Karnataka Times
Trending Stories, Viral News, Gossips & Everything in Kannada

LIC Kanyadan Policy: ಹೆಣ್ಣು ಮಕ್ಕಳಿಗಾಗಿ LIC ಯಿಂದ ಈ‌ ಪಾಲಿಸಿ, ದಿನಕ್ಕೆ ರೂ.151 ಪಾವತಿ ಮಾಡಿದ್ರೆ 31 ಲಕ್ಷ ರೂ. ಪಡೆಯಬಹುದು.

advertisement

ಹೆಣ್ಣು ಮಕ್ಕಳ ಶಿಕ್ಷಣ, ಉದ್ಯೋಗ, ಅಭಿವೃದ್ದಿ ಗಾಗಿ ಸರಕಾರ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಅದೇ ರೀತಿ ಹೆಣ್ಣು ಮಗಳ ಭವಿಷ್ಯದ ಹೂಡಿಕೆಗಾಗಿ ಉತ್ತಮ ಯೋಜನೆಯೊಂದನ್ನು ಎಲ್ ಐ ಸಿ ಜಾರಿಗೆ ತಂದಿದೆ. ಇಲ್ಲಿ ನೀವು ಕನಿಷ್ಟ ಮೊತ್ತದ ಹಣವನ್ನು ಹೂಡಿಕೆ ಮಾಡುವ ಮೂಲಕ ಹೆಚ್ಚಿನ ‌ಲಾಭ ಗಳಿಸಬಹುದಾಗಿದೆ‌. ಇಲ್ಲಿ ನೀವು ಪ್ರತಿದಿನ ಒಂದಿಷ್ಟು ಮೊತ್ತವನ್ನ ಠೇವಣಿ ಇಡುವುದರಿಂದ ಮದುವೆಯ ಖರ್ಚು ವೆಚ್ಚಗಳಿಗೆ, ಶಿಕ್ಷಣಕ್ಕೆ ಸಹಾಯವಾಗಬಹುದು.

LIC Kanyadan Policy:

 

 

ಹೆಣ್ಣು ಮಕ್ಕಳಿಗಾಗಿ ಹೂಡಿಕೆ ಮಾಡುವ ಯೋಜನೆ ಇದಾಗಿದ್ದು ಈ LIC Kanyadan Policy ಯ ಅವಧಿ 13 ವರ್ಷಗಳಿಂದ 25 ವರ್ಷಗಳವರೆಗೆ ಇರಲಿದೆ. ಹೆಣ್ಣು ಮಗು ಹುಟ್ಟಿದ ಒಂದರಿಂದ ಎರಡು ವರ್ಷದೊಳಗೆ ಎಲ್ ಐಸಿ ಕನ್ಯಾದಾನ ಪಾಲಿಸಿ (LIC Kanyadan Policy) ಯನ್ನು ಆರಂಭಿಸಬಹುದಾಗಿದ್ದು ಕನಿಷ್ಠ ‌ಮೊತ್ತವಾದರೂ‌ ಹೂಡಿಕೆ ಮಾಡಬಹುದಾಗಿದೆ. ಈ ವಿಮೆಯನ್ನು ಮಾಡಿಸುವ ಮಗುವಿನ ತಂದೆಯ ವಯಸ್ಸು 18 ಮತ್ತು 50ರ ನಡುವೆ ಇರಬೇಕಾಗಿದ್ದು. ಪುತ್ರಿಗೆ ಕನಿಷ್ಟ ಒಂದು ವರ್ಷ ಆಗಿರಬೇಕು.

ಉಪಯೋಗವೇನು?

advertisement

ತಿಂಗಳಿಗೆ, ಮೂರು ತಿಂಗಳಿಗೆ, ಆರು ತಿಂಗಳಿಗೆ ಅಥವಾ ವರ್ಷಕ್ಕೆ ಒಮ್ಮೆ ಪ್ರೀಮಿಯಮ್ ಕಟ್ಟುವ ಅವಕಾಶ ಇದರಲ್ಲಿ ಇದ್ದು‌ಈ ಪಾಲಿಸಿಯ ಯಾವುದೇ ಮೊತ್ತಕ್ಕೂ ತೆರಿಗೆ ಭರಿಸುವುದಿಲ್ಲ. ಅದೇ ರೀತಿ ಪಾಲಿಸಿಯ ಫಲಾನುಭವಿ ಅಪಘಾತದಲ್ಲಿ ಮೃತಪಟ್ಟರೆ ಕುಟುಂಬ ಸದಸ್ಯರಿಗೆ 10 ಲಕ್ಷ ರೂ ಪರಿಹಾರ ಕೂಡ ಸಿಗುತ್ತದೆ. ಈ ಪಾಲಿಸಿಯನ್ನು ನೀವು ಮಾಡುದಾದರೆ ಹತ್ತಿರದ ಶಾಖೆಯಲ್ಲಿ ಮಾಡಿಸಬಹುದು‌‌

ಈ ದಾಖಲೆಗಳು ಬೇಕು

  • Birth Certificate
  • Aadhaar Card,
  • PAN Card
  • Aadhaar Card of Parents
  • Photo
  • Bank Pass Book

ಇಷ್ಟು ಮೊತ್ತ ಪಡೆಯಬಹುದು

ಕನ್ಯಾದಾನ ಪಾಲಿಸಿಯ (LIC Kanyadan Policy) ಮೂಲಕ ನೀವು ದಿನಕ್ಕೆ ರೂ.151 ಪಾವತಿ ಮಾಡಿದ್ರೆ ರೂ.4530 ಆಗಲಿದೆ. 25 ವರ್ಷ ಪೂರೈಸಿದ ನಂತರ ನೀವು 31 ಲಕ್ಷ ರೂ. ಪಡೆಯಬಹುದು. ಈ ಹಣವನ್ನು ‌ನೀವು ನಿಮ್ಮ ಮಗಳ ಮುಂದಿನ ವ್ಯಾಸಂಗಕ್ಕೆ ಅಥವಾ ಮದುವೆಗೆ ಬಳಸಬಹುದು.

advertisement

Leave A Reply

Your email address will not be published.