ ಜನರು ಯೋಚನೆ ಮಾಡುತ್ತಾರೆ. ಹಾಗಾಗಿ ಹೂಡಿಕೆ ಅಂತ ಬಂದಾಗ ಹೆಚ್ಚಿನ ಜನರು ದುಡಿದ ಸ್ವಲ್ಪಮಟ್ಟಿನ ಹಣವಾದರೂ ಸೇವಿಂಗ್ ಮಾಡೇ ಮಾಡುತ್ತಾರೆ. ಇಂದು ಹಣವನ್ನು ಉಳಿಸಲು ‌ಕೂಡ ಹಲವು ರೀತಿಯ ಅವಕಾಶ ಇದೆ. ಬ್ಯಾಂಕ್ (Bank), ಪೋಸ್ಟ್‌ ಆಫೀಸ್‌ (Post Ofice), ಎಲ್ ಐಸಿ ಸ್ಕೀಮ್ (LIC Scheme), ಹಲವು ಸಂಘ ಸಂಸ್ಥೆಗಳು ಕೂಡ ಇವೆ. ಆದರೆ ನಮ್ಮ ಹಣ ಹೂಡಿಕೆಗೆ ಸುರಕ್ಷತೆ ಯಾವ ಸಂಸ್ಥೆ ನೀಡುತ್ತದೆ ಎಂಬುದನ್ನು ನಾವು ಯೋಚಿಸಿ ಹಣ ಹೂಡಿಕೆ ಮಾಡುತ್ತೇವೆ.

ಎಲ್ ಐ ಸಿ (LIC)ಯ ಹೂಡಿಕೆ

ಇಂದು ಹೂಡಿಕೆ ಮಾಡಲು ಎಲ್ಐಸಿ ಪಿಂಚಣಿ, ಜೀವ ವಿಮಾ ಪಾಲಿಸಿ ಸೇರಿದಂತೆ ಹಲವು ಅವಕಾಶಗಳನ್ನು ನೀಡಿದೆ. ಅದೇ ರೀತಿ ಎಲ್ ಐ ಸಿ (LIC) ಯು ಹೆಣ್ಣು ಮಕ್ಕಳ ಭವಿಷ್ಯದ ಅಭಿವೃದ್ದಿಯ ದೃಷ್ಟಿಯಿಂದ ಹೊಸ ಯೋಜನೆಯನ್ನು ಆರಂಭ ಮಾಡಿದೆ. ಅದುವೇ ಎಲ್ಐಸಿಯ ಕನ್ಯಾದಾನ ಪಾಲಿಸಿ (LIC Kanyadan Policy) ಯೋಜನೆಯಾಗಿದೆ.ಇಲ್ಲಿ ಕೂಡಿಟ್ಟ ಹಣದ ಮೂಲಕ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಮದುವೆಯ ವೆಚ್ಚಗಳಿಗಾಗಿ ಖರ್ಚು ಮಾಡಬಹುದಾಗಿದೆ.

Image Source: Tnea Online

LIC Kanyadan Policy ಪ್ರಯೋಜನ ಏನು?

advertisement

ಈ ಯೋಜನೆಯಲ್ಲಿ ತಿಂಗಳಿಗೆ, ಮೂರು ತಿಂಗಳಿಗೆ, ಆರು ತಿಂಗಳಿಗೆ ಅಥವಾ ವರ್ಷಕ್ಕೆ ಒಮ್ಮೆ ಪ್ರೀಮಿಯಮ್ ಕಟ್ಟುವ ಅವಕಾಶ ನಿಮಗೆ ಇರಲಿದೆ. ಎಲ್ಐಸಿ ಕನ್ಯಾದಾನ ಪಾಲಿಸಿ (LIC Kanyadan Policy)ಯ ಅವಧಿ 25 ವರ್ಷ ಅವಧಿ ಇದ್ದು, ಈ ಪಾಲಿಸಿಯ ಯಾವುದೇ ಮೊತ್ತಕ್ಕೂ ತೆರಿಗೆ ಇರುವುದಿಲ್ಲ. ಒಂದು ವೇಳೆ ಪಾಲಿಸಿಯ ಫಲಾನುಭವಿ ಅಪಘಾತದಲ್ಲಿ ಮೃತಪಟ್ಟಲ್ಲಿ ಕುಟುಂಬ ಸದಸ್ಯರಿಗೆ 10 ಲಕ್ಷ ರೂ ಪರಿಹಾರ ಕೂಡ ದೊರೆಯಲಿದೆ.

151 ಮೊತ್ತ ಹೂಡಿಕೆ ಮಾಡಿ 31 ಲಕ್ಷ ರೂಪಾಯಿ ಪಡೆಯಿರಿ

ನೀವು ಕನ್ಯಾದಾನ ಪಾಲಿಸಿಯಲ್ಲಿ ದಿನಕ್ಕೆ ಕೇವಲ ರೂ.151 ಉಳಿಸಿದ್ರೆ ಸಾಕು. ತಿಂಗಳಿಗೆ ರೂ. 4530 ಆಗುತ್ತದೆ. 25 ವರ್ಷ ಪೂರೈಸಿದ ನಂತರ ರೂ. 31 ಲಕ್ಷ. ಮೊತ್ತವನ್ನು ನೀವು ಪಡೆಯಬಹುದು. ಅದೇ ರೀತಿ ದಿನಕ್ಕೆ 121 ರೂ. ಠೇವಣಿ ಇಟ್ಟರೆ 27 ಲಕ್ಷ ಮೊತ್ತ ಪಡೆಯಬಹುದು.

Image Source: Krishi Jagran

ಈ ನಿಯಮ ಇದೆ

ಈ ಯೋಜನೆಯನ್ನು ಮಾಡುದಾದ್ರೆ ವಿಮೆ ಮಾಡಿಸುವ ಮಗುವಿನ ತಂದೆಯ ವಯಸ್ಸು 18 ಮತ್ತು 50ರ ಒಳಗೆ ಇರಬೇಕಾಗುತ್ತದೆ. ಹೆಣ್ಣುಮಗುವಿಗೆ ಕನಿಷ್ಟ ಒಂದು ವರ್ಷ ಆಗಿರಬೇಕು. ಇನ್ನು ಈ ಯೋಜನೆಗೆ ತಂದೆಯ ಮತ್ತು ಮಗುವಿನ ಆಧಾರ್ ಕಾರ್ಡ್ ಪ್ರತಿ, ಆದಾಯ ಪ್ರಮಾಣ ಪತ್ರ, ವಿಳಾಸ ಪ್ರಮಾಣ ಪತ್ರ, ಮಗುವಿನ ಜನನ ಪ್ರಮಾಣ ಪತ್ರ, ಪೋಟೋ ಇತ್ಯಾದಿ ದಾಖಲೆ ನೀಡಬೇಕು.

advertisement

Leave A Reply

Your email address will not be published.