Karnataka Times
Trending Stories, Viral News, Gossips & Everything in Kannada

LIC Jeevan Umang Policy: ಜೀವನದುದ್ದಕ್ಕೂ 40,000 ರೂ ನೀಡಬಲ್ಲ ಎಲ್ಐಸಿಯ ಹೊಸ ಪಾಲಿಸಿ ಯಲ್ಲಿ ಹೂಡಿಕೆ ಮಾಡುವುದು ಹೇಗೆ ಗೊತ್ತಾ?

advertisement

ಭಾರತೀಯ ಜೀವ ವಿಮಾ ಕಂಪನಿ, ಎಲ್ಐಸಿ ದೇಶದಲ್ಲಿ ವಾಸಿಸುವ ಪ್ರತಿಯೊಂದು ವರ್ಗಕ್ಕೂ ಅನುಕೂಲವಾಗುವಂತಹ ಸಾಕಷ್ಟು ಪಾಲಿಸಿಗಳನ್ನು ಪರಿಚಯಿಸಿದೆ. ಉಳಿತಾಯ ಯೋಜನೆಗಳಿರಬಹುದು ಅಥವಾ ಲೈಫ್ ಇನ್ಸೂರೆನ್ಸ್ ಇರಬಹುದು. LIC ಯಲ್ಲಿ ನೀವು ಅತಿ ಕಡಿಮೆ ಮೊತ್ತದಿಂದ ಅತಿ ಹೆಚ್ಚಿನ ಮೊತ್ತದವರೆಗೆ ಹೂಡಿಕೆ ಮಾಡಬಹುದು. ಇದೀಗ LIC ಜೀವಮಾನದುದ್ದಕ್ಕೂ 40,000ಗಳನ್ನು ನೀಡಬಲ್ಲ ಹೊಸದೊಂದು ಪಾಲಿಸಿ ಪರಿಚಯಿಸಿದ್ದು ಇದರ ಬಗ್ಗೆ ಇಲ್ಲಿದೆ ಮಾಹಿತಿ.

LIC Jeevan Umang Policy:

ಭವಿಷ್ಯದ ದೃಷ್ಟಿಯಿಂದ ಆರ್ಥಿಕವಾಗಿ ಸಬಲರಾಗಲು ನೀವು ಯೋಚಿಸುತ್ತಿದ್ದರೆ, ಜೀವನ ಉಮಂಗ್ ಪಾಲಿಸಿ (LIC Jeevan Umang Policy) ಬೆಸ್ಟ್ ಆಯ್ಕೆ ಆಗಿದೆ. ಇದಕ್ಕಾಗಿ ನೀವು ಕೇವಲ 41 ರೂಪಾಯಿಗಳನ್ನು ಪ್ರತಿದಿನ ಉಳಿತಾಯ ಮಾಡಿದ್ರೆ ಸಾಕು.

LIC Jeevan Umang Insurance Scheme:

 

advertisement

 

15ನೇ ವಯಸ್ಸಿನಲ್ಲಿ ಹೂಡಿಕೆ ಮಾಡಬಹುದು 40 ವರ್ಷಗಳ ವರೆಗೆ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. 15ನೇ ವರ್ಷದಲ್ಲಿ 5 ಲಕ್ಷ ರೂಪಾಯಿಗಳ ವಿಮಾ ಪಾಲಿಸಿ ಮಾಡಿಸಿದರೆ ವಾರ್ಷಿಕವಾಗಿ 15,298 ಪ್ರೀಮಿಯಂ ಪಾವತಿಸಬೇಕು.

ಎಲ್ಐಸಿ ಜೀವನ್ ಉಮಂಗ್ ಪಾಲಿಸಿ (LIC Jeevan Umang Policy) ಯಲ್ಲಿ ಹೂಡಿಕೆ ಮಾಡಿದರೆ ತ್ರೈಮಾಸಿಕ ಅರ್ಥ ವಾರ್ಷಿಕ ಹಾಗೂ ವಾರ್ಷಿಕ ಕಂತುಗಳನ್ನ ನೀವು ಆಯ್ದುಕೊಳ್ಳಬಹುದು. ಯೋಜನೆಯಲ್ಲಿ ದಿನಕ್ಕೆ ಕನಿಷ್ಠ 41 ರೂಪಾಯಿಗಳನ್ನು ನೀವು ಉಳಿಸಬೇಕು ನಿಮ್ಮ ಪ್ರೀಮಿಯಂ ಪಾವತಿ ಮಾಡುವ ಮೊತ್ತ ಹೆಚ್ಚಾದರೆ ನಿಮಗೆ ಸಿಗುವ ಲಾಭವು ಹೆಚ್ಚು ಅಂದರೆ ಪಾಲಿಸಿ ಮುಕ್ತಾಯದ ಸಮಯದಲ್ಲಿ ಅತಿ ಹೆಚ್ಚು ಆದಾಯ ಪಡೆಯುತ್ತೀರಿ.

ಈ ವಿಷಯ ಗಮನದಲ್ಲಿರಲಿ:

ನೀವು ಜೀವನ್ ಉಮಂಗ್ ವಿಮಾ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ವಯಸ್ಸಿನ ಮಿತಿ ಇಲ್ಲ. ಮಗು ಹುಟ್ಟಿದ ತಕ್ಷಣ ಆ ಮಗುವಿನ ಹೆಸರಿನಲ್ಲಿಯೂ ಕೂಡ ಪಾಲಕರು ಪಾಲಿಸಿ ಆರಂಭಿಸಬಹುದು. ಪಾಲಿಸಿಯಲ್ಲಿ ಹೂಡಿಕೆ ಮಾಡಲು ಗರಿಷ್ಠ 40 ವರ್ಷ ವಯಸ್ಸು. ವರ್ಷ ಮೇಲ್ಪಟ್ಟವರು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ. ಇನ್ನು ಜೀವನ್ ಉಮಂಗ್ ವಿಮಾ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಒಬ್ಬ ವ್ಯಕ್ತಿ ಕನಿಷ್ಠ ಎರಡು ಲಕ್ಷ ರೂಪಾಯಿಗಳ ವಿಮೆ ಪಾಲಿಸಿ ಮಾಡಿಸಬೇಕು. ಈ ಮೊತ್ತವನ್ನು ಹೆಚ್ಚಿಸಿಕೊಳ್ಳಬಹುದು. ನೀವು ವಿಮಾ ಮೊತ್ತವನ್ನು ಹೆಚ್ಚಿಸಿದರೆ ಪ್ರೀಮಿಯಂ ಪಾವತಿ ಮಾಡುವ ಮೊತ್ತವು ಹೆಚ್ಚಾಗುತ್ತದೆ ಎಂಬುದು ನೆನಪಿರಲಿ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಎಲ್ಐಸಿ ಕಚೇರಿ ಅಥವಾ ಎಲ್ಐಸಿ ಏಜೆಂಟ್ ರನ್ನು ಸಂಪರ್ಕಿಸಿ.

advertisement

Leave A Reply

Your email address will not be published.