Karnataka Times
Trending Stories, Viral News, Gossips & Everything in Kannada

LIC Aam Aadmi Bima Yojana: ಎಲ್ಐಸಿ ಯೋಜನೆಯಲ್ಲಿ ಕೇವಲ ನೂರು ರೂಪಾಯಿ ಹೂಡಿಕೆ ಮಾಡಿದರೆ, ಪಡೆಯಬಹುದು 75,000 ಆದಾಯ!

advertisement

ಇವತ್ತಿನ ದುಬಾರಿ ದುನಿಯಾದಲ್ಲಿ ಯಾವುದೇ ಕನಸನ್ನು ನನಸಾಗಿಸಿ ಕೊಳ್ಳುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಕನಸು ಕಾಣಲು ಹಣ ಬೇಡ ಆದರೆ ಅದನ್ನ ಮನಸ್ಸು ಮಾಡಿಕೊಳ್ಳಲು ಲಕ್ಷ ಹಣ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕನಸನ್ನು ಕನಸಾಗಿಯೇ ಇಡುವುದಕ್ಕಿಂತ ಅದನ್ನು ಈಡೇರಿಸಿಕೊಳ್ಳುವುದಕ್ಕೆ ಏನು ಮಾಡಬೇಕು ಎಂಬುದನ್ನು ಮೊದಲು ಯೋಚಿಸಬೇಕು.

ಉದಾಹರಣೆಗೆ ನಾವು ತಿಂಗಳು ಎಷ್ಟೇ ಹಣ ಗಳಿಸಿದರು ಕೂಡ ಅದರಲ್ಲಿ ಸ್ವಲ್ಪ ಭಾಗವನ್ನು ಹೂಡಿಕೆ ಮಾಡಿ ಅಥವಾ ಉಳಿತಾಯ ಮಾಡಲು ಪ್ರಯತ್ನಿಸಬೇಕು. ಇದಕ್ಕಾಗಿ ನೀವು LIC ವಿಶೇಷ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ. ಯಾಕೆಂದರೆ ಕೇವಲ 100 ರೂಪಾಯಿಗಳಿಂದ ಹೂಡಿಕೆ ಆರಂಭಿಸಿದರೆ ಅತ್ಯುತ್ತಮವಾದ ಲಾಭವನ್ನು ಪಡೆದುಕೊಳ್ಳುವಂತಹ ಯೋಜನೆ ಎಲ್ಐಸಿಯಲ್ಲಿ ಲಭ್ಯವಿದೆ.

LIC Aam Aadmi Bima Yojana:

 

 

advertisement

LIC ಸರ್ಕಾರಿ ನೇತೃತ್ವದ ಕಂಪನಿ ಆಗಿದ್ದು ಇದರಲ್ಲಿ ಹೂಡಿಕೆ ಮಾಡಿದರೆ ಯಾವುದೇ ರೀತಿಯ ಮಾರುಕಟ್ಟೆ ಅಪಾಯದ ಭಯ ಇರುವುದಿಲ್ಲ. ಇದೀಗ ಭೂರಹಿತ ಕುಟುಂಬದವರು ಆಮ್ ಆದ್ಮಿ ಬೀಮಾ ಯೋಜನೆ (LIC Aam Aadmi Bima Yojana) ಯಲ್ಲಿ ಹೂಡಿಕೆ ಮಾಡಿ ಉತ್ತಮ ಲಾಭ ಪಡೆದುಕೊಳ್ಳಬಹುದು.

ನೀವು ಕೇವಲ ನೂರು ರೂಪಾಯಿಗಳಿಂದ ಹೂಡಿಕೆ ಆರಂಭಿಸಬಹುದು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 50% ನಷ್ಟು ಆದಾಯದ ಮೊತ್ತವನ್ನು ಸರ್ಕಾರವೇ ಕೊಡುತ್ತದೆ. ಯೋಜನೆಯ ಹೂಡಿಕೆಯ ಮೊತ್ತ ಒಟ್ಟು 200 ರೂಪಾಯಿಗಳಾಗಿದ್ದರೆ ನೂರು ರೂಪಾಯಿಯನ್ನು ನೀವು ಪಾವತಿಸಬೇಕು ಹಾಗೂ ನಿಮ್ಮ ಪರವಾಗಿ ಮತ್ತೆ ನೂರು ರೂಪಾಯಿಗಳನ್ನು ಸರ್ಕಾರವೇ ಹೂಡಿಕೆ ಮಾಡುತ್ತದೆ.

ಎಷ್ಟು ರಿಟರ್ನ್ ಸಿಗುತ್ತದೆ?

ಈ LIC Aam Aadmi Bima Yojana ಯ ಅಡಿಯಲ್ಲಿ ಭೂ ರಹಿತ ಕುಟುಂಬದ 18 ವರ್ಷದಿಂದ 59 ವರ್ಷ ವಯಸ್ಸಿನ ನಡುವೆ ಇರುವ ಜನರು ಹೂಡಿಕೆ ಮಾಡಬಹುದು. ಯೋಜನೆ ಮುಗಿದ ನಂತರ ಮುಕ್ತಾಯದ ಅವಧಿಯಲ್ಲಿ 75,000 ರಿಟರ್ನ್ ಪಡೆಯಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಹೂಡಿಕೆದಾರನ ಮರಣದ ನಂತರ ನಾಮಿನಿಗೆ 35 ಸಾವಿರ ರೂಪಾಯಿಗಳು ಸಿಗುತ್ತವೆ.

advertisement

Leave A Reply

Your email address will not be published.